ಬ್ರೇಕಿಂಗ್ ನ್ಯೂಸ್
22-02-23 02:31 pm Mangalore Correspondent ಕರಾವಳಿ
ಮಂಗಳೂರು, ಫೆ.21 : ನಾರಾಯಣ ಗುರು ಹೆಸರಲ್ಲಿ ಬಿಲ್ಲವರನ್ನು ಒಡೆಯಲು ಷಡ್ಯಂತ್ರ ನಡೆಸುತ್ತಿದ್ದಾರೆ, ಆಮೂಲಕ ಕಾಂಗ್ರೆಸ್ ಟಿಕೆಟ್ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. ಯಾರು ಕೂಡ ನಾರಾಯಣ ಗುರು ಹೆಸರಲ್ಲಿ ರಾಜಕೀಯ ಮಾಡಬೇಡಿ. ಅವರು ಒಂದು ಜಾತಿಗೆ ಸೀಮಿತರಲ್ಲ. ನೀವು ಯಾವ ಪಕ್ಷದಲ್ಲಿ ಬೇಕಾದರೂ ಸ್ಪರ್ಧೆ ಮಾಡಿ ಎಂದು ಕಿಯೋನಿಕ್ಸ್ ಅಧ್ಯಕ್ಷ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಈ ಹಿಂದೆ ಯಾವ ಸರಕಾರ ಇದ್ದಾಗಲೂ ನಾರಾಯಣ ಗುರು ಅಭಿವೃದ್ಧಿ ನಿಗಮ ಮಾಡಿಲ್ಲ. ನಮ್ಮ ಬಿಜೆಪಿ ಸರಕಾರ ಈ ಕೆಲಸ ಮಾಡಿದೆ. ಅದಕ್ಕಾಗಿ ಅಭಿನಂದಿಸುತ್ತೇನೆ. ಆದರೆ ತಮ್ಮದೇ ಹೋರಾಟದಿಂದ ನಿಗಮ ಆಯ್ತು ಎನ್ನುವ ಇವರ ಮಾತನ್ನು ಒಪ್ಪುವುದಿಲ್ಲ. ಆರು ತಿಂಗಳ ಹಿಂದೆಯೇ ಈ ಬಗ್ಗೆ ಪ್ರಕ್ರಿಯೆ ಆಗಿತ್ತು. ಇದಕ್ಕೆ ಬಿಲ್ಲವ, ಈಡಿಗ ಮುಖಂಡರಾದ ವೇದಕುಮಾರ್, ನವೀನ್ ಸುವರ್ಣ, ಪ್ರಣವಾನಂದ ಸ್ವಾಮೀಜಿ ಸೇರಿ ಹಲವರು ಕೆಲಸ ಮಾಡಿದ್ದಾರೆ, ಸಚಿವರಾದ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ ಅವರೂ ಒತ್ತಡ ಹೇರಿದ್ದಾರೆ. ಈಗ ನಾರಾಯಣ ಗುರು ನಿಗಮ ಮಾಡಿದ್ದು ಯಾವುದೇ ರಾಜಕೀಯ ಕಾರಣಕ್ಕೆ ಅಲ್ಲ ಎಂದರು.
ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇದ್ದಾಗ ಆರ್ಯ ಈಡಿಗ ವಿಭಾಗದ ಮುಖಂಡ ಜೆಪಿ ನಾರಾಯಣ ಸ್ವಾಮಿ ಭಾರೀ ಪ್ರಯತ್ನ ಮಾಡಿದ್ದರು. ಅದರೂ ಅವರಿಗೆ ಆಪ್ತರಾಗಿದ್ದ ಸಿದ್ದರಾಮಯ್ಯ ನಿಗಮಕ್ಕೆ ಒಪ್ಪಿಗೆ ನೀಡಿಲ್ಲ ಎಂದ ಹರಿಕೃಷ್ಣ ಬಂಟ್ವಾಳ್, ಈಗ ನಿಗಮ ಘೋಷಣೆ ಮಾಡಿದವರಿಗೆ ಅನುದಾನ ಕೊಡಲು ತಾಕತ್ತು ಇಲ್ಲವೇ? ಅನುದಾನ ಕೊಟ್ಟಿಲ್ಲ ಎಂದು ಗುಲ್ಲೆಬ್ಬಿಸುವುದು ಯಾಕೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ನಾರಾಯಣ ಗುರು ವಸತಿ ಶಾಲೆಯನ್ನು ಆರಂಭಿಸಿದ್ದು ಬಿಜೆಪಿ ಸರಕಾರ ಬಂದ ಬಳಿಕವೇ. ಉಡುಪಿಯಲ್ಲಿ ಕೋಟಿ ಚೆನ್ನಯ ಸೈನಿಕ ತರಬೇತಿ ಶಾಲೆ ಮಾಡಿದ್ದೂ ಬಿಜೆಪಿ ಸರಕಾರವೇ.. ಪುತ್ತೂರಿನಲ್ಲಿ ಕೋಟಿ ಚೆನ್ನಯ ಎಂದು ಬಸ್ ನಿಲ್ದಾಣಕ್ಕೆ ಹೆಸರಿಟ್ಟಿದ್ದೂ ಬಿಜೆಪಿ ಸರಕಾರದಲ್ಲಿಯೇ. ಮಂಗಳೂರಿನಲ್ಲಿ ಲೇಡಿಹಿಲ್ ಸರ್ಕಲ್ ಗೆ ನಾರಾಯಣ ಗುರು ಹೆಸರು ಮಾಡಿದ್ದೂ ನಾವೇ. ಕಾಂಗ್ರೆಸ್ ಸರಕಾರ ಇದ್ದಾಗ ಮಾಡಿದ್ದಾರೆಯೇ ಎಂದು ಕೇಳಿದರು.
ಬಿಲ್ಲವರನ್ನು ಎತ್ತಿಕಟ್ಟುವ ಇಂತಹ ಚಟುವಟಿಕೆಯಿಂದಾಗಿ ಬಿಲ್ಲವರ ಬೆಕ್ಕಿನ ಬಿಡಾರ ಬೇರೆಯೇ ಎಂದು ಕೆಲವರು ಕೇಳುತ್ತಿದ್ದಾರೆ. ಕಡಲಾಯ (ಮೊಗವೀರ), ಮಡಲಾಯ(ಬಿಲ್ಲವ), ಒಕ್ಕೆಲ್ಲಾಯ(ಬಂಟ) ಒಂದೇ ಬಳ್ಳಿಯಿಂದ ಬಂದವುಗಳು ಎನ್ನುವುದು ಈ ನಾಡಿನ ಇತಿಹಾಸ. ಜಾತಿ ಹೆಸರಲ್ಲಿ ಸಮಾಜವನ್ನು ಎತ್ತಿಕಟ್ಟುವ ಬದಲು ರಾಷ್ಟ್ರೀಯ ಚಿಂತನೆಯಿಂದ ನಾಡು ಕಟ್ಟಬೇಕು. ಇವರೇನು ಜನಾರ್ದನ ಪೂಜಾರಿಗಿಂತ ದೊಡ್ಡ ಬಿಲ್ಲವರೇ.. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿತರು ಬಿಲ್ಲವರನ್ನು ತುಂಡು ಮಾಡಲು ಯತ್ನಿಸುತ್ತಿದ್ದಾರೆ ಎಂದು ಪದ್ಮರಾಜ್ ಹೆಸರೆತ್ತದೆ ಟೀಕೆ ಮಾಡಿದರು. ಯಾರು ಆ ವ್ಯಕ್ತಿ ಎಂದು ಕೇಳಿದ್ದಕ್ಕೆ ಪದ್ಮರಾಜ್ ಎಂದು ಹೇಳಿದರು. ಬಂಟ್ವಾಳ, ಮಂಗಳೂರು ದಕ್ಷಿಣ, ಮಂಗಳೂರು ಉತ್ತರದಲ್ಲಿ ಟಿಕೆಟ್ ಪಡೆಯಲು ಯತ್ನಿಸುತ್ತಿದ್ದಾರೆ. ರಾಜಕೀಯ ಮಾಡಲಿ, ಆದರೆ ಅದಕ್ಕಾಗಿ ಸಮಾಜ ಒಡೆಯಬಾರದು. ಇವರದೆಲ್ಲ ಚುನಾವಣೆ ಸ್ಟಂಟ್, ಚುನಾವಣೆ ನಂತರ ಎಲ್ಲ ಬಂದ್ ಆಗುತ್ತದೆ ಎಂದರು.
ಸಚಿವ ಅಶ್ವತ್ಥ ನಾರಾಯಣ ತನ್ನ ಹೇಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರೂ ಪದೇ ಪದೇ ಪ್ರಸ್ತಾಪಿಸುತ್ತಿರುವ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ ಹರಿಕೃಷ್ಣ , ಸದನದಲ್ಲಿ ತಾಕತ್ತಿದ್ದರೆ, ದಮ್ ಇದ್ದರೆ ಹೊಡೆದಾಕಿ ಎಂದು ಹೇಳುತ್ತಿದ್ದಾರೆ. ಈ ಹಿಂದೆ ದೇಶದಲ್ಲಿ ಹಿಂದುಳಿದವರು, ದಲಿತರು ಉದ್ಧಾರ ಆಗಬೇಕಿದ್ದರೆ, ಪ್ರಧಾನಿ ಮೋದಿಯನ್ನು ಹತ್ಯೆ ಮಾಡಬೇಕು ಎಂದು ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ರಾಜಪಟೇಲ್ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ನಾಯಕರು ಆ ಹೇಳಿಕೆಯನ್ನು ಖಂಡಿಸಿದ್ದಾರೆಯೇ ಎಂದು ಪ್ರಶ್ನಿಸಿದರು. ಅಲ್ಲಿ ಆ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಾಗಿತ್ತು ಎಂದರು. ಇಲ್ಲಿ ಎಫ್ಐಆರ್ ದಾಖಲು ಮಾಡಿಲ್ಲ ಎಂದಿದ್ದಕ್ಕೆ, ಅಶ್ವತ್ಥ ನಾರಾಯಣ ಆ ಉದ್ದೇಶದಿಂದ ಹೇಳಿಕೆ ನೀಡಿಲ್ಲ. ಕಾಂಗ್ರೆಸ್ ಸೋಲಿಸುವ ಉದ್ದೇಶದಿಂದ ಹೇಳಿಕೆ ನೀಡಿದ್ದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ ಎಂದರು. ಸುದ್ದಿಗೋಷ್ಟಿಯಲ್ಲಿ ರಣದೀಪ್ ಕಾಂಚನ್, ರಾಧಾಕೃಷ್ಣ, ಗಣೇಶ ಹೊಸಬೆಟ್ಟು, ಸಂದೇಶ್ ಶೆಟ್ಟಿ ಇದ್ದರು.
A conspiracy is being hatched to break the Billavas in the name of Narayana Guru, thereby trying to get a Congress ticket. No one should do politics in the name of Narayana Guru. They are not confined to one caste. You can contest from any party you want," said Harikrishna Bantwal, president of KEONICS and bjp district vice-president.
27-08-25 06:21 pm
Bangalore Correspondent
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
ದಸರಾ ಉದ್ಘಾಟಕರ ಆಯ್ಕೆ ವಿವಾದ ; ನೀವು ನಂಬಿರುವ ನಿಮ್...
27-08-25 03:17 pm
Kannada Anchor Anushree, Marriage, Mangalore:...
27-08-25 02:51 pm
ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು, ಮುಸ್ಲಿಮರ...
27-08-25 12:33 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
27-08-25 09:19 pm
Mangalore Correspondent
Praveen Nettaru, NIA, Mangalore: ಪ್ರವೀಣ್ ನೆಟ್...
27-08-25 08:46 pm
Pastor John Shamine, BJP, Fake Human Rights:...
26-08-25 10:57 pm
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm