ಬ್ರೇಕಿಂಗ್ ನ್ಯೂಸ್
18-02-23 02:30 pm Mangalore Correspondent ಕರಾವಳಿ
ಮಂಗಳೂರು, ಫೆ.18: ಮೂರು ಬಿಜೆಪಿ ಶಾಸಕರು ಇರುವ ಕೊಡಗು ಜಿಲ್ಲೆಗೆ ನೂರು ಕೋಟಿ ವಿಶೇಷ ಅನುದಾನ ನೀಡಲಾಗಿದೆ. ಆದರೆ ಕರಾವಳಿಯಲ್ಲಿ 12 ಬಿಜೆಪಿ ಶಾಸಕರಿದ್ದರೂ ಯಾವುದೇ ಅನುದಾನ ತರಲಿಲ್ಲ. ಕರಾವಳಿ ಜನರಿಗೆ ಇವರು ಮೋಸ ಮಾಡಿದ್ದಾರೆ. ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮಾತನ್ನು ಕೇಳಿರಬೇಕು. ಕರಾವಳಿಗೆ ಲವ್ ಜಿಹಾದ್ ಸಾಕು, ಅಭಿವೃದ್ಧಿ ಬೇಡ ಎಂಬ ವಿಚಾರ ಸಿಎಂ ಕಿವಿಗೆ ಬಿದ್ದಿರಬೇಕು. ಹೀಗಾಗಿ ಈ ಭಾಗಕ್ಕೆ ಅನುದಾನವನ್ನೇ ಕೊಟ್ಟಿಲ್ಲ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಯುಟಿ ಖಾದರ್ ವ್ಯಂಗ್ಯವಾಡಿದ್ದಾರೆ.

ಅಭಿವೃದ್ಧಿ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಮೋಸ ಮಾಡಲಾಗಿದೆ. ಮೀನುಗಾರರನ್ನೂ ಮೋಸ ಮಾಡುತ್ತಿದ್ದಾರೆ. ರಸ್ತೆ, ಶೈಕ್ಷಣಿಕ, ಪಶು ಸಂಗೋಪನೆ ವಿಚಾರದಲ್ಲಿ ಜಿಲ್ಲೆಗೆ ಮೋಸ ಮಾಡಲಾಗಿದೆ. ಪಶು ಸಂಗೋಪನೆಯ ಆಂಬುಲೆನ್ಸ್ ಡ್ರೈವರ್ ಗಳನ್ನು ಇನ್ನೂ ನೇಮಕ ಮಾಡಿಲ್ಲ. ರಾಜ್ಯದ ಜನರಿಗೆ ಪ್ರಯೋಜನ ಇಲ್ಲದ, ಜನರನ್ನು ಮೂರ್ಖರನ್ನಾಗಿ ಮಾಡುವ ಬಜೆಟ್ ಮಂಡನೆ ಮಾಡಲಾಗಿದೆ.

ಮೀನುಗಾರರಿಗೆ ಕಳೆದ ಸಾಲಿನ ಬಜೆಟ್ ನಲ್ಲಿ ಘೋಷಿಸಿದ ಮನೆಗಳೇ ಇನ್ನೂ ನಿರ್ಮಾಣ ಆಗಿಲ್ಲ. ಸಮುದ್ರ ತೀರದಲ್ಲಿ ಕೊಂಡಿ ರಸ್ತೆ, ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರವನ್ನು ಕೊಟ್ಟಿಲ್ಲ. ಸಬ್ಸಿಡಿ ಸೀಮೆ ಎಣ್ಣೆಯನ್ನೂ ಕೊಟ್ಟಿಲ್ಲ, ಈಗ ಡಿಸೇಲ್ ಬಗ್ಗೆ ಹೇಳುತ್ತಿದ್ದಾರೆ.


ರಾಜ್ಯದ ಜನರಿಗೆ ಸಾಲದ ಹೊರೆ
ರಾಜ್ಯದ ಸಂಸದರ ಮೌನ, ಸರ್ಕಾರದ ಅಸಹಾಯಕತೆ, ಕೇಂದ್ರದ ಮಲತಾಯಿ ಧೋರಣೆಯಿಂದ ರಾಜ್ಯ ಸಾಲದಲ್ಲಿ ಮುಳುಗಿದೆ. ರಾಜ್ಯ ಬಜೆಟ್ ಸುಲಿಗೆ ಮತ್ತು ಸಾಲದ ಬಜೆಟ್ ಆಗಿದೆ. ಕೊನೆಯುಸಿರು ಎಳೆಯುತ್ತಿರುವ ಸರ್ಕಾರ ಯಾವುದೇ ಮಹತ್ವ ಇಲ್ಲದ ಬಜೆಟ್ ಮಂಡಿಸಿದೆ. 1947ರಿಂದ 2018ರ ತನಕ ರಾಜ್ಯ ಸರ್ಕಾರದ ಸಾಲ ಇದ್ದಿದ್ದು 2,42,000 ಕೋಟಿ. 2018 ರಿಂದ 2023 ತನಕದ ನಾಲ್ಕು ವರ್ಷಗಳಲ್ಲಿ ಸರ್ಕಾರ 5,64,814 ಕೋಟಿ ರೂ. ಸಾಲ ತೆಗೆದುಕೊಂಡಿದೆ. ರಾಜ್ಯದ ಜನ ಸಾಲದ ಭಾರವನ್ನು ಹೊರೆಯುವಂತಾಗಿದೆ. ಬಿಜೆಪಿ ಮೂರು ವರ್ಷದಲ್ಲಿ 2,80,000 ಕೋಟಿ ರೂಪಾಯಿ ಸಾಲ ಮಾಡಿದೆ. ಈ ಬಾರಿ 78,000 ಕೋಟಿ ಸಾಲ ಮಾಡೋದಾಗಿ ಹೇಳಿದೆ. ಮೂರು ಲಕ್ಷ ಸಾವಿರ ಕೋಟಿಯ ಬಜೆಟ್ ನಲ್ಲಿ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಯಾವುದೇ ಅಂಶಗಳಿಲ್ಲ. ಇಷ್ಟು ದೊಡ್ಡ ಮೊತ್ತದ ಸಾಲ ಭರಿಸಲು 34 ಸಾವಿರ ಕೋಟಿ ರೂ. ಬಡ್ಡಿಯನ್ನು ಪ್ರತಿ ತಿಂಗಳು ರಾಜ್ಯ ಸರ್ಕಾರ ಕಟ್ಟಬೇಕಾಗಿದೆ. ಜಾತ್ರೋತ್ಸವ ಸಂದರ್ಭದಲ್ಲಿ ಬ್ಯಾಂಡ್ ಹೊಡೆಯುವಂತೆ ಸರ್ಕಾರ ಬಜೆಟ್ ಮಂಡಿಸಿದೆ ಎಂದು ಮೂದಲಿಸಿದರು.
Mangalore UT Khader slams Nalin Kateel over CMs Budget 2023, says DK has got nothing.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 03:30 pm
HK News Staffer
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm