ಬ್ರೇಕಿಂಗ್ ನ್ಯೂಸ್
07-11-22 02:55 pm Mangalore Correspondent ಕರಾವಳಿ
ಮಂಗಳೂರು, ನ.7 : ಸಂಸದ ನಳಿನ್ ಕುಮಾರ್ ಕಟೀಲ್ ಈವರೆಗೆ ನೀಡಿದ ಯಾವುದೇ ಭರವಸೆಗಳು ಈಡೇರಿಲ್ಲ. ಒಂದು ರೂಪಾಯಿಗೆ 16 ಡಾಲರ್ ಒದಗಿಸುವ ಭರವಸೆಯಿಂದ ತೊಡಗಿ ಎರಡು ಸಾವಿರಕ್ಕೆ ಒಂದು ಲೋಡು ಮರಳು ಒದಗಿಸುವ, ಜಿಲ್ಲೆಯ ಜನರಿಗೆ ಎಮ್ ಆರ್ ಪಿ ಎಲ್, ಎಸ್ಇಝಡ್ ಮುಂತಾದ ಉದ್ಯಮಗಳಲ್ಲಿ ಕಡ್ಡಾಯ ಉದ್ಯೋಗ ಒದಗಿಸುವ ಮಾತುಗಳಲ್ಲಿ ಒಂದನ್ನೂ ಈಡೇರಿಸಲಾಗದಿದ್ದರು ಯಾವುದೇ ಆತಂಕವಿಲ್ಲದೆ ಜಿಲ್ಲೆಯ ಜನರ ಮುಂದೆ ನಿರ್ಭೀತಿಯಿಂದ ತಿರುಗಾಡುತ್ತಿದ್ದರು. ಇದೇ ಮೊದಲ ಬಾರಿಗೆ ಟೋಲ್ ಗೇಟ್ ವಿರುದ್ಧದ ಹೋರಾಟದೆದುರು ಮಾತು ತಪ್ಪಿದ ಸಂಸದ ನಳಿನ್ ಕುಮಾರ್ ಜನರಿಗೆ ಮುಖ ತೋರಿಸಲಾಗದೆ ತಲೆಮರೆಸಿಕೊಂಡಿದ್ದಾರೆ. ಜನರ ಆಕ್ರೋಶ, ಕಪ್ಪು ಬಾವುಟಗಳಿಗೆ ಹೆದರಿ ಅವರು ಹತ್ತು ದಿನಗಳ ಅಜ್ಞಾತ ವಾಸಕ್ಕೆ ತೆರಳಿದ್ದಾರೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ, ಟೋಲ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುರತ್ಕಲ್ ಟೋಲ್ ಗೇಟ್ ತೆರವಿಗಾಗಿ ನಡೆಯುತ್ತಿರುವ ಹಗಲು ರಾತ್ರಿ ಧರಣಿಯ 11ನೇ ದಿನವಾದ ಇಂದು ಕಪ್ಪು ಬಟ್ಟೆ ಧರಿಸಿ, ಕಪ್ಪು ಬಾವುಟ ಪ್ರದರ್ಶಿಸಿ ನಡೆಸಿದ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು. ಸಂಸದ ನಳಿನ್ ಕುಮಾರ್ ಟೋಲ್ ಗೇಟ್ ತೆರವಿಗೆ 20 ದಿನಗಳ ಗಡುವು ಕೇಳಿದ್ದರು. ಗಡುವಿನ ದಿನ ನ.6ಕ್ಕೆ ಕೊನೆಯಾಗಿದ್ದು ಮತ್ತೆ ಮಾತು ಉಳಿಸಿಕೊಳ್ಳಲಾಗದೆ ಜನರೆದುರು ಮುಖ ಮುಚ್ಚಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಈ ಹಿನ್ನೆಲೆಯಲ್ಲಿ ಧರಣಿ ನಿರತರು ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಸದನದಲ್ಲಿ ನೀಡಿದ ಭರವಸೆಯನ್ನು ಈಡೇರಿಸಲಾಗದೆ ಇಂದು ಕಾರ್ಯಕ್ರಮದ ನಿಮಿತ್ತ ಕಾಪು ತಲುಪಲು ಹೆಲಿಕಾಪ್ಟರ್ ಬಳಸಿದ್ದು ಹೋರಾಟಗಾರರನ್ನು ಎದುರಿಸಲಾಗದೆ ತಪ್ಪಿಸಿಕೊಳ್ಳಲು ಆರಿಸಿದ ಮಾರ್ಗ ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ. ಬಿಜೆಪಿ ಸರಕಾರಕ್ಕೆ ಜನರ ಕನಿಷ್ಟ ಬೇಡಿಕೆಗಳನ್ನೇ ಈಡೇರಿಸಲಾಗುತ್ತಿಲ್ಲ. ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜಾಗಲಿ, ಸುಸಜ್ಜಿತ ಮಾರುಕಟ್ಟೆಯಾನ್ನಾಗಲಿ, ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸುವುದಕ್ಕೂ ಸಾಧ್ಯವಾಗದೆ ಸರಕಾರ ನಡೆಸಲು ಯೋಗ್ಯತೆ ಕಳಕೊಂಡಿದ್ದಾರೆ. ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವುಗೊಳಿಸುವಂತಹ ಸಣ್ಣ ಕೆಲಸವನ್ನೇ ಮಾಡಕ್ಕಾಗದವರು ನಮ್ಮ ಹೋರಾಟದಲ್ಲಿ ಬಂದು ಸೇರಿಕೊಳ್ಳಲಿ ಅಥವಾ ಕೂಡಲೇ ರಾಜಿನಾಮೆ ಕೊಟ್ಟು ಕೆಳಗಿಳಿದು ಬಿಡಲಿ ಎಂದರು.

ಧರಣಿಯನ್ನು ಉದ್ದೇಶಿಸಿ ಮಾಜಿ ಸಂಸದ ವಿನಯ್ ಕುಮಾರ್ ಸೊರಕೆ, ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಸಿಪಿಐಎಂ ಮುಖಂಡರಾದ ಸುಕುಮಾರ್ ತೊಕ್ಕೊಟ್ಟು, ಖ್ಯಾತ ಹೈಕೋರ್ಟ್ ವಕೀಲರಾದ ಎಸ್. ಬಾಲನ್, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೇಪಾಡಿ ಮಾತನಾಡಿದರು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಮಾಜಿ ಉಪ ಮೇಯರ್ ಮಹಮ್ಮದ್ ಕುಂಜತ್ತಬೈಲ್, ದಿನೇಶ್ ಕುಂಪಲ, ಇಂಟಕ್ ಮುಖಂಡ ಸದಾಶಿವ ಶೆಟ್ಟಿ, ಶ್ರೀನಾಥ್ ಕುಲಾಲ್, ಆಯಾಝ್ ಕೃಷ್ಣಾಪುರ, ಸಿಪಿಐಎಂ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್, ಜಯಂತ ನಾಯ್ಕ್, ಮಹಾಬಲ ದೆಪ್ಪೆಲಿಮಾರ್, ಶೇಖರ ಕುಂದರ್, ಡಿವೈಎಫ್ಐ ಮುಖಂಡರಾದ ಬಿ.ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಸಂಕೇತ್ ಕುತ್ತಾರ್, ಕಾಂಗ್ರೆಸ್ ಮುಖಂಡರಾದ ಯೋಗೀಶ್ ನಾಯಕ್, ಶಾಹುಲ್ ಹಮೀದ್, ಬಶೀರ್ ಕುಳಾಯಿ, ಪ್ರಮೀಳಾ ದೇವಾಡಿಗ, ಹುಸೈನ್ ಕಾಟಿಪಳ್ಳ, ರಮೇಶ್ ಉಳ್ಳಾಲ್, ವಿದ್ಯಾರ್ಥಿ ಮುಖಂಡರಾದ ವಿನಿತ್ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.
The Surathkal Toll Gate Virodhi Horata Samithi has indicated its intention to continue the ongoing indefinite agitation if MP Nalin Kumar Kateel fails to fulfill his promise of scrapping Surathkal toll gate on November 7.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
12-11-25 06:56 pm
Mangalore Correspondent
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm