ಬ್ರೇಕಿಂಗ್ ನ್ಯೂಸ್
05-01-23 11:07 pm Mangalore Correspondent ಕರಾವಳಿ
ಉಳ್ಳಾಲ, ಜ.5 : ಕರಾವಳಿ ಕೋಮುವಾದದ ಲ್ಯಾಬೊರೇಟರಿ ಆಗಿದ್ದು ,ಇಲ್ಲಿ ಯಕ್ಷಗಾನ ಕಲೆಯಲ್ಲೂ ಹಿಂದುತ್ವ ತೂರ್ತಾರೆ. ಬಿಜೆಪಿ, ಆರ್ ಎಸ್ ಎಸ್ ಗೆ ಅದುವೇ ಬಂಡವಾಳವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವಿಧಾನಸಭೆ ಪ್ರತಿ ಪಕ್ಷ ನಾಯಕರಾದ ಸಿದ್ಧರಾಮಯ್ಯ ಹೇಳಿದರು.
ಮಂಗಳೂರು ಹೊರವಲಯದ ಹರೇಕಳ ಗ್ರಾಮದ ಕಡವಿನ ಬಳಿಯಲ್ಲಿ ಇಂದು ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಬೃಹತ್ ಸಾರ್ವಜನಿಕ ಜನಜಾಗೃತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.


ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಓರ್ವ ವಿಧೂಷಕನಂತೆ. ಆತ ಕರಾವಳಿಯ ಗಂಡು ಕಲೆ ಯಕ್ಷಗಾನದಲ್ಲೂ ಹಿಂದುತ್ವ ತೂರಲು ಪಿತೂರಿ ಮಾಡಿದ್ದು ಇಂಥವರು ದೇಶದ ಆಡಳಿತ ನಡೆಸಲು ಲಾಯಕ್ಕಾ ಎಂದು ಪ್ರಶ್ನಿಸಿದರು. ಕೋಮುವಾದ ಹುಟ್ಟೋದೇ ಕರಾವಳಿಯಿಂದ. ಯಾರಿಗೆ ಭಾರತದ ಸಂವಿಧಾನದ ಮೇಲೆ ವಿಶ್ವಾಸ ಇರಲ್ಲ ಅವರು ಜನಪ್ರತಿನಿಧಿಯಾಗಲು ಲಾಯಕ್ಕಲ್ಲ. ಅನಂತ ಕುಮಾರ್ ಹೆಗಡೆ ಸಂವಿಧಾನ ಬದಲಿಸ್ತೇವೆ ಎಂದು ಹೇಳಿದಾಗ ಮೋದಿ, ಅಮಿತ್ ಶಾ ಏನೂ ಕ್ರಮ ಕೈಗೊಂಡಿಲ್ಲ. ಮೋದಿ, ಅಮಿತ್ ಷಾ ಅವರೇ ಇವರ ಬಾಯಲ್ಲಿ ಹೇಳಿಸಿರೋದು ಅನ್ನೋದನ್ನಾ ನಾವು ಅರ್ಥ ಮಾಡಿಕೊಳ್ಳಬೇಕು ಎಂದರು. ಮುಖ್ಯಮಂತ್ರಿ ಅಂದ್ರೆ ಬರೀ ಆರ್ ಎಸ್ ಎಸ್ ನ ಮುಖ್ಯಂಮತ್ರಿ ಅಲ್ಲ, ರಾಜ್ಯದ ಏಳು ಕೋಟಿ ಜನರ ಮುಖ್ಯಮಂತ್ರಿ. ಆದರೆ ನಮ್ಮ ರಾಜ್ಯದ ಮುಖ್ಯ ಮಂತ್ರಿಗಳು ದ.ಕ. ಜಿಲ್ಲೆಯಲ್ಲಿ ಹಲವು ಮರ್ಡರ್ ಗಳಾದಾಗ ಆಯ್ದ ಧರ್ಮದವರ ಮನೆಗೆ ಹೋಗಿ ಮಾತ್ರ ಪರಿಹಾರ ಕೊಡ್ತಾರೆ ಎಂದು ದೂರಿದರು.


ಸಮಾವೇಶಕ್ಕೂ ಮೊದಲು ಸಿದ್ಧರಾಮಯ್ಯ ಅವರು ಹರೇಕಳದ ಗ್ರಾಮ ಪಂಚಾಯತ್ನ ನೂತನ ಕಚೇರಿ ಕಟ್ಟಡ "ಹರೇಕಳ ಗ್ರಾಮ ಸೌಧ" ಮತ್ತು ಡಾ.ಜಿ. ಶಂಕರ್ ಗ್ರಾಮಕ್ಕೆ ಕೊಡುಗೆಯ ರೂಪದಲ್ಲಿ ನಿರ್ಮಿಸಿದ ಆಸ್ಪತ್ರೆ, ಹರೇಕಳ -ಅಡ್ಯಾರ್ ಸಂಪರ್ಕ ಸೇತುವೆ ಹಾಗೂ ಡ್ಯಾಂನ ವೀಕ್ಷಣೆ ಮಾಡಿದರು. ಶಾಸಕ ಯು.ಟಿ ಖಾದರ್, ವಿದಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ,ಮಾಜಿ ಸಚಿವ ರಮಾನಾಥ ರೈ ಮೊದಲಾದವರು ವೇದಿಕೆಯಲ್ಲಿದ್ದರು.
BJP does not believe in the Constitution, Mangalore hub for communal fights says Siddaramaiah in Mangalore. Former Chief Minister and Leader of the Opposition in the Legislative Assembly Siddaramaiah said here on Thursday that the BJP does not believe in the Constitution and in providing equal rights and equal opportunities to people.
29-05-26 10:41 pm
HK News Staffer
ಒಬ್ಬರಿಗೆ ಒಂದೇ ಹುದ್ದೆ ; ಕೆಪಿಸಿಸಿ ಅಧ್ಯಕ್ಷ ಹುದ್ದ...
29-05-26 04:30 pm
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾ...
28-05-26 06:18 pm
CM Siddaramaiah, Supporters crying, Kaveri: ಸ...
28-05-26 05:31 pm
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
28-05-26 02:45 pm
HK News Staffer
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
29-05-26 10:21 pm
HK News Staffer
Expert College Case, Mangalore: ಕೋವಿಡ್ ಲಾಕ್ಡ...
29-05-26 08:30 pm
ಕಾರಿನ ಟೈಯರ್ ಬ್ಲಾಸ್ಟ್ ಆಗಿ ರಸ್ತೆಬದಿ ನಿಂತಿದ್ದ...
29-05-26 03:05 pm
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am