ಬ್ರೇಕಿಂಗ್ ನ್ಯೂಸ್
05-01-23 09:56 pm Mangalore Correspondent ಕರಾವಳಿ
ಉಳ್ಳಾಲ, ಜ.5 : ಪೌರಾಣಿಕ ಹಿನ್ನೆಲೆಯುಳ್ಳ ಕಲ್ಲಾಪಿನ ಬುರ್ದುಗೋಳಿಯಲ್ಲಿರುವ ಶ್ರೀ ಗುಳಿಗ-ಕೊರಗಜ್ಜನ ಉದ್ಭವ ಶಿಲೆಯ ಆದಿಸ್ಥಳಕ್ಕೆ ಜ.6ರಂದು ಬಂಗಾರದ ಮುಟ್ಟಾಲೆ ಸಮರ್ಪಣೆ ನಡೆದು ಮರುದಿನ ಶನಿವಾರ ವರ್ಷಾವಧಿ ಕೋಲ ನಡೆಯಲಿದೆ.
ನಾಳೆ, ಜನವರಿ 6ರಂದು ಸಂಜೆ 3 ಗಂಟೆಗೆ ಸೋಮೇಶ್ವರ ಶ್ರೀ ಸೋಮನಾಥನ ದಿವ್ಯ ಸನ್ನಿಧಿಯಿಂದ ಬಂಗಾರದ ಮುಟ್ಟಾಲೆಯ ಭವ್ಯ ಶೋಭಾಯಾತ್ರೆ ವಾಹನ ಮೂಲಕ ಹೊರಟು ಕಲ್ಲಾಪು, ಕೆರೆಬೈಲು ಬಳಿಯ ನಾಗದೇವರ ಕಟ್ಟೆಯಿಂದ ಪೂರ್ಣಕುಂಭ ಕಲಶ, ವಾದ್ಯ, ಚೆಂಡೆಗಳ ಘೋಷದೊಂದಿಗೆ ಕಾಲ್ನಡಿಗೆಯಲ್ಲಿ ಸಾಗಿ ಬುರ್ದುಗೋಳಿಯ ಕಾಯಂಗಳ ಬಳಿ ನೂತನವಾಗಿ ನಿರ್ಮಿಸಿರುವ ಭಂಡಾರಮನೆಗೆ ಸಮರ್ಪಣೆಯಾಗಲಿದೆ ಎಂದು ಶ್ರೀ ಕ್ಷೇತ್ರದ ಭಂಡಾರ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಹಾಸ ಪಂಡಿತೌಸ್ ಕ್ಷೇತ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಸಂಜೆ 6 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 7 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ 8.30 ಕ್ಕೆ ಕಟೀಲ್ದಪ್ಪೆ ಉಳ್ಳಾಲ್ತಿ ನಾಟಕ ಪ್ರದರ್ಶನ, ರಾತ್ರಿ 7.30ರಿಂದ ಅನ್ನ ಸಂತರ್ಪಣೆ ನಡೆಯಲಿದೆ. ಜನವರಿ 7ರಂದು ರಾತ್ರಿ 7 ಗಂಟೆಗೆ ಕ್ಷೇತ್ರದಲ್ಲಿ ದೈವಗಳಿಗೆ ವರ್ಷಾವಧಿ ಕೋಲ ಸೇವೆ ನಡೆಯಲಿದೆ. ಎರಡು ದಿನಗಳ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ವಿವಿಧ ಸಮಿತಿಗಳು, ಮಹಿಳಾ ವಿಭಾಗ ಮತ್ತು ಊರಿನ ಸಂಘ-ಸಂಸ್ಥೆಗಳು ಅವಿರತವಾಗಿ ಸೇವೆಗೈಯುತ್ತಿದೆ ಎಂದರು.
ಇತ್ತೀಚೆಗೆ ಪ್ರಶ್ನಾಚಿಂತನೆ ನಡೆದ ಬಳಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ. ಕೋಲ ಸೇವೆಗೆ ಬೇಕಾಗಿರುವ ಪರಿಕರಗಳು ಇಲ್ಲದ ಕಾರಣ ಕುತ್ತಾರಿನ ಏಳು ಜಾಗದಲ್ಲಿ ಕೋಲ ನಡೆಯುವ ಕ್ಷೇತ್ರದಿಂದ ತರಲಾಗುತ್ತಿತ್ತು. ಪ್ರಸ್ತುತ ಭಕ್ತರ ಅನುಕೂಲಕ್ಕಾಗಿ ಬುರ್ದುಗೋಳಿಯಲ್ಲಿ ಭಂಡಾರ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಜೀರ್ಣೋದ್ಧಾರ ಕಾರ್ಯ ವೇಗವಾಗಿ ಪೂರ್ಣಗೊಂಡಿದೆ. ನಾಳೆ ಭಂಡಾರ ವ್ಯವಸ್ಥಾಪನ ಸಮಿತಿ ಮೂಲಕ ಕೊರಗಜ್ಜನಿಗೆ ಬಂಗಾರದ ಮುಟ್ಟಾಲೆ ಸಮರ್ಪಣೆಯಾಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಜೀವನ್ ಕುಮಾರ್ ತೊಕ್ಕೊಟ್ಟು, ವಿಶ್ವನಾಥ ನಾಯಕ್, ದೇವದಾಸ್ ಗಟ್ಟಿ ಕಾಯಂಗಳ, ಪ್ರಶಾಂತ್ ಕಾಯಂಗಳ, ಕಮಲಾಕ್ಷ ಕುಲಾಲ್, ರವಿಶಂಕರ್ ಸೋಮೇಶ್ವರ, ಪುರುಷೋತ್ತಮ ಕಲ್ಲಾಪು ಹಾಗೂ ನವೀನ್ ಕಾಯಂಗಳ ಇದ್ದರು.
The golden muttale will be offered to the adisthalam of Sri Guliga-Koragajjana's udbhava shila at Burdugoli in Kallapina, which has a mythological background, on January 6 and the year-long kola will be held on Saturday the next day.
29-05-26 10:41 pm
HK News Staffer
ಒಬ್ಬರಿಗೆ ಒಂದೇ ಹುದ್ದೆ ; ಕೆಪಿಸಿಸಿ ಅಧ್ಯಕ್ಷ ಹುದ್ದ...
29-05-26 04:30 pm
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾ...
28-05-26 06:18 pm
CM Siddaramaiah, Supporters crying, Kaveri: ಸ...
28-05-26 05:31 pm
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
28-05-26 02:45 pm
HK News Staffer
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
29-05-26 10:21 pm
HK News Staffer
Expert College Case, Mangalore: ಕೋವಿಡ್ ಲಾಕ್ಡ...
29-05-26 08:30 pm
ಕಾರಿನ ಟೈಯರ್ ಬ್ಲಾಸ್ಟ್ ಆಗಿ ರಸ್ತೆಬದಿ ನಿಂತಿದ್ದ...
29-05-26 03:05 pm
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am