ಬ್ರೇಕಿಂಗ್ ನ್ಯೂಸ್
15-12-22 09:24 pm Mangalore Correspondent ಕರಾವಳಿ
ಮಂಗಳೂರು, ಡಿ.15: ಯಾವುದೋ ಕ್ಷುಲ್ಲಕ ಪ್ರಕರಣ ಮುಂದಿಟ್ಟು ಹಿಂದು ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಅವರನ್ನು ಬಂಧಿಸಲಾಗಿದೆ. ಇದರ ಹಿಂದೆ ಬಿಜೆಪಿ ಆಡಳಿತದ ಹತಾಶ ಭಾವನೆ ಅಡಗಿದೆ. ಚುನಾವಣೆ ಸಂದರ್ಭದಲ್ಲಿ ಸೋಲಿನ ಭೀತಿಯಲ್ಲಿರುವ ಬಿಜೆಪಿ ನಾಯಕರು ಚುನಾವಣಾ ತಂತ್ರಗಾರಿಕೆಯ ಭಾಗವಾಗಿ ರಾಜೇಶ್ ಪವಿತ್ರನ್ ಅವರನ್ನು ಬಂಧಿಸಿದ್ದಾರೆ ಎಂದು ಹಿಂದು ಮಹಾಸಭಾ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ರಾಜೇಶ್ ಪವಿತ್ರನ್ ವಿರುದ್ಧ ಆರೋಪಿಸಿ ಪ್ರಕರಣ ದಾಖಲಿಸಿದ ಸುರೇಶ್ ಎನ್ನುವ ವ್ಯಕ್ತಿ ಮೂರ್ನಾಲ್ಕು ವರ್ಷಗಳ ಕಾಲ ರಾಜೇಶ್ ಪವಿತ್ರನ್ ಅವರ ಕಚೇರಿಯಲ್ಲಿ ಕೆಲಸಕ್ಕಿದ್ದವನು. ಆತ ಯಾವುದೇ ಕಂಪನಿ ಪಾಲುದಾರನಲ್ಲ. ಅಲ್ಲದೆ, ಯಾವುದೇ ರೀತಿಯ ಉದ್ಯಮಿಯೂ ಅಲ್ಲ. ಕೆಲಸ ಬಿಟ್ಟು ಹೋಗಿದ್ದಾಗ ಲ್ಯಾಪ್ಟಾಪ್ ಬಿಟ್ಟು ಹೋಗಿದ್ದ. ಅದನ್ನು ವಾಪಸ್ ಕೊಡುವಂತೆ ದೂರು ನೀಡಿದ್ದ. ತನ್ನ ವೈಯಕ್ತಿಕ ಹಣದಲ್ಲಿ ಇಡೀ ರಾಜ್ಯ ಘಟಕವನ್ನು ನಡೆಸುತ್ತಿರುವ ರಾಜೇಶ್ ಪವಿತ್ರನ್ ಅವರಿಗೆ ಜುಜುಬಿ 20 ಸಾವಿರ ಮೌಲ್ಯದ ಲ್ಯಾಪ್ ಟಾಪ್ ದೊಡ್ಡ ಸಂಗತಿಯೇ.. ಆದರೆ ಸುರತ್ಕಲ್ ಪೊಲೀಸರು ಇದೇ ನೆಪವನ್ನು ಮುಂದಿಟ್ಟು ರಾಜೇಶ್ ಪವಿತ್ರನ್ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ ಎಫ್ಐಆರ್ ದಾಖಲಿಸಿದ್ದಾರೆ.
ಪೊಲೀಸರು ಮೊದಲು ವಿಚಾರಣೆಗೆಂದು ಠಾಣೆಗೆ ಕರೆದೊಯ್ದು ಅಲ್ಲಿ ಅನಿರೀಕ್ಷಿತವಾಗಿ ಎಫ್ಐಆರ್ ದಾಖಲು ಮಾಡಿದ್ದಾರೆ. ದೂರುದಾರ ವ್ಯಕ್ತಿಯೇ ತನಗೆ ಲ್ಯಾಪ್ ಟಾಪ್ ದೊರತರೆ ಸಾಕು, ದೂರು ಹಿಂಪಡೆಯುತ್ತೇನೆ ಎಂದು ಹೇಳುತ್ತಿದ್ದರೂ, ಪೊಲೀಸರು ಆತನ ಮಾತು ಕೇಳದೆ ಎಫ್ಐಆರ್ ದಾಖಲು ಮಾಡಿದ್ದಾರೆ. ಇದರ ಹಿಂದೆ ಯಾವ ದುರುದ್ದೇಶ ಅಡಗಿದೆ, ಯಾರ ಷಡ್ಯಂತ್ರ ಇದೆ ಎನ್ನುವುದು ತಿಳಿದುಬರುತ್ತದೆ. ರಾಜೇಶ್ ಪವಿತ್ರನ್ ಸುರತ್ಕಲ್ ನಲ್ಲಿಯೇ ಉದ್ಯಮ ನಡೆಸುತ್ತಿದ್ದಾರೆ. ಸುರತ್ಕಲ್ ಪೊಲೀಸರಿಗೂ ಈ ಬಗ್ಗೆ ಗೊತ್ತಿದೆ. ಈ ಹಿಂದೆ ಅವರಿಗೆ ಸೇರಿದ್ದ ವೃದ್ಧಾಶ್ರಮವನ್ನು ಮುಚ್ಚಿಸಲು ಏನೆಲ್ಲ ಷಡ್ಯಂತ್ರ ನಡೆಸಿದ್ದರು. ಕಿರುಕುಳವನ್ನೂ ಕೊಟ್ಟಿದ್ದರು. ಅದು ಸಾಧ್ಯವಾಗದೇ ಇದ್ದಾಗ, ಕೆಲಸ ಬಿಟ್ಟು ಹೋಗಿದ್ದ ವ್ಯಕ್ತಿಯನ್ನು ಮುಂದಿಟ್ಟು ದೂರು ದಾಖಲಿಸಿದ್ದಾರೆ.
ಈ ರೀತಿಯ ಷಡ್ಯಂತ್ರಗಳಿಂದ ಹಿಂದು ಮಹಾಸಭಾವನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಹಿಂದು ಮಹಾಸಭಾ ಇಡೀ ರಾಜ್ಯದಲ್ಲಿ ಬಿಜೆಪಿಗೆ ತನ್ನ ಶಕ್ತಿಯನ್ನು ತೋರಿಸಲಿದೆ. ಅದನ್ನು ಸೋಲಿಸುವ ಶಕ್ತಿಯಾಗಲಿದ್ದು, ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಧರ್ಮೇಂದ್ರ ಹೇಳಿದ್ದಾರೆ. ಅಲ್ಲದೆ, ಈ ಪ್ರಕರಣದ ಬಗ್ಗೆ ಕೋರ್ಟಿನಲ್ಲಿ ಸ್ವತಃ ನ್ಯಾಯಾಧೀಶರೇ ಇದರ ಹಿಂದೆ ಷಡ್ಯಂತ್ರ ಇದೆಯೇ ಎಂದು ಪೊಲೀಸರಿಗೆ ಪ್ರಶ್ನೆ ಮಾಡಿದ್ದಾರೆ. ಇಷ್ಟೆಲ್ಲ ಸೆಕ್ಷನ್ ವಿಧಿಸುವ ಅಗತ್ಯವಿತ್ತೇ ಎಂದು ಪೊಲೀಸರಿಗೆ ಕೇಳಿದರೆ ಅವರಲ್ಲಿ ಉತ್ತರ ಇರಲಿಲ್ಲ. ಹಾಗಾಗಿ ಎಫ್ಐಆರ್ ದಾಖಲಿಸಿದ ಒಂದೇ ದಿನದಲ್ಲಿ ಬುಧವಾರವೇ ರಾಜೇಶ್ ಪವಿತ್ರನ್ ಗೆ ನ್ಯಾಯಾಲಯ ಜಾಮೀನು ನೀಡಿ ಕಳುಹಿಸಿತ್ತು ಎಂದು ಹೇಳಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಹರ್ಷ ನಾಯ್ಕ್, ರಾಜೇಶ್ ಪೂಜಾರಿ ಉಪಸ್ಥಿತರಿದ್ದರು.
Mangalore Hindu Mahasaba Rajesh Pavitran arrested, its a game plan of BJP slams members. Rajesh Pavithran (42) of Karnataka state Hindu Mahasabha was arrested by Surathkal police on the accusation of extorting gold and cash from a businessman threatening to make his private information public.
02-09-25 02:37 pm
HK News Desk
Man sets woman on fire, Bangalore: ತನ್ನನ್ನು ಬ...
01-09-25 10:53 pm
Karnataka Police, Warning to Social Media Use...
01-09-25 06:59 pm
ಎಸ್.ಐ.ಟಿ ರಚನೆ ಮಾಡಿದಾಗಲೇ ಬಿಜೆಪಿ ಯಾಕೆ ವಿರೋಧ ಮಾಡ...
01-09-25 05:03 pm
Yadagiri, Raid, Heart Attack: ಯಾದಗಿರಿ ; ಇಸ್ಪೀ...
01-09-25 04:55 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
02-09-25 04:44 pm
Mangalore Correspondent
Bribe Puttur, Tahsildar Absconding, Lokayukta...
02-09-25 02:17 pm
ಮಗನಿಗೆ ಇಲ್ಲ ಉದ್ಯೋಗ ; ಮುಂಬೈನಿಂದ ಉಡುಪಿಗೆ ಬಂದು ಆ...
02-09-25 01:05 pm
ಧರ್ಮಸ್ಥಳ ಚಲೋ ಬೆನ್ನಲ್ಲೇ ಸೌಜನ್ಯಾ ಮನೆಗೆ ಭೇಟಿಯಿತ್...
01-09-25 10:01 pm
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸೌ...
01-09-25 05:05 pm
02-09-25 04:31 pm
Mangalore Correspondent
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm
Mangalore Crime, Konaje Police, Raid, Liquor:...
01-09-25 01:58 pm