ಬ್ರೇಕಿಂಗ್ ನ್ಯೂಸ್
02-01-23 05:34 pm Mangalore Correspondent ಕರಾವಳಿ
ಮಂಗಳೂರು, ಜ.2: ವಿಧಾನಸಭೆ ವಿಪಕ್ಷ ಉಪನಾಯಕ ಯುಟಿ ಖಾದರ್ ಅವರಿಗೆ ಯಾರೋ ಅಪರಿಚಿತರು ರಾಹುಲ್ ಗಾಂಧಿಯ ಪಿಎ ಎಂದು ಹೇಳಿಕೊಂಡು ಫೋನ್ ಮಾಡಿ ಯಾಮಾರಿಸಲು ಯತ್ನಿಸಿದ್ದಾನೆ. ಈ ಬಗ್ಗೆ ತಿಳಿಯುತ್ತಲೇ ಯುಟಿ ಖಾದರ್ ಮಂಗಳೂರು ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದು, ನಕಲಿ ವ್ಯಕ್ತಿಯ ಬಗ್ಗೆ ತನಿಖೆ ನಡೆಸಲು ಕೋರಿದ್ದಾರೆ. ಪೊಲೀಸರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇಂದು ಮಧ್ಯಾಹ್ನ ಯುಟಿ ಖಾದರ್ ಅವರ ಮೊಬೈಲ್ ಸಂಖ್ಯೆಗೆ 8146006626 ನಂಬರಿನಿಂದ ಕರೆ ಬಂದಿತ್ತು. ಎರಡು ಬಾರಿ ಫೋನ್ ಕರೆ ಬಂದಿದ್ದರಿಂದ ಸಭೆಯಲ್ಲಿ ಭಾಗವಹಿಸಿದ್ದರಿಂದ ಕರೆ ಸ್ವೀಕರಿಸಲು ಆಗಿರಲಿಲ್ಲ. ಸಭೆ ಮುಗಿಸಿ ಮೊಬೈಲ್ ನೋಡಿದಾಗ, ಅದೇ ನಂಬರಿನಿಂದ ಸಂದೇಶ ಬಂದಿತ್ತು. Good afternoon this side kaniskha singh pa to shri rahul Gandhi ji call me ಎಂದು ಸಂದೇಶ ಬರೆಯಲಾಗಿತ್ತು. ಆ ಮೊಬೈಲ್ ಸಂಖ್ಯೆಯನ್ನು ಎಐಸಿಸಿ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೆಸರಲ್ಲಿ ಸೇವ್ ಮಾಡಿರುವುದು ಟ್ರೂ ಕಾಲರ್ ಮೂಲಕ ತಿಳಿದುಬಂದಿದೆ.
ಈ ಕುರಿತು ಮಾಹಿತಿ ಕಲೆಹಾಕಿದಾಗ ನಕಲಿ ಹೆಸರಿನಲ್ಲಿ ಬಂದಿರುವ ಕರೆಯೆಂದು ಮನವರಿಕೆಯಾಗಿದೆ. ಈ ಕುರಿತು ತನಿಖೆ ನಡೆಸಿ, ಕರೆ ಮಾಡಿದವರು ಯಾರು, ಯಾಕಾಗಿ ಕರೆ ಮಾಡಿದ್ದಾರೆಂದು ಪತ್ತೆ ಮಾಡಬೇಕು ಎಂದು ಯುಟಿ ಖಾದರ್, ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಗೆ ದೂರು ನೀಡಿದ್ದಾರೆ. ಮೇಲ್ನೋಟಕ್ಕೆ ನಕಲಿ ಹೆಸರಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಕಡೆಯಿಂದ ಎಂದು ಹೇಳಿ ಕರೆ ಮಾಡಿ, ಶಾಸಕರನ್ನು ಯಾಮಾರಿಸಲು ಯತ್ನಿಸುವ ಕೃತ್ಯ ಎನ್ನಲಾಗುತ್ತಿದೆ. ಲೋನ್ ಕೊಡುತ್ತೇವೆ, ಆಧಾರ್ ಲಿಂಕ್ ಆಗಿಲ್ಲವೆಂದು ಸೈಬರ್ ವಂಚಕರು ಫೋನ್ ಮಾಡುವ ರೀತಿ, ರಾಹುಲ್ ಗಾಂಧಿಯ ಪಿಎ ಎಂದು ಹೇಳಿಕೊಂಡು ಕಾಂಗ್ರೆಸ್ ಶಾಸಕರಿಗೆ ಕರೆ ಮಾಡಿರುವ ಸಾಧ್ಯತೆಯಿದೆ.
Mangalore Man tries to dupe MLA UT Khader as Rahul Gandhi PA, files a complaint to Mangalore Police commissioner Shashi Kumar.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm