ಬ್ರೇಕಿಂಗ್ ನ್ಯೂಸ್
23-01-23 12:38 pm Mangalore Correspondent ಕರಾವಳಿ
ಮಂಗಳೂರು, ಜ.23 : ಒಂದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ಠಾಣೆ ವ್ಯಾಪ್ತಿಯ ಬಾಳ ಗ್ರಾಮದ ಒಟ್ಟೆಕಾಯರ್ ಎಂಬಲ್ಲಿ ನಡೆದಿದೆ.
ದಿವ್ಯಾ(26) ಮೃತ ಯುವತಿ. ಉಳ್ಳಾಲ ಕೋಟೆಕಾರಿನ ಮಾಡೂರು ನಿವಾಸಿ ಚಂದ್ರಶೇಖರ್ ಮತ್ತು ಗಿರಿಜಾ ದಂಪತಿಯ ಪುತ್ರಿ ದಿವ್ಯಾ(26) ಒಂದು ವರ್ಷದ ಹಿಂದೆ ಹರೀಶ್ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ದಿವ್ಯಾ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದರೆ, ಪತಿ ಹರೀಶ್ ಸುರತ್ಕಲ್ ನಲ್ಲಿ ಆಟೋ ಓಡಿಸುತ್ತಿದ್ದರು.
ಜನವರಿ 21ರಂದು ರಾತ್ರಿ ದಿವ್ಯಾ ಮತ್ತು ಪತಿ ಹರೀಶ್ ನೆರೆಮನೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿದ್ದಾಗ ದಂಪತಿ ನಡುವೆ ಮನಸ್ತಾಪ ಉಂಟಾಗಿದ್ದು ಇದರಿಂದ ಬೇಸರಗೊಂಡಿದ್ದ ದಿವ್ಯಾ ರಾತ್ರಿ ಒಬ್ಬಳೇ ಮನೆಗೆ ಹಿಂದಿರುಗಿದ್ದರು. ಹರೀಶ್ ಆಬಳಿಕ ಬರುತ್ತೇನೆಂದು ಅಲ್ಲಿಯೇ ಉಳಿದಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ದಿವ್ಯಾ ಜ.22ರಂದು ಸಂಜೆ ತನ್ನ ಮನೆಯ ಬೆಡ್ ರೂಂನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ತಾಯಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಮನೆಯ ಬೆಡ್ ರೂಮ್ ಕಿಟಕಿಯಲ್ಲಿ ಶಾಲನ್ನು ಕುತ್ತಿಗೆಗೆ ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸುರತ್ಕಲ್ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Mangalore Surathkal, 26 year old married woman commits suicide. The deceased has been identified as Divya. It is said she was married a year ago and was working in a medical shop. Some clash during a function at the neighbours house between husband and wife has resulted in suicide.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 12:19 pm
HK News Staffer
Mangalore Agnes College Protest, ABVP: ಮಂಗಳೂರ...
14-10-26 10:45 pm
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
14-10-26 09:09 pm
Mangaluru Staffer
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm