ಬ್ರೇಕಿಂಗ್ ನ್ಯೂಸ್
06-11-22 06:10 pm Mangalore Correspondent ಕರಾವಳಿ
ಉಳ್ಳಾಲ, ನ.6 : ಕಳೆದ ನ.1 ರ ಮಂಗಳವಾರ ರಾತ್ರಿ ಕೊಣಾಜೆ ಠಾಣೆ ವ್ಯಾಪ್ತಿಯ ಪಜೀರು ಗ್ರಾಮದ ಅರ್ಕಾಣ ಬದ್ರಿಯಾ ಜುಮಾ ಮಸೀದಿಗೆ ನುಗ್ಗಿ ಆರು ಕಾಣಿಕೆ ಹುಂಡಿಯಿಂದ ನಗದು ಕಳವುಗೈದಿದ್ದ ಐನಾತಿ ಖದೀಮನನ್ನ ಕೊಣಾಜೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಬಂಟ್ವಾಳ ತಾಲೂಕಿನ ಮೊಡಂಕಾಪು,ಪಲ್ಲಮಜಲು ನಿವಾಸಿ ಮಹಮ್ಮದ್ ಇಕ್ಬಾಲ್ ಅಲಿಯಾಸ್ ಇಕ್ಕು(54) ಬಂಧಿತ ಆರೋಪಿ. ಈತನ ವಿರುದ್ಧ ಕಾರ್ಕಳ ಠಾಣೆಯಲ್ಲಿ ಮೂರು, ಮೂಡುಬಿದ್ರೆ, ಬಂಟ್ವಾಳ ನಗರ ಠಾಣೆಗಳಲ್ಲಿ ತಲಾ ಒಂದು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿದೆ. ಇತ್ತೀಚೆಗೆ ಬಂಟ್ವಾಳದ ಅಜ್ಜಿಬೆಟ್ಟು ದೇವಸ್ಥಾನ ಒಂದರಲ್ಲೂ ಈತ ಕಳ್ಳತನ ಮಾಡಿರುವುದಾಗಿ ತಿಳಿದುಬಂದಿದೆ.




ಮಂಗಳವಾರ ಮಧ್ಯರಾತ್ರಿ ವೇಳೆ ಅರ್ಕಾಣ ಜುಮಾ ಮಸೀದಿಯ ಪಕ್ಕದ ಕೋಣೆಯೊಂದರಲ್ಲಿದ್ದ ಪಿಕ್ಕಾಸು, ಹಾರೆಯನ್ನ ಬಳಸಿ ಮಸೀದಿಯ ಆವರಣ ಗೋಡೆಯಲ್ಲಿದ್ದ ಒಟ್ಟು ಆರು ಕಾಣಿಕೆ ಹುಂಡಿಗಳನ್ನ ಒಡೆದು ನಗದು ಕಳವುಗೈಯಲಾಗಿತ್ತು. ಮಸೀದಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಓರ್ವ ವ್ಯಕ್ತಿಯೇ ಕೈಚಳಕ ತೋರಿದ್ದ ದೃಶ್ಯ ಸೆರೆಯಾಗಿತ್ತು.
ಮೊದಲು ಹೊರಗಿನ ಕಾಣಿಕೆ ಡಬ್ಬಿಯನ್ನು ಮುರಿದ ಕಳ್ಳ ಬಳಿಕ ಹಾರೆಯ ಸಹಾಯದಿಂದ ಮಸೀದಿಯ ಬಾಗಿಲಿನ ಚಿಲಕವನ್ನು ಒಡೆದು ಒಳಗೆ ನುಗ್ಗಿ ಅಲ್ಲಿದ್ದ ಕಾಣಿಕೆ ಡಬ್ಬಿಗಳನ್ನು ಒಡೆದು ನಗದು ದೋಚಿದ್ದ. ಅಲ್ಲದೆ ಮಸೀದಿ ಕಚೇರಿಯ ಬಾಗಿಲನ್ನೂ ಮುರಿದು ಕಳ್ಳತನಕ್ಕೆ ಯತ್ನಿಸಿದ್ದ. ಘಟನಾ ಸ್ಥಳಕ್ಕೆ ಸ್ಥಳೀಯ ಶಾಸಕ ಯು.ಟಿ ಖಾದರ್ ಅವರು ಭೇಟಿ ನೀಡಿ ಕಳ್ಳತನ ಆರೋಪಿಯನ್ನ ಶೀಘ್ರ ಬಂಧಿಸುವಂತೆ ಕೊಣಾಜೆ ಪೊಲೀಸರಿಗೆ ಆಗ್ರಹಿಸಿದ್ದರು. ಸಿಸಿಟಿವಿ ದಾಖಲೆ ಆಧಾರದಲ್ಲಿ ಕೊಣಾಜೆ ಪೊಲೀಸರು ತನಿಖೆ ನಡೆಸಿ ಖದೀಮ ಇಕ್ಬಾಲನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
ಪಜೀರು ಮಸೀದಿಗೆ ಕನ್ನ ಹಾಕಿದ ಕಳ್ಳರು ; ಮಸೀದಿಗೆ ನುಗ್ಗಿ ಆರು ಕಾಣಿಕೆ ಡಬ್ಬಿಗಳನ್ನು ಒಡೆದು ನಗದು ಕಳವು
Mangalore Phajeer mosque robbery accused thief arrested by Konaje police. Six offering boxes of the mosque were broken and stolen but the Konaje police have nabbed the accused as soon as possible.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
14-10-26 10:45 pm
HK News Staffer
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
14-10-26 09:09 pm
Mangaluru Staffer
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm