ಬ್ರೇಕಿಂಗ್ ನ್ಯೂಸ್
30-01-23 06:26 pm Mangalore Correspondent ಕರಾವಳಿ
ಮಂಗಳೂರು, ಜ.30: ಯಾರದ್ದೋ ಲಾಭಕ್ಕಾಗಿ, ರಾಜಕೀಯಕ್ಕೋಸ್ಕರ, ಚುನಾವಣೆಗೋಸ್ಕರ ಕೊಲೆ ಪ್ರಕರಣವನ್ನು ಸಮರ್ಥಿಸಿ ನೀಡುವ ಹೇಳಿಕೆಗಳು ಸಮಾಜಕ್ಕೆ ಅಪಾಯಕಾರಿ. ಇಂತಹ ಹೇಳಿಕೆ ನೀಡುವವರೇ ನಿಜವಾದ ದೇಶದ್ರೋಹಿಗಳು. ಈ ರೀತಿ ಹೇಳಿಕೆ ನೀಡುವವರನ್ನು ಜಿಲ್ಲೆಯಿಂದ ಗಡೀಪಾರು ಮಾಡಬೇಕು ಎಂದು ಮಾಜಿ ಸಚಿವ, ಶಾಸಕ ಯುಟಿ ಖಾದರ್ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ವಿಎಚ್ ಪಿ ಮುಖಂಡ ಶರಣ್ ಪಂಪ್ವೆಲ್ ನೀಡಿರುವ ಹೇಳಿಕೆಯ ಬಗ್ಗೆ ಕಿಡಿಕಾರಿದರು. ಯಾರದ್ದೇ ಆಗಲಿ, ಕೊಲೆಯಾಗುವುದನ್ನು ಬಯಸಬಾರದು. ಇಷ್ಟಕ್ಕೂ ಬಿಜೆಪಿಯವರು ಹಿಂದು ಅಥವಾ ಮುಸ್ಲಿಮರ ಕೊಲೆಯಾಗುವುದನ್ನು ಕಾಯುತ್ತಿರುವುದು ಯಾಕೆ.. ಜೀವ ಕಳಕೊಂಡವರ ಕುಟುಂಬದ ನೋವು, ಅವರ ಅಕ್ಕ, ತಂಗಿಯರ, ಹೆತ್ತವರ ನೋವು ಇವರಿಗೆ ಅರ್ಥ ಆಗಿದೆಯೇ.. ಫಾಜಿಲ್ ಕೊಲೆಗೆ ನಾವೇ ಪ್ರೇರಣೆ, ನಮ್ಮದೇ ಹುಡುಗರು ಅಂತ ಹೇಳಿದ್ದಾರೆ. ಹೀಗಾಗಿ ಫಾಜಿಲ್ ಕೊಲೆ ಪ್ರಕರಣವನ್ನು ಸಂಪೂರ್ಣ ಮರು ತನಿಖೆ ಮಾಡಬೇಕು. ಚುನಾವಣೆಗೋಸ್ಕರ, ಮಾಧ್ಯಮದಲ್ಲಿ ಬಿಲ್ಡಪ್ ಕೊಡುವುದಕ್ಕಾಗಿ ಹೇಳಿಕೆ ಕೊಟ್ಟು ಸಮಾಜದಲ್ಲಿ ಭಯ ಮೂಡಿಸುವ ಇಂಥವರನ್ನು ಜಿಲ್ಲೆಯಿಂದ ಗಡೀಪಾರು ಮಾಡಬೇಕು.
ಇವರ ಈ ರೀತಿಯ ಹೇಳಿಕೆಯಿಂದ ಜನರು ಭಯಭೀತರಾಗಿದ್ದಾರೆ, ಇನ್ನೇನಾಗುತ್ತೋ ಅಂತ ಭಯದಲ್ಲಿದ್ದಾರೆ. ಇಂಥವರು ಸಮಾಜಕ್ಕೆ ಭಾರ, ಈ ಜಿಲ್ಲೆಗೂ ಭಾರವಾಗಿದ್ದಾರೆ. ಯಾಕೆ ಇವರನ್ನು ನಮ್ಮ ಸಮಾಜ ಹೊತ್ತುಕೊಳ್ಳಬೇಕು ಎಂದು ಖಾದರ್ ಪ್ರಶ್ನೆ ಮಾಡಿದರು. ಪ್ರವೀಣ್ ನೆಟ್ಟಾರು, ಫಾಜಿಲ್, ಮಸೂದ್ ಸೇರಿದಂತೆ ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಅನುಮಾನಾಸ್ಪದ ನೆಲೆಯಲ್ಲಿ ಆಗಿರುವ ಕೊಲೆ ಪ್ರಕರಣಗಳನ್ನು ಮರು ತನಿಖೆ ನಡೆಸ್ತೀವಿ ಎಂದು ಹೇಳಿದರು.
ಉಳ್ಳಾಲ ಉಗ್ರರ ಸ್ಲೀಪರ್ ಸೆಲ್ ಆಗಿದೆ ಎಂಬ ಆರೋಪದ ಬಗ್ಗೆ, ಆ ಬಗ್ಗೆ ತನಿಖೆ ನಡೆಸಲು ಪೊಲೀಸರಿದ್ದಾರೆ. ಉಗ್ರರು ಇದ್ದಲ್ಲಿ ಪೊಲೀಸರು ಬಂಧನ ಮಾಡುತ್ತಾರೆ, ಅದನ್ನು ಹೇಳೋಕೆ ಇವರು ಯಾರು. ಪೊಲೀಸ್ ಅಧಿಕಾರಿಗಳಿದ್ದಾರೆ, ಕ್ರಮ ಕೈಗೊಳ್ತಾರೆ. ಉಳ್ಳಾಲದ ಜನ ಶಾಂತಿ, ಸೌಹಾರ್ದದಲ್ಲಿ ಇದ್ದಾರೆ. ಅದನ್ನು ಕದಡಿಸುವ ಯತ್ನ ಮಾಡುತ್ತಿದ್ದಾರೆ. ಅಲ್ಲಿನ ಜನ ಕೋಮುವಾದಿ ಶಕ್ತಿಗಳಿಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.
ಕೋವಿಡ್ ಬಂದಾಗ ನೆರವು ನೀಡಿದ್ದಾರೆಯೇ ?
ಉಳ್ಳಾಲದಲ್ಲಿ ಹಿಂದು ಶಾಸಕರಾಗಬೇಕು ಎಂಬ ಶರಣ್ ಪಂಪ್ವೆಲ್ ಆಗ್ರಹದ ಬಗ್ಗೆ ಕೇಳಿದ ಪ್ರಶ್ನೆಗೆ, ಉಳ್ಳಾಲದಲ್ಲಿ ಹಿಂದೆ ಐಎಂ ಜಯರಾಮ ಶೆಟ್ಟಿ ಸೇರಿದಂತೆ ಹಲವರು ಶಾಸಕರಾಗಿದ್ದಾರೆ. ಅಲ್ಲಿನ ಜನರಿಗೆ ಯಾರು ಬೇಕೋ, ಅವರನ್ನು ಆಯ್ಕೆ ಮಾಡುತ್ತಾರೆ. ಇಂಥವರೇ ಆಗಬೇಕೆಂದು ಹೇರಲು ಬರುವುದಿಲ್ಲ. ಇವರು ಯಾರಾದರೂ ಕೋವಿಡ್ ಬಂದಾಗ, ಜನರ ಬಳಿಗೆ ಹೋಗಿದ್ದಾರೆಯೇ.. ಬಡ ಹಿಂದು, ಕ್ರಿಸ್ತಿಯನ್ನರಿಗೆ ನೆರವು ನೀಡಿದ್ದಾರೆಯೇ.. ಅವರ ಮಕ್ಕಳ ಶಿಕ್ಷಣದ ಫೀಸ್ ಕಟ್ಟುವುದು, ಆಸ್ಪತ್ರೆಗೆ ಹೋದವರಿಗೆ ಸಹಾಯ ಮಾಡುವ ಕೆಲಸ ಮಾಡಿದ್ದಾರೆಯೇ.. ಕಷ್ಟದಲ್ಲಿದ್ದಾಗ ಸಹಾಯ ನೀಡಿದವರನ್ನು ಜನರು ಗೆಲ್ಲಿಸುತ್ತಾರೆ. ಜನರು ಮತ ಭೇದ ಮರೆತು ಗೆಲ್ಲಿಸುವುದು ಉಳ್ಳಾಲದ ಜನರ ದೊಡ್ಡ ಗುಣ, ಅದು ಉಳ್ಳಾಲದ ಪಾಲಿನ ಗೌರವ ಎಂದು ಯುಟಿ ಖಾದರ್ ತಿರುಗೇಟು ನೀಡಿದರು
BJP party waits only for murders slams UT Khader in Mangalore after Vhp Sharan Pumpwell made provocative speech.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm