ಬ್ರೇಕಿಂಗ್ ನ್ಯೂಸ್
09-12-22 10:58 pm Mangalore Correspondent ಕರಾವಳಿ
ಮಂಗಳೂರು, ಡಿ.9: ಶಿರಾಡಿ ಘಾಟ್ ನಲ್ಲಿ ಸುರಂಗ ಮಾರ್ಗ ನಿರ್ಮಿಸುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಸ್ತಾವಕ್ಕೆ ಕೇಂದ್ರ ಸರಕಾರ ನಿರಾಸಕ್ತಿ ತೋರಿದೆ. ಈ ಬಗ್ಗೆ ಸಂಸದ ನಳಿನ್ ಕುಮಾರ್ ಕೇಳಿದ ಚುಕ್ಕಿ ಪ್ರಶ್ನೆಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಉತ್ತರಿಸಿದ್ದು, ಸುರಂಗ ಮಾರ್ಗ ಅತ್ಯಂತ ಹೆಚ್ಚು ಬಜೆಟ್ ಬಯಸುತ್ತದೆ ಮತ್ತು ಕಾರ್ಯ ಸಾಧುವಲ್ಲ ಎಂದು ಹೇಳಿದ್ದಾರೆ. ಇದರೊಂದಿಗೆ ದಶಕಗಳ ಹಿಂದಿನ ಕನಸಾಗಿದ್ದ ಸುರಂಗ ಮಾರ್ಗ ಪ್ರಸ್ತಾವ ಬಹುತೇಕ ಕೈಬಿಟ್ಟಂತಾಗಿದೆ.
ಕಳೆದ ಫೆಬ್ರವರಿಯಲ್ಲಿ ಮಂಗಳೂರಿಗೆ ಬಂದಿದ್ದ ಸಚಿವ ನಿತಿನ್ ಗಡ್ಕರಿ, ಶಿರಾಡಿಯಲ್ಲಿ ಆರು ಪಥದ ರಸ್ತೆ ಮತ್ತು ಸುರಂಗ ಮಾರ್ಗ ನಿರ್ಮಿಸಲಾಗುವುದು. 14 ಸಾವಿರ ಕೋಟಿ ಮೊತ್ತದ ಈ ಯೋಜನೆಗೆ ಶೀಘ್ರದಲ್ಲೇ ಗ್ರೀನ್ ಸಿಗ್ನಲ್ ನೀಡಲಾಗುವುದು ಎಂದು ಹೇಳಿದ್ದರು. ಈ ಬಗ್ಗೆ ಸಂಸತ್ತಿನಲ್ಲಿ ಸ್ಪಷ್ಟನೆ ನೀಡಿರುವ ಗಡ್ಕರಿ, ಈಗಾಗಲೇ ನಾಲ್ಕು ಪಥದ ರಸ್ತೆ ನಿರ್ಮಿಸುವ ಬಗ್ಗೆ ಹೆದ್ದಾರಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆ ಬಗ್ಗೆ ಸದ್ಯದಲ್ಲೇ ಡಿಪಿಆರ್ ರಚಿಸಲಿದ್ದಾರೆ ಎಂದಿದ್ದಾರೆ.
ಕೆನರಾ ಚೇಂಬರ್ ಆಫ್ ಕಾಮರ್ಸ್ ಶಿರಾಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಿದಲ್ಲಿ ಸಾಗಾಟ ವೆಚ್ಚ ತಗ್ಗಲಿದೆ, ಮಂಗಳೂರು- ಬೆಂಗಳೂರು ನಡುವೆ ಸಂಚಾರಕ್ಕೆ ಸಹಕಾರಿ ಆಗಲಿದೆ ಎಂದು ಮನವಿ ಮಾಡಿದ್ದರು. ಈ ಬಗ್ಗೆ ಆಸ್ಟ್ರಿಯಾ ಮೂಲದ ಕಂಪನಿಯೊಂದು ಸಮೀಕ್ಷೆಯನ್ನೂ ನಡೆಸಿತ್ತು. 23.5 ಕಿಮೀ ಉದ್ದದ ರಸ್ತೆ ನಿರ್ಮಿಸಿ, ಅದರಲ್ಲಿ ಆರು ಕಡೆ ಸುರಂಗ, ಏಳು ಸೇತುವೆ ನಿರ್ಮಿಸುವ ಪ್ರಸ್ತಾಪ ಮಾಡಿತ್ತು.
ಈಗ ಮಂಗಳೂರು- ಬೆಂಗಳೂರು ಸಂಚಾರಕ್ಕೆ ಏಳರಿಂದ ಎಂಟು ಗಂಟೆ ಬೇಕಾಗಿದ್ದರೆ, ಸುರಂಗ ನಿರ್ಮಾಣದ ಬಳಿಕ ಒಂದು ಗಂಟೆ ಕಡಿಮೆಯಾಗುವ ಬಗ್ಗೆ ಚಿಂತನೆ ಇತ್ತು. ಅಲ್ಲದೆ, ಸುರಂಗ ಮಾರ್ಗ ಮಾಡಿದಲ್ಲಿ ಹೆಚಚು ಅರಣ್ಯ ನಾಶ ಆಗುವುದಿಲ್ಲ. ದ್ವಿಪಥದ ಬದಲು ನಾಲ್ಕು ಪಥದ ರಸ್ತೆ ಮಾಡಿದಲ್ಲಿ ಅಪಾರ ಅರಣ್ಯ ನಾಶ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಅಪಾರ ನಿರ್ಮಾಣ ವೆಚ್ಚ ಮತ್ತು ಮಳೆಗಾಲದಲ್ಲಿ ಕುಸಿಯುವ ಬೆಟ್ಟಗಳ ನಡುವೆ ಸುರಂಗ ಮಾರ್ಗ ಉಚಿತವಲ್ಲ ಎಂಬ ನಿರ್ಧಾರಕ್ಕೆ ಹೆದ್ದಾರಿ ಸಚಿವಾಲಯ ಬಂದಿದೆ.
The much-hyped Green Tunnel Bypass for Shiradi Ghat on Bengaluru-Mangaluru National Highway 75 was found to be not viable and instead the National Highways Authority of India (NHAI) was asked to prepare a detailed project report (DPR) for a four-lane road on the 26-km Ghat stretch. This was disclosed by Union Minister for Road Transport and Highways Nitin Gadkari in the Lok Sabha while answering a question on the present status of Shiradi Ghat posed by Nalin Kumar Kateel, MP of Dakshina Kannada on Thursday, December 8 in New Delhi.
02-09-25 11:04 pm
Bangalore Correspondent
Sowjanya Case, Dharmasthala: ಸೌಜನ್ಯಾ ಪ್ರಕರಣ ;...
02-09-25 08:37 pm
ಮಕ್ಕಳ ಕಳ್ಳರು ಹೀಗೂ ಮಾಡುತ್ತಾರೆ..! ಶಾಲಾ ವಾಹನ ಎಂದ...
02-09-25 08:00 pm
Ranya Rao: ಚಿನ್ನ ಸ್ಮಗ್ಲರ್ ರನ್ಯಾ ರಾವ್ ಗೆ ಮತ್ತೆ...
02-09-25 06:22 pm
Dharmasthala ED: ಧರ್ಮಸ್ಥಳ ಪ್ರಕರಣದಲ್ಲಿ ಇಡಿ ಎಂಟ...
02-09-25 02:37 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
02-09-25 10:26 pm
Mangalore Correspondent
Mangalore Mukka Accident: ಮುಕ್ಕ ಜಂಕ್ಷನ್ನಲ್ಲಿ...
02-09-25 04:44 pm
Bribe Puttur, Tahsildar Absconding, Lokayukta...
02-09-25 02:17 pm
ಮಗನಿಗೆ ಇಲ್ಲ ಉದ್ಯೋಗ ; ಮುಂಬೈನಿಂದ ಉಡುಪಿಗೆ ಬಂದು ಆ...
02-09-25 01:05 pm
ಧರ್ಮಸ್ಥಳ ಚಲೋ ಬೆನ್ನಲ್ಲೇ ಸೌಜನ್ಯಾ ಮನೆಗೆ ಭೇಟಿಯಿತ್...
01-09-25 10:01 pm
02-09-25 07:09 pm
Mangalore Correspondent
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm