ಬ್ರೇಕಿಂಗ್ ನ್ಯೂಸ್
19-10-22 10:51 pm Udupi Correspondent ಕರಾವಳಿ
ಉಡುಪಿ, ಅ.19: ಜಗತ್ತಿನ ಅತ್ಯಂತ ದೊಡ್ಡ ಪ್ಯಾಸೆಂಜರ್ ವಿಮಾನ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ದುಬೈ ಮೂಲದ ಎಮಿರೇಟ್ಸ್ ಕಂಪನಿಯ ಏರ್ ಬಸ್ 380 ವಿಮಾನವನ್ನು ಉಡುಪಿ ಮೂಲದ ಪೈಲಟ್ ಸಂದೀಪ್ ಪ್ರಭು ಚಲಾಯಿಸಿಕೊಂಡು ಬಂದು ಸುರಕ್ಷಿತವಾಗಿ ಬೆಂಗಳೂರಿನ ನಿಲ್ದಾಣದಲ್ಲಿ ಇಳಿಸಿದ್ದಾರೆ.
15 ವರ್ಷಗಳಿಂದ ಪೈಲಟ್ ವೃತ್ತಿಯಲ್ಲಿರುವ ಸಂದೀಪ್ ಪ್ರಭು, ಅಲೆವೂರಿನ ಆರತಿ ಪ್ರಭು ಮತ್ತು ಶಿವರಾಯ ಪ್ರಭು ದಂಪತಿ ಎರಡನೇ ಪುತ್ರ. ಮೊದಲಿಗೆ ಫಿಲಿಪೈನ್ಸ್ ನಲ್ಲಿ ಪೈಲಟ್ ತರಬೇತಿ ಪಡೆದುಕೊಂಡಿದ್ದ ಬಳಿಕ ಫ್ರಾನ್ಸ್ ನಲ್ಲಿ ಉನ್ನತ ಮಟ್ಟದ ತರಬೇತಿ ಪಡೆದಿದ್ದರು. ಆನಂತರ, ದುಬೈ ಮೂಲದ ಎಮಿರೇಟ್ಸ್ ಕಂಪನಿಯಲ್ಲಿ ಪೈಲಟ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು.

ಇದಕ್ಕೂ ಹಿಂದೆ ಇದೇ ವಿಮಾನವನ್ನು ಮುಂಬೈನಲ್ಲಿಯೂ ಸಂದೀಪ್ ಪ್ರಭು ಮೊದಲ ಬಾರಿಗೆ ಇಳಿಸಿದ್ದರು. ಬೆಂಗಳೂರಿನಲ್ಲಿ ವಿಮಾನವನ್ನು ಲ್ಯಾಂಡ್ ಮಾಡಿಸಿದ ಬಳಿಕ ಕನ್ನಡ ಭಾಷೆಯಲ್ಲಿ ಅನೌನ್ಸ್ ಮಾಡುತ್ತಿದ್ದಂತೆ ವಿಮಾನದಲ್ಲಿದ್ದ ಪ್ರಯಾಣಿಕರು ಅಚ್ಚರಿಗೆ ಒಳಗಾಗಿದ್ದಾರೆ. ಬೆಂಗಳೂರಿನಲ್ಲಿ ಎರಡನೇ ಟರ್ಮಿನಲ್ ರೆಡಿಯಾಗಿದ್ದು, ಇದೀಗ ಜಗತ್ತಿನ 30 ರಾಷ್ಟ್ರಗಳಿಂದ ವಿಮಾನ ಸಂಚಾರಕ್ಕೆ ತೆರೆದುಕೊಂಡಿದೆ.
ಅ.30ರಿಂದ ಎಮಿರೇಟ್ಸ್ ಕಂಪನಿಯ ಎ380 ಏರ್ ಬಸ್ ವಿಮಾನವು ಬೆಂಗಳೂರು – ದುಬೈ ಮಧ್ಯೆ ದಿನವೂ ಸಂಚಾರ ನಡೆಸಲಿದೆ. ಪೈಲಟ್ ಸಂದೀಪ್ ಪ್ರಭು ದುಬೈನಲ್ಲಿಯೇ ವಾಸ್ತವ್ಯವಿದ್ದು, ಅವರಿಗೆ ಬೆಂಗಳೂರು ಎರಡನೇ ಮನೆಯಿದ್ದಂತೆ. ನೇರ ವಿಮಾನ ಸಂಚಾರ ಇರುವುದರಿಂದ ಬೆಂಗಳೂರಿಗೆ ಬೇರೆ ಬೇರೆ ವಿಮಾನಗಳನ್ನು ಚಲಾಯಿಸಿಕೊಂಡು ಬರುತ್ತಾರೆ.
World's largest passenger flight Airbus A380 owned by Emirates made its historic landing at the new terminal of Bengaluru's Kempegowda International Airport on Friday, October 14. The successful test flight was flown by pilot Sandeep Prabhu of Udupi.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
12-11-25 06:56 pm
Mangalore Correspondent
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm