ಬ್ರೇಕಿಂಗ್ ನ್ಯೂಸ್
03-12-22 11:15 am Mangalore Correspondent ಕರಾವಳಿ
ಮಂಗಳೂರು, ಡಿ.3: ಭಾರೀ ಜನವಿರೋಧದ ಮಧ್ಯೆಯೇ ಸುರತ್ಕಲ್ ಟೋಲ್ ಗೇಟ್ ಶುಲ್ಕವನ್ನು ಹೆಜಮಾಡಿ ಟೋಲ್ ಪ್ಲಾಜಾಕ್ಕೆ ವಿಲೀನಗೊಳಿಸಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಡಿ.4ರಿಂದಲೇ ಡಬಲ್ ವಸೂಲಿ ನಿಯಮ ಜಾರಿಗೆ ಬರಲಿದ್ದು, ಈ ಬಗ್ಗೆ ನವಯುಗ ಟೋಲ್ ಪ್ಲಾಜಾದವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಹೆಜಮಾಡಿಯಲ್ಲಿ ಡಬಲ್ ವಸೂಲಿಯಿಂದ ಉಡುಪಿ ಜಿಲ್ಲೆಯ ಜನರಿಗೆ ಹೊರೆಯಾಗುತ್ತದೆ ಎಂದು ಕರಾವಳಿಯಲ್ಲಿ ಭಾರೀ ಜನ ವಿರೋಧ ಕೇಳಿಬಂದಿದೆ. ಉಡುಪಿ ಶಾಸಕ ರಘುಪತಿ ಭಟ್ ದೆಹಲಿಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ, ಈ ರೀತಿಯ ಜನ ವಿರೋಧಿ ನೀತಿಯನ್ನು ಜಾರಿಗೆ ತರುವುದು ಬೇಡ ಎಂದು ಮನವಿ ಮಾಡಿದ್ದರು. ಹಾಗಿದ್ದರೂ, ಇದ್ಯಾವುದನ್ನೂ ಲೆಕ್ಕಿಸದೆ ಹೆದ್ದಾರಿ ಪ್ರಾಧಿಕಾರ ತಾನು ನಡೆದಿದ್ದೇ ದಾರಿ ಎನ್ನುವ ರೀತಿ ವರ್ತಿಸಿದೆ. ಉಡುಪಿ ಶಾಸಕ ರಘುಪತಿ ಭಟ್ ಮನವಿಗೆ ಡಿ.5ರಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಯನ್ನು ಕರೆಯುವುದಾಗಿ ನಿತಿನ್ ಗಡ್ಕರಿ ಹೇಳಿದ್ದಾಗಿ ಹೇಳಲಾಗಿತ್ತು.
ಆದರೆ ಇದರ ನಡುವೆಯೇ ನವಯುಗ ಟೋಲ್ ಪ್ಲಾಜಾ, ಉಡುಪಿ ಇದರ ವತಿಯಿಂದ ಡಿ.4ರಿಂದಲೇ ಹೊಸ ದರ ಜಾರಿಗೊಳಿಸುವುದಾಗಿ ಶನಿವಾರ ಪತ್ರಿಕಾ ಜಾಹೀರಾತು ನೀಡಲಾಗಿದೆ. ಜೀಪು, ಸಾಮಾನ್ಯ ಕಾರುಗಳಿಗೆ ಸುರತ್ಕಲ್ ಟೋಲ್ ನಲ್ಲಿ ಸಂಗ್ರಹಿಸುತ್ತಿದ್ದ 60 ರೂ. ಮತ್ತು ಹೆಜಮಾಡಿಯಲ್ಲಿ ಸಂಗ್ರಹಿಸುತ್ತಿದ್ದ 40 ರೂ. ಒಟ್ಟು ಸೇರಿಸಿ 100 ರೂ. ಪಡೆಯಲಾಗುವುದು ಎಂದು ಹೇಳಿದೆ. ಅಲ್ಲದೆ, ಹಿಂತಿರುಗಿ ಅದೇ ದಾರಿಯಲ್ಲಿ ಬರುವ ಸಂದರ್ಭ 155 ಮೊತ್ತವನ್ನು ವಸೂಲಿ ಮಾಡುವುದಾಗಿ ಸೂಚಿಸಿದೆ. ಇದರರ್ಥ ಒಬ್ಬ ಮೂಲ್ಕಿಯಿಂದ ಉಡುಪಿಗೆ ಹೋಗಿ ಬರಬೇಕೆಂದಿದ್ದರೆ 255 ರೂ. ಶುಲ್ಕವನ್ನು ಟೋಲ್ ಗೇಟ್ ನಲ್ಲಿ ಕಕ್ಕಬೇಕಾಗುತ್ತದೆ. ಹಾಗೆಯೇ ಇತರೇ ವಾಹನಗಳು ಕೂಡ ಡಬಲ್ ಶುಲ್ಕವನ್ನು ಇಲ್ಲಿ ಕೊಡಬೇಕಾಗುತ್ತದೆ.
ಕಾರ್ಕಳ, ಕಾಪು, ಉಡುಪಿ, ಮಂಗಳೂರು ಉತ್ತರ ಮತ್ತು ಮೂಲ್ಕಿ ಮೂಡುಬಿದ್ರೆ ಈ ಐದು ಕ್ಷೇತ್ರಗಳ ಜನರ ಪಾಲಿಗೆ ಇದು ಮರ್ಮಾಘಾತ ಅನ್ನುವ ಹೊಡೆತವಾಗಿದೆ. ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷ ಅಷ್ಟೊಂದು ಪ್ರಬಲವಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಬಲ ಆಗಿದ್ದರೂ, ನಾಯಕರು ಟೋಲ್ ಗೇಟ್ ಮುಂದೆ ಮಂಡಿಯೂರಿದಂತೆ ವರ್ತಿಸುತ್ತಿದ್ದಾರೆ. ಬಿಜೆಪಿ ಶಾಸಕರು ಮೌನವಾಗಿದ್ದು, ಜನಸಾಮಾನ್ಯರ ವರ್ತನೆಯನ್ನು ಗಮನಿಸುತ್ತಿದ್ದಾರೆ. ಸಂಸದರು ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ದೂರ ನಿಂತಿದ್ದಾರೆ.
The National Highways Authority of India (NHAI) has decided to merge surathkal toll gate fee with Hejamady toll plaza amid massive public outcry. The double collection rule will come into effect from December 4 and navayuga toll plaza has issued a press release in this regard. There has been a lot of opposition in the coastal areas that double collection in Hejamady will burden the people of Udupi district. Udupi MLA Raghupathi Bhat had met Union Transport Minister Nitin Gadkari in Delhi and requested him not to implement such an anti-people policy.
02-09-25 11:04 pm
Bangalore Correspondent
Sowjanya Case, Dharmasthala: ಸೌಜನ್ಯಾ ಪ್ರಕರಣ ;...
02-09-25 08:37 pm
ಮಕ್ಕಳ ಕಳ್ಳರು ಹೀಗೂ ಮಾಡುತ್ತಾರೆ..! ಶಾಲಾ ವಾಹನ ಎಂದ...
02-09-25 08:00 pm
Ranya Rao: ಚಿನ್ನ ಸ್ಮಗ್ಲರ್ ರನ್ಯಾ ರಾವ್ ಗೆ ಮತ್ತೆ...
02-09-25 06:22 pm
Dharmasthala ED: ಧರ್ಮಸ್ಥಳ ಪ್ರಕರಣದಲ್ಲಿ ಇಡಿ ಎಂಟ...
02-09-25 02:37 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
02-09-25 10:26 pm
Mangalore Correspondent
Mangalore Mukka Accident: ಮುಕ್ಕ ಜಂಕ್ಷನ್ನಲ್ಲಿ...
02-09-25 04:44 pm
Bribe Puttur, Tahsildar Absconding, Lokayukta...
02-09-25 02:17 pm
ಮಗನಿಗೆ ಇಲ್ಲ ಉದ್ಯೋಗ ; ಮುಂಬೈನಿಂದ ಉಡುಪಿಗೆ ಬಂದು ಆ...
02-09-25 01:05 pm
ಧರ್ಮಸ್ಥಳ ಚಲೋ ಬೆನ್ನಲ್ಲೇ ಸೌಜನ್ಯಾ ಮನೆಗೆ ಭೇಟಿಯಿತ್...
01-09-25 10:01 pm
02-09-25 07:09 pm
Mangalore Correspondent
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm