ಬ್ರೇಕಿಂಗ್ ನ್ಯೂಸ್
16-01-23 09:25 pm Mangalore Correspondent ಕರಾವಳಿ
ಮಂಗಳೂರು, ಜ.16 : ವೈಟ್ ಸಿಮೆಂಟ್ ತುಂಬಿದ್ದ ಟ್ರಕ್ ಟಯರ್ ಬ್ಲಾಸ್ಟ್ ಆದ ಪರಿಣಾಮ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಕಮರಿಗೆ ಉರುಳಿ ಬಿದ್ದ ಘಟನೆ ರಾ.ಹೆ. 66 ರ ಜಪ್ಪಿನಮೊಗರಿನಲ್ಲಿ ಇಂದು ಸಂಜೆ ಸಂಭವಿಸಿದೆ. ಲಾರಿಯೊಳಗಡೆ ಸಿಲುಕಿದ್ದ ಚಾಲಕನನ್ನ ಸ್ಥಳೀಯರು ಮತ್ತು ಅಗ್ನಿ ಶಾಮಕದಳದ ಸಿಬ್ಬಂದಿ ಒಂದೂವರೆ ತಾಸು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ತಮಿಳ್ನಾಡು ಮೂಲದ ನಾಗರಾಜ್ ಎಂಬ ಟ್ರಕ್ ಚಾಲಕನನ್ನ ರಕ್ಷಿಸಲಾಗಿದೆ. ಮಂಗಳೂರಿನಿಂದ ಕೇರಳದ ಕಡೆಗೆ ವೈಟ್ ಸಿಮೆಂಟ್ ಹೊತ್ತು ಸಾಗುತ್ತಿದ್ದ ತಮಿಳುನಾಡು ನೋಂದಣಿಯ ಟ್ರಕ್ ಟಯರ್ ಜಪ್ಪಿನಮೊಗರಿನಲ್ಲಿ ಬ್ಲಾಸ್ಟ್ ಆಗಿದೆ. ನಿಯಂತ್ರಣ ತಪ್ಪಿದ ಟ್ರಕ್ ಹೆದ್ದಾರಿ ಬದಿಯ ಕಮರಿಗೆ ಉರುಳಿ ಬಿದ್ದಿದೆ. ಟ್ರಕ್ ನಲ್ಲಿದ್ದ ಕ್ಲೀನರ್ ತಕ್ಷಣ ಹೊರಕ್ಕೆ ಜಿಗಿದು ಅಪಾಯದಿಂದ ಪಾರಾಗಿದ್ದಾನೆ. ಚಾಲಕ ನಾಗರಾಜ್ ಮಾತ್ರ ಟ್ರಕ್ ಒಳಗಡೆ ಸಿಲುಕಿದ್ದು ಆತನ ಮೇಲೆ ಸಿಮೆಂಟ್ ಮೂಟೆಗಳು ರಾಶಿ ಬಿದ್ದಿದ್ದವು. ತಕ್ಷಣ ಸಹಾಯಕ್ಕೆ ಧಾವಿಸಿದ ಸ್ಥಳೀಯರು ಮೂಟೆಗಳನ್ನ ಎತ್ತಿ ಖಾಲಿ ಮಾಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಗ್ಯಾಸ್ ಕಟ್ಟರ್ ಇನ್ನಿತರ ಸಲಕರಣೆಗಳಿಂದ ನಿರಂತರ ಒಂದೂವರೆ ಗಂಟೆ ಕಾರ್ಯಾಚರಣೆ ನಡೆಸಿ ಚಾಲಕನನ್ನ ರಕ್ಷಿಸಿದ್ದಾರೆ. ತಮಿಳು ನಾಡು ಮೂಲದ ಚಾಲಕ ನಾಗರಾಜ್ ಅವರು ಸಣ್ಣ, ಪುಟ್ಟ ಗಾಯಗೊಂಡು ಪವಾಡ ಸದೃಶ ಪಾರಾಗಿದ್ದು , ಚಾಲಕ ಮತ್ತು ಕ್ಲೀನರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಗ್ನಿಶಾಮಕ ದಳ ಮತ್ತು ಸ್ಥಳೀಯರ ರಕ್ಷಣಾ ಕಾರ್ಯ ಸ್ಥಳೀಯರ ಶ್ಲಾಘನೆಗೆ ಪಾತ್ರವಾಯಿತು.
Tyre blast, cement truck falls into huge pit at Jeppinamogaru in Mangalore, driver stuck inside.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
29-08-25 10:56 am
HK News Desk
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm