ಬ್ರೇಕಿಂಗ್ ನ್ಯೂಸ್
18-01-23 11:02 pm Mangalore Correspondent ಕರಾವಳಿ
ಮಂಗಳೂರು, ಜ.18: ಮೀಸಲಾತಿ ನೀಡುವುದು ದೇಶಕ್ಕೆ, ಅಭಿವೃದ್ಧಿಗೆ ಮಾರಕ ಎಂದು ತಿಳಿದಿದ್ದರೂ ರಾಜ್ಯ ಮತ್ತು ಕೇಂದ್ರ ಸರಕಾರಗಳು ಅಧಿಕಾರ ದಾಹದಿಂದ ಅವುಗಳ ತಾಳಕ್ಕೆ ಕುಣಿಯುತ್ತಿವೆ. ಈ ರೀತಿ ಮೀಸಲಾತಿ ನೀಡುತ್ತಾ ಹೋದರೆ ದೇಶದಲ್ಲಿ ಮುಂದೆ ದಂಗೆಯೇಳುವ ಸ್ಥಿತಿ ಬಂದೀತು. ಮೀಸಲಾತಿಗೆ ಹೋರಾಟ ನಡೆಸುವುದನ್ನು ನಾವು ಖಂಡಿಸುತ್ತೇವೆ. ಇದರ ಬಗ್ಗೆ ಜನಾಂದೋಲನ ರೂಪಿಸುತ್ತೇವೆ ಎಂದು ಹಿಂದು ಮಹಾಸಭಾ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಮೂಲ ಸಂವಿಧಾನದಲ್ಲಿ ಯಾವುದೇ ಮೀಸಲಾತಿ ನೀಡುವುದನ್ನು ವಿರೋಧಿಸಲಾಗಿದೆ. ಅಲ್ಲದೆ, ಧರ್ಮಾಧರಿತ ಮೀಸಲಾತಿ ನೀಡಲೇಬಾರದು ಎಂದಿದೆ. ಆದರೆ ನಮ್ಮಲ್ಲಿ ಅಲ್ಪಸಂಖ್ಯಾತ ಹೆಸರಲ್ಲಿ ಧರ್ಮ ಆಧರಿತ ಮೀಸಲಾತಿ ಕಲ್ಪಿಸಲಾಗಿದೆ. ಧರ್ಮಕ್ಕೆ, ಜಾತಿಗೊಂದು ಮೀಸಲಾತಿ ನೀಡುತ್ತಾ ಹೋದರೆ ಸಮರ್ಥ ಯುವಜನತೆ ಅವಕಾಶ ವಂಚಿತರಾಗುತ್ತಾರೆ. ಅಧಿಕಾರ ಲಾಭ ಪಡೆಯಲು ಮೀಸಲಾತಿ ಕೊಡುವುದು, ಒಂದು ವರ್ಗವನ್ನು ಓಲೈಸುವುದು ಎಷ್ಟು ಸರಿ. ಮೀಸಲಾತಿ ಕೊಡುವದರ ಅರ್ಥ ಏನೆಂಬುದನ್ನು ರಾಜಕಾರಣಿಗಳು ಮೊದಲು ತಿಳಿದುಕೊಳ್ಳಬೇಕಿದೆ.

ಮೀಸಲಾತಿ ಹೆಸರಲ್ಲಿ ಒಂದು ಕುಟುಂಬದ ಎಲ್ಲರಿಗೂ ಸರಕಾರಿ ಹುದ್ದೆಗಳಲ್ಲಿ ಅವಕಾಶ ಕೊಡುತ್ತಾ ಹೋದರೆ, ಇತರೇ ಸಮುದಾಯಗಳು ಏನು ಮಾಡಬೇಕು. ಒಮ್ಮೆ ಮೀಸಲಾತಿ ಪಡೆದವರು ಆರ್ಥಿಕ ಸಬಲರಾದರೂ ಮತ್ತೆ ಮತ್ತೆ ತಮ್ಮ ಮಕ್ಕಳಿಗೆಲ್ಲ ಮೀಸಲಾತಿಯಿಂದ ಲಾಭ ಪಡೆಯುತ್ತಾ ಹೋದರೆ ಮೀಸಲಾತಿಗೇನು ಅರ್ಥವಿದೆ. ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿಗಳಾದವರು ಕೂಡ ಒಂದು ಜಾತಿಯ ಪರವಾಗಿ ಮೀಸಲಾತಿಗೆ ಆಗ್ರಹಿಸುತ್ತಿದ್ದಾರೆ. ಈಡಿಗ, ಬಿಲ್ಲವರಿಗಾಗಿ ಒಬ್ಬ ಸ್ವಾಮೀಜಿ, ಪಂಚಮಸಾಲಿ ಪರ ಇನ್ನೊಬ್ಬ ಸ್ವಾಮೀಜಿ ಧ್ವನಿ ಎತ್ತುವುದಾದರೆ ಇವರು ಕಾವಿ ಹಾಕಿ ಹಿಂದು ಸಮಾಜವನ್ನು ಪ್ರತಿನಿಧಿಸುವುದು ಯಾಕೆ ಎಂದು ಧರ್ಮೇಂದ್ರ ಪ್ರಶ್ನೆ ಮಾಡಿದರು.
ಇದಕ್ಕಾಗಿ ಒಂದೋ ಆರ್ಥಿಕ ಮೀಸಲಾತಿಯನ್ನು ಮಾತ್ರ ನೀಡಬೇಕು. ಇಲ್ಲವೇ ಗ್ರಾಮಾಂತರ ಪ್ರದೇಶದವರಿಗೆ ಮೀಸಲಾತಿ ನೀಡಲಿ. ಜಾತಿಗೊಂದು ಮೀಸಲಾತಿ ನೀಡುವುದನ್ನು ವಿರೋಧಿಸಿ ನಾವು ಸಮಾನ ಮನಸ್ಕರು ಪಕ್ಷ ಭೇದ ಮರೆತು ವಿರೋಧಿಸುತ್ತೇವೆ. ಇದಕ್ಕೊಂದು ಎನ್ ಜಿಓ ಸ್ಥಾಪನೆ ಮಾಡುವ ಉದ್ದೇಶ ಇದೆ. ಜಾತ್ಯತೀತ ರಾಷ್ಟ್ರ ಎಂದ ಮೇಲೆ ಜಾತಿಗೇನು ಕೆಲಸವಿದೆ. ಜಾತಿ ಕೇಳಿ ಉದ್ಯೋಗ ಕೊಡುವುದೇ ಅಸಭ್ಯ. ಶಾಲೆ, ಕಾಲೇಜಿನಲ್ಲಿ ಜಾತಿ ಕಾಲಂ ತೆಗೆದು ಹಾಕಬೇಕು ಎಂದು ಧರ್ಮೇಂದ್ರ ಹೇಳಿದರು.
Reservation is a threat to nation slams Hindu Maha saba in Mangalore
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
13-11-25 05:13 pm
HK Staffer
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm