ಬ್ರೇಕಿಂಗ್ ನ್ಯೂಸ್
29-01-23 06:06 pm Mangalore Correspondent ಕರಾವಳಿ
ಮಂಗಳೂರು, ಜ.29: 2022ರ ಒಂದೇ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 62 ಮಂದಿ ಮಕ್ಕಳು ಮನೆ ಬಿಟ್ಟು ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ ಪೈಕಿ 33 ಮಂದಿ ಹೆಣ್ಮಕ್ಕಳಾಗಿದ್ದು ಹೆಚ್ಚಿನ ಪ್ರಕರಣಗಳಲ್ಲಿ ಪ್ರೇಮದ ಸಂಬಂಧವೇ ಮನೆ ಬಿಟ್ಟು ಹೋಗಲು ಪ್ರಮುಖ ಕಾರಣ ಎನ್ನುವುದನ್ನು ಚೈಲ್ಡ್ ವೆಲ್ಫೇರ್ ಕಮಿಟಿ ಪತ್ತೆ ಮಾಡಿದೆ.
ಪೊಲೀಸರು ಮತ್ತು ಚೈಲ್ಡ್ ವೆಲ್ಫೇರ್ ಕಮಿಟಿ ಪ್ರಕಾರ, 16ರಿಂದ 18 ವರ್ಷದ ಒಳಗಿನ ಹದಿಹರೆಯದ ಮಕ್ಕಳು ಮನೆ ಬಿಟ್ಟು ಹೋಗಲು ಪ್ರೇಮ ಸಂಬಂಧವೇ ಪ್ರಮುಖ ಕಾರಣವಂತೆ. ತಾವು ಪ್ರೀತಿಸುತ್ತಿರುವ ಹುಡುಗರ ಜೊತೆಗೆ ಓಡಿ ಹೋಗುವುದು, ಆನಂತರ ಪೊಲೀಸರು ಪತ್ತೆ ಮಾಡುವುದು ಇತ್ಯಾದಿ ನಡೆಯುತ್ತದೆ. ಇದಲ್ಲದೆ, ಶಾಲೆಯ ಒತ್ತಡ, ಹಾಸ್ಟೆಲ್ ಕಿರುಕುಳ, ಮನೆಯಲ್ಲಿ ಶಿಕ್ಷಣದ ಬಗ್ಗೆ ಒತ್ತಡ ಹೇರುವುದು ಇತ್ಯಾದಿ ಅಂಶಗಳೂ ಮಕ್ಕಳ ನಾಪತ್ತೆಗೆ ಕಾರಣವಾಗಿದೆ. 62 ಪ್ರಕರಣಗಳ ಪೈಕಿ 60 ಪ್ರಕರಣ ಪೊಲೀಸರಿಂದ ಟ್ರೇಸ್ ಆಗಿದ್ದು, ಇಬ್ಬರು ಮಕ್ಕಳು ಪತ್ತೆಯಾಗಿಲ್ಲ ಎಂದು ಸಿಡಬ್ಲ್ಯುಸಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ರೆನ್ನಿ ಡಿಸೋಜ ಹೇಳುತ್ತಾರೆ.
ಲವ್ ಹೊರತುಪಡಿಸಿ ಮನೆ ಬಿಟ್ಟು ಹೋಗಲು ಪ್ರಮುಖ ಕಾರಣ ಮನೆಯಲ್ಲಿನ ಒತ್ತಡ. ಮಕ್ಕಳ ಜೊತೆಗೆ ಪೋಷಕರಿಗೆ ಉತ್ತಮ ಸಂಬಂಧ ಇಲ್ಲದಿರುವುದು, ಶಿಕ್ಷಣದ ಬಗ್ಗೆ ಒತ್ತಡ ಹೇರುವುದು, ಮನೆಯಲ್ಲಿ ಮಕ್ಕಳ ಜೊತೆಗೆ ಹೆತ್ತವರು ಕಾಲ ಕಳೆಯದಿರುವುದು ಕೂಡ ಮಕ್ಕಳ ನಾಪತ್ತೆಗೆ ಕಾರಣ. ಮಕ್ಕಳು ಕಲಿಯುವುದರಲ್ಲಿ ಹಿಂದೆ ಬಿದ್ದಲ್ಲಿ ಬೈಯುವುದು, ಶಿಕ್ಷೆ ಕೊಡುವುದು, ಒತ್ತಡ ಹೇರುವುದಕ್ಕೆ ಮಕ್ಕಳು ದಿಢೀರ್ ಮನೆ ಬಿಟ್ಟು ಹೋಗಿರುವುದು ಕಂಡುಬಂದಿದೆ.
ಹಾಸ್ಟೆಲ್ ನಲ್ಲಿ ಓದುವ ವಿದ್ಯಾರ್ಥಿಗಳೂ ನಾಪತ್ತೆಯಾಗಿರುವ ಪ್ರಕರಣಗಳಿವೆ. ಹಾಸ್ಟೆಲ್ ನಲ್ಲಿ ಕಿರುಕುಳ, ಅಲ್ಲಿನ ವಾತಾವರಣದಿಂದ ಬೇಸತ್ತು ಮಕ್ಕಳು ಕಾಣೆಯಾಗುತ್ತಾರೆ. ಕೆಲವೊಮ್ಮೆ ಮಕ್ಕಳು ಅಪಹರಣಗೊಂಡು ಬಾಲ ಕಾರ್ಮಿಕರಾಗುವ ಅಥವಾ ಮಾನವ ಕಳ್ಳ ಸಾಗಾಣಿಕೆಗೆ ಬಳಕೆಯಾಗುವ ಅಪಾಯ ಇರುತ್ತದೆ. ಡ್ರಗ್ಸ್ ಇನ್ನಿತರ ಮಾದಕ ವ್ಯಸನಕ್ಕೊಳಗಾಗುವುದು, ಅಕ್ರಮ ಸಂಬಂಧದ ಕಾರಣ ಗರ್ಭವತಿಯಾಗಿ ಕಾಣೆಯಾಗುವುದು, ಮಾನಸಿಕ ಸಮಸ್ಯೆಗೆ ಒಳಗಾಗಿ ಕಾಣೆಯಾಗುವುದೂ ಇರುತ್ತದೆ ಎನ್ನುತ್ತಾರೆ, ಮಕ್ಕಳ ರಕ್ಷಣಾ ಇಲಾಖೆಯ ಅಧಿಕಾರಿ ಶೈಲಜಾ ಕರಿಗಿ.
According to the information disclosed by the Child Welfare Committee (CWC), 62 children, including 33 girls have disappeared in the year 2022 in Dakshina Kannada. Police have identified 60 of them and two have still not been traced. According to the Juvenile Justice Board and police department, there are several reasons for the children missing. Most of the cases pertaining to children below the age of 18, are of love affairs.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
13-11-25 10:56 pm
HK News Desk
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
13-11-25 10:09 pm
Mangalore Correspondent
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm