ಬ್ರೇಕಿಂಗ್ ನ್ಯೂಸ್
24-10-22 04:23 pm Mangalore Correspondent ಕರಾವಳಿ
ಮಂಗಳೂರು, ಅ.24: ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಡೀನ್ ಆಗಿದ್ದ ಡಾ.ಊರ್ಬನ್ ಡಿಸೋಜ(57) ನಾಪತ್ತೆಯಾಗಿ ಅ.25ಕ್ಕೆ ತಿಂಗಳು ತುಂಬುತ್ತದೆ. ಸೆ.25ರಂದು ಸಂಜೆ ವೇಳೆಗೆ ಕಾಣೆಯಾಗಿದ್ದ ಊರ್ಬನ್ ಡಿಸೋಜ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗಿ ತಿಂಗಳು ತುಂಬಿದರೂ ಪೊಲೀಸರಿಂದ ಯಾವುದೇ ಸುಳಿವನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ.
ಊರ್ಬನ್ ಡಿಸೋಜ ಪ್ರತಿಷ್ಠಿತ ಫಾದರ್ ಮುಲ್ಲರ್ ಸಂಸ್ಥೆಯಲ್ಲಿ ಅಲೈಡ್ ಸೈನ್ಸ್ ವಿಭಾಗದಲ್ಲಿ ಡೀನ್ ಆಗಿದ್ದರು. ಅವರ ಪತ್ನಿಯೂ ಫಿಸಿಯೋಥೆರಪಿ ವಿಭಾಗದಲ್ಲಿ ವೈಸ್ ಪ್ರಿನ್ಸಿಪಾಲ್ ಆಗಿ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸೆ.25ರಂದು ಸಂಜೆ ವೇಳೆಗೆ ಸಾದಾ ಪ್ಯಾಂಟ್, ಶರ್ಟ್ ಧರಿಸಿ ವೆಲೆನ್ಸಿಯಾದ ತಮ್ಮ ಮನೆಯಿಂದ ಸ್ಕೂಟರಿನಲ್ಲಿ ತೆರಳಿದ್ದ ಊರ್ಬನ್ ಡಿಸೋಜ, ಮಂಗಳಾದೇವಿ ಏರಿಯಾದಲ್ಲಿ ಸ್ಕೂಟರ್ ನಿಲ್ಲಿಸಿ ನಾಪತ್ತೆಯಾಗಿದ್ದಾರೆ ಅನ್ನೋದು ಮಾಹಿತಿ. ಊರ್ಬನ್ ಡಿಸೋಜ ಅವರದ್ದು ಹೈಫೈ ಕುಟುಂಬವಾಗಿದ್ದರಿಂದ ಪೊಲೀಸರು ಆರಂಭದಲ್ಲಿ ಕುಟುಂಬದ ಬಗ್ಗೆ ಹೆಚ್ಚೇನು ವಿಚಾರಣೆಗೆ ಹೋಗಿರಲಿಲ್ಲ.
ಆದರೆ ವ್ಯಕ್ತಿಯ ಮೊಬೈಲ್ ಲೊಕೇಶನ್ ಆಧರಿಸಿ ಪೊಲೀಸರು ಹುಡುಕಾಟ ನಡೆಸಿದ್ದರು. ಮೊಬೈಲ್ ಉಳ್ಳಾಲದಲ್ಲಿ ಕೊನೆಯ ಬಾರಿಗೆ ಲೊಕೇಶನ್ ತೋರಿಸಿತ್ತು. ಆನಂತರ ಸ್ವಿಚ್ ಆಫ್ ಆಗಿತ್ತು. ಮೊಬೈಲ್ ಸಿಕ್ಕಿರಲಿಲ್ಲ. ಹಾಗಾಗಿ ವ್ಯಕ್ತಿ ಸಮುದ್ರಕ್ಕೆ ಹಾರಿದ್ದಾರೆಯೇ ಎಂಬ ಸಂಶಯ ಉಂಟಾಗಿತ್ತು. ವಾರ, ತಿಂಗಳು ಕಳೆದರೂ ಹೆಣವೂ ಸಿಗದೇ ಇರುವುದು ಊರ್ಬನ್ ಡಿಸೋಜ ನಾಪತ್ತೆ ಪ್ರಕರಣ ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಪಾಂಡೇಶ್ವರ ಪೊಲೀಸರಲ್ಲಿ ಕೇಳಿದರೆ, ವ್ಯಕ್ತಿ ನಾಪತ್ತೆಯಾದ ಬಳಿಕ ಹಣ ಇಲ್ಲದೆ ಎಷ್ಟು ದಿನ ಬದುಕಬಹುದು. ಎಲ್ಲಿಯೇ ಹೋಗಿದ್ದರೂ ಬ್ಯಾಂಕ್ ಖಾತೆಯಿಂದ ಹಣ ತೆಗೆಯಬೇಕಿತ್ತು. ಆದರೆ ಹಣದ ವಹಿವಾಟು ಆಗಿರುವುದು ಕಂಡುಬರುತ್ತಿಲ್ಲ. ಬ್ಯಾಂಕ್ ಖಾತೆಯನ್ನು ಪರಿಶೀಲನೆ ಮಾಡಿದ್ದೇವೆ. ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿದ್ದೇವೆ. ಸಿಸಿಟಿವಿ ಚೆಕ್ ಮಾಡಿದ್ದೇವೆ. ಯಾವುದೇ ಸುಳಿವು ಲಭಿಸಿಲ್ಲ ಎಂದು ಹೇಳಿದ್ದಾರೆ.
ಮನೆ ಬಿಟ್ಟು ಹೋಗುವುದಕ್ಕೇನು ಕಾರಣ ಇದ್ದಿರಬಹುದು ಎಂಬ ಪ್ರಶ್ನೆಗೆ ಪೊಲೀಸರಲ್ಲಿ ಉತ್ತರ ಇಲ್ಲ. ಊರ್ಬನ್ ಡಿಸೋಜ ಬಗ್ಗೆ ಅವರ ಆಪ್ತರಲ್ಲಿ ಕೇಳಿದರೆ, ತುಂಬ ಸಂಭಾವಿತ ವ್ಯಕ್ತಿ ಎನ್ನುತ್ತಾರೆ. ಆದರೆ ಪತಿ ಮತ್ತು ಪತ್ನಿ ಕುಟುಂಬಸ್ಥರಿಗೆ ಅಷ್ಟಾಗಿ ಸಂಬಂಧ ಒಳ್ಳೆದಿರಲಿಲ್ಲ. ಹಾಗಾಗಿ ಊರ್ಬನ್ ಸ್ವಲ್ಪ ಜಿಗುಪ್ಸೆಯಲ್ಲಿದ್ದರು. ಫಾದರ್ ಮುಲ್ಲರ್ ಸಂಸ್ಥೆಯವರೂ ಯಾಕೆ ನಿರ್ಲಕ್ಷ್ಯ ವಹಿಸಿದ್ದಾರೆ, ಒಬ್ಬ ಗಣ್ಯ ವ್ಯಕ್ತಿ ನಾಪತ್ತೆಯಾಗಿ ತಿಂಗಳು ಕಳೆದರೂ ಕ್ರಿಶ್ಚಿಯನ್ ಸಂಸ್ಥೆಗಳು, ನಾಯಕರು ಯಾಕೆ ಮಾತನಾಡಿಲ್ಲ ಎಂದು ಕೇಳಿದರೆ, ಆ ಬಗ್ಗೆ ಉತ್ತರ ಸಿಗುತ್ತಿಲ್ಲ. ಊರ್ಬನ್ ಡಿಸೋಜ ಮೆಡಿಕಲ್ ಕಾಲೇಜಿನಲ್ಲಿ ಪ್ರಮುಖ ಹುದ್ದೆಯಲ್ಲಿದ್ದರೂ, ನಾಪತ್ತೆ ಬಳಿಕ ತಮಗೂ ಅದಕ್ಕೂ ಸಂಬಂಧ ಇಲ್ಲ ಎನ್ನುವಂತೆ ಸಂಸ್ಥೆ ನಿರ್ಲಕ್ಷ್ಯ ವಹಿಸಿದೆ. ಪೊಲೀಸರೂ ಅಷ್ಟೇ ಸಿಸಿಟಿವಿಯ ಬೆನ್ನು ಬಿದ್ದು ತನಿಖೆಯನ್ನೂ ನಡೆಸಿಲ್ಲ. ಮಂಗಳಾದೇವಿ ಬಳಿ ಕಾಣ ಸಿಕ್ಕವರು ಆಮೇಲೆ ಎಲ್ಲಿ ಹೋಗಿದ್ದಾರೆ ಅನ್ನುವುದನ್ನು ಪತ್ತೆ ಮಾಡಲು ಆಗಿರಲಿಲ್ಲ.
Mangalore Fr Muller hospital medical college dean Urban DSouza missing for a month, no leads since a month. Dr Urban D’Souza, dean of Father Muller College of Allied Health Science, went missing from his residence in Valencia, Mangaluru, the police are yet to find a lead in the case. Dr D’Souza’s wife filed a missing report on September 26 at the Mangalore South City police station, after which the police constituted a search team to find him. However, according to police officials, no lead has been found so far. The police suspect that his phone network coverage was last traced near Ullal beach before it was switched off.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
09-09-25 03:07 pm
Mangalore Correspondent
ದಶಮ ಸಂಭ್ರಮದಲ್ಲಿ ಮಿಥುನ್ ರೈ ಸಾರಥ್ಯದ ಪಿಲಿನಲಿಕೆ ;...
09-09-25 02:30 pm
Mangalore Accident, Kulur, Death: ಕುಳೂರಿನಲ್ಲಿ...
09-09-25 11:48 am
Gopadi Beach Drowning, Kundapura: ಕುಂದಾಪುರ ;...
08-09-25 12:08 pm
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm