ಬ್ರೇಕಿಂಗ್ ನ್ಯೂಸ್
29-10-22 10:02 pm Mangalore Correspondent ಕರಾವಳಿ
ಉಳ್ಳಾಲ, ಅ.29 : ನರಿಂಗಾನ ಗ್ರಾಮದ ಬೋಳದಪದವಿನ ವಿಶಾಲ ಪ್ರದೇಶದಲ್ಲಿ ಸರಕಾರಿ ಕಂಬಳ ಕರೆ ನಿರ್ಮಾಣವಾಗಲಿದ್ದು ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಶಾಸಕ ಯು.ಟಿ ಖಾದರ್ ಅವರು ನೂತನ ಕರೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ಮಾಡಿದ್ದಾರೆ.
ಕಂಬಳ ಮತ್ತು ಯಕ್ಷಗಾನ ನಮ್ಮ ಜಿಲ್ಲೆಯ ಸಾಂಸ್ಕೃತಿಕ ರಂಗದ ಎರಡು ಕಣ್ಣುಗಳಾಗಿದ್ದು ಅದನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ವಿಧಾನಸಭೆಯಲ್ಲೂ ಧ್ವನಿ ಎತ್ತಿ ಯಶಸ್ಸು ಕಂಡಿದ್ದೇನೆ. ನರಿಂಗಾನ ಗ್ರಾಮದ ಕಂಬಳ ಪ್ರೇಮಿಗಳ ಮನವಿಯಂತೆ ಗ್ರಾಮದ ಬೋಳದಪದವಿನಲ್ಲಿ ನೂತನ ಕಂಬಳಗದ್ದೆ(ಕರೆ) ನಿರ್ಮಾಣವಾಗಲಿದ್ದು ಅದಕ್ಕೆ ಶಿಲಾನ್ಯಾಸಗೈದಿರುವುದು ಮನಸ್ಸಿಗೆ ತುಂಬ ಸಂತಸ ಕೊಟ್ಟಿದೆ. ಬೋಳದ ಪದವಿನ ಐದು ಎಕರೆ ಪ್ರದೇಶದಲ್ಲಿ ತುಳು ಗ್ರಾಮ ನಿರ್ಮಾಣವಾಗಲಿದ್ದು ಆ ನಿಟ್ಟಿನಲ್ಲಿ ಬೋಳ, ಮೋರ್ಲದ ಸರಕಾರಿ ಸ್ಥಳದ ಪ್ರತಿ ಯೋಜನೆಯನ್ನು ಒಟ್ಟು ಸೇರಿಸಿ ಎಕ್ಸಿಬಿಷನ್ ಸೆಂಟರ್ ಆಗಿ ಮಾಡಿ ತೋರಿಸಲಿದ್ದೇವೆ. ತುಳು ಗ್ರಾಮದ ಮೂಲಕ ಜಿಲ್ಲೆಯ ಎಲ್ಲ ಸಮಾಜದ ಸಂಸ್ಕೃತಿ, ಸಂಪ್ರದಾಯ, ಪರಂಪರೆಯನ್ನು ಮುಂದಿನ ಜನಾಂಗವೂ ತಿಳಿಯಲು ಪರಿಚಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಯುಟಿ ಖಾದರ್ ಹೇಳಿದರು.
ನೆತ್ತಿಲಪದವು, ಬೋಳದಪದವು ಕೇವಲ ಹೆಸರಾಗಿ ಉಳಿಯದೇ ಮುಂದಿನ ದಿನಗಳಲ್ಲಿ ಜನಾಕರ್ಷಣೆಯ ಕೇಂದ್ರವಾಗಲಿದೆ. ಭವಿಷ್ಯದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಕ್ರೀಡಾಂಗಣ ಕೂಡ ಸಕಲ ಸೌಲಭ್ಯಗಳೊಂದಿಗೆ ನಿರ್ಮಾಣವಾಗಲಿದೆ. ಈಗಾಗಲೇ ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸ್ವಿಮ್ಮಿಂಗ್ ಫೂಲ್ ಮತ್ತು ಕಮ್ಯುನಿಟಿ ಸೆಂಟರ್ ಗೆ ಸ್ಥಳ ಗುರುತಿಸಿದ್ದೇವೆ ಎಂದರು.
ಇದೇ ವೇಳೆ ಅವರು ಕಲ್ಲರಕೋಡಿ ಬಳಿ 2.5 ಕೋಟಿ ರೂ. ವೆಚ್ಚದಲ್ಲಿ ಜಲಜೀವನ್ ಅಡಿಯಲ್ಲಿ ಬೃಹತ್ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸಗೈದರು.
ಕಾರ್ಯಕ್ರಮದಲ್ಲಿ ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಜಾ ಜೆ. ಶೆಟ್ಟಿ, ಉಪಾಧ್ಯಕ್ಷರಾದ ನವಾಝ್ ಕಲ್ಲರಕೋಡಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ರವೀಂದ್ರ ಶೆಟ್ಟಿ ಉಳಿದೊಟ್ಟು ಮೊದಲಾದವರು ಉಪಸ್ಥಿತರಿದ್ದರು.
Mangalore UT Khader lays foundation stone to Government Lake for Kambala in Ullal.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm