ಬ್ರೇಕಿಂಗ್ ನ್ಯೂಸ್
02-11-22 05:59 pm Mangalore Correspondent ಕರಾವಳಿ
ಉಳ್ಳಾಲ, ನ.2 : ಕೊಣಾಜೆ ಠಾಣೆ ವ್ಯಾಪ್ತಿಯ ಪಜೀರು ಗ್ರಾಮದ ಅರ್ಕಾಣ ಬದ್ರಿಯಾ ಜುಮಾ ಮಸೀದಿಗೆ ಕಳ್ಳರು ನುಗ್ಗಿ ಆರು ಕಾಣಿಕೆ ಹುಂಡಿಯಿಂದ ನಗದು ಕಳವುಗೈದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಮಂಗಳವಾರ ಮಧ್ಯರಾತ್ರಿ ವೇಳೆ ಮಸೀದಿಯ ಪಕ್ಕದ ಕೋಣೆಯೊಂದರಲ್ಲಿದ್ದ ಪಿಕ್ಕಾಸು, ಹಾರೆಯನ್ನ ಬಳಸಿ ಮಸೀದಿಯ ಆವರಣ ಗೋಡೆಯಲ್ಲಿದ್ದ ಒಟ್ಟು ಆರು ಕಾಣಿಕೆ ಹುಂಡಿಗಳನ್ನ ಒಡೆದು ನಗದು ಕಳವುಗೈಯಲಾಗಿದೆ. ಕಳ್ಳತನದ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಓರ್ವ ವ್ಯಕ್ಯಿಯೇ ಕಳವುಗೈದಿರುವ ದೃಶ್ಯ ಕಂಡುಬಂದಿದೆ.
ಮೊದಲು ಹೊರಗಿನ ಕಾಣಿಕೆ ಡಬ್ಬಿಯನ್ನು ಮುರಿದ ಕಳ್ಳ ಬಳಿಕ ಹಾರೆಯ ಸಹಾಯದಿಂದ ಮಸೀದಿಯ ಬಾಗಿಲಿನ ಚಿಲಕವನ್ನು ಒಡೆದು ಒಳಗೆ ನುಗ್ಗಿದ್ದಾನೆ. ಅಲ್ಲಿದ್ದ ಕಾಣಿಕೆ ಡಬ್ಬಿಗಳನ್ನು ಒಡೆದು ನಗದು ದೋಚಿದ್ದಾನೆ. ಮಸೀದಿ ಕಚೇರಿಯ ಬಾಗಿಲನ್ನೂ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಶಾಸಕ ಯು.ಟಿ ಖಾದರ್, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕೃತ್ಯಕ್ಕೆ ಮಸೀದಿಗೆ ಸಂಬಂಧಿಸಿದ ಪಿಕ್ಕಾಸು, ಹಾರೆ ಬಳಕೆ, ಎಲ್ಲಾ ಕಾಣಿಕೆ ಡಬ್ಬಿಗಳನ್ನು ಸ್ಪಷ್ಟವಾಗಿ ತಿಳಿದು ಕಳವುಗೈದಿರುವುದನ್ನು ಗಮನಿಸಿದರೆ ಮಾಹಿತಿ ಇರುವ ವ್ಯಕ್ತಿಯೇ ಕಳ್ಳತನ ನಡೆಸಿರುವ ಶಂಕೆಯಿದೆ ಎಂದು ಮಸೀದಿ ಕಾರ್ಯದರ್ಶಿ ಶಫೀಕ್ ತಿಳಿಸಿದ್ದಾರೆ.
Mangalore Robbers break into Phajeer mosque, flee with cash from six offering boxes in Konaje. The police are now investigating the case.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm