ಬ್ರೇಕಿಂಗ್ ನ್ಯೂಸ್
04-12-22 09:38 pm Mangalore Correspondent ಕರಾವಳಿ
ಮಂಗಳೂರು, ಡಿ.4 : ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರ್ಕಾರದ ಸ್ಟಾರ್ಟಪ್ ಯೋಜನೆ, ಅವುಗಳ ಸದುಪಯೋಗ ಪಡೆಯುವ ನಿಟ್ಟಿನಲ್ಲಿ ನಗರದ ಕೊಟ್ಟಾರದಲ್ಲಿರುವ ಎಜೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎರಡು ದಿನಗಳ 'ಅನ್ವೇಷಣ್ ' ಹೆಸರಿನ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಎಬಿವಿಪಿ ವಿದ್ಯಾರ್ಥಿ ಘಟಕದ ಸವಿಷ್ಕಾರ್ ತಂಡದ ವತಿಯಿಂದ ಡಿ.3 ಮತ್ತು 4ರಂದು ಏರ್ಪಡಿಸಿದ ಎರಡು ದಿನದ ಕಾರ್ಯಕ್ರಮದಲ್ಲಿ ಒಟ್ಟು ಐದು ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಎನ್ವಿಗ್ರೀನ್ ಬಯೋಟೆಕ್ ಲಿಮಿಟೆಡ್ ಸಿಇಓ ಅಶ್ವಥ್ ಹೆಗಡೆ, ಸ್ಟಾರ್ಟಪ್ ಹೇಗೆ ಆರಂಭಿಸಬೇಕು ಮತ್ತು ಯಶಸ್ವಿ ಸ್ಟಾರ್ಟಪ್ ಆಗಲು ಯಾವ ರೀತಿ ಕಾರ್ಯ ನಿರ್ವಹಿಸಬೇಕು, ಯಾವ ರೀತಿ ಫಂಡ್ ತರಬಹುದು ಎನ್ನುವ ಬಗ್ಗೆ ತಿಳಿಸಿದರು.

ಎಜೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಶಾಂತರಾಮ ರೈ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸವಿಷ್ಕಾರ್ ರಾಷ್ಟ್ರೀಯ ಸಹ ಸಂಚಾಲಕ ಧರಣೀಶ್ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು.


ಐದು ಅವಧಿಯ ಉಪನ್ಯಾಸ ಕಾರ್ಯಕ್ರಮದಲ್ಲಿ ಯಶಸ್ವಿ ಉದ್ಯಮಿಗಳಾಗಿ ಗುರುತಿಸಲ್ಪಟ್ಟ ಗ್ರಾಮ ವಿಕಾಸ್ ಸೊಸೈಟಿ ಸಿಇಓ ಡಾ.ಜಗದೀಶ್ ಶೇಖರ್ ನಾಯ್ಕ್, ಮಾಹೆ ಪ್ರೊಫೆಸರ್ ಡಾ.ದಶರಥ್ ರಾಜ್ ಶೆಟ್ಟಿ, ಡಾ.ಅನಂತ ಪದ್ಮನಾಭ ಆಚಾರ್, ಮೋಹನ್ ಶಾಂತಿಗ್ರಾಮ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಎರಡು ಜಿಲ್ಲೆಗಳ 12 ಇಂಜಿನಿಯರಿಂಗ್ ಕಾಲೇಜುಗಳ 320 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಡಿ.4ರಂದು ಸಮಾರೋಪ ಕಾರ್ಯಕ್ರಮ ನಡೆದಿದ್ದು, ಎಬಿವಿಪಿ ವಿಭಾಗ ಪ್ರಮುಖ ಕೇಶವ ಬಂಗೇರ ಪಾಲ್ಗೊಂಡಿದ್ದರು. ಎಜೆ ಇಂಜಿನಿಯರಿಂಗ್ ಕಾಲೇಜಿನ ಉಪ ಪ್ರಾಂಶುಪಾಲ ಡಾ. ಅಂಥೋನಿ ಪಿ.ಜೆ ಅಧ್ಯಕ್ಷತೆ ವಹಿಸಿದ್ದರು.
A two-day training workshop titled 'Anveshan' was organised at AJ Institute of Engineering College, Kottara in the city to take advantage of the central government's start-up scheme for engineering students of Udupi and Dakshina Kannada districts.
29-08-26 10:49 pm
HK News Staffer
‘ದಬ್ಬಾಳಿಕೆ ಮಾಡಲಿ, ರಿಪೇರಿ ಮಾಡೋದು ನಂಗೆ ಗೊತ್ತಿದೆ...
29-08-26 10:47 pm
ನಾಗೇಂದ್ರ ರಾಜಿನಾಮೆ ನೀಡಿದ್ರೂ ಬಿಜೆಪಿ ಪಾದಯಾತ್ರೆ ಮ...
29-08-26 10:38 pm
ಸಿನಿಮಾಗಳಲ್ಲಿ ಮಹಿಳೆಯನ್ನು ಭೋಗದ ವಸ್ತುವನ್ನಾಗಿ ತೋರ...
28-08-26 09:35 pm
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
29-08-26 10:25 pm
HK News Staffer
ನೇಪಾಳ ಪ್ರವಾಹದ ಬಳಿಕ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್...
29-08-26 03:36 pm
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm