ಬ್ರೇಕಿಂಗ್ ನ್ಯೂಸ್
18-10-22 02:18 pm Mangalore Correspondent ಕರಾವಳಿ
ಮಂಗಳೂರು, ಅ.17 : ಇತ್ತೀಚೆಗೆ ಕೇರಳದ ವ್ಯಕ್ತಿಯೊಬ್ಬರು ಕಾಲ್ನಡಿಗೆಯಲ್ಲೇ ಮೆಕ್ಕಾ ಹೋಗುವುದಾಗಿ ತೆರಳಿದ್ದರು. ಪಾಕಿಸ್ತಾನ ಗಡಿಯ ವರೆಗೂ ನಡೆದುಕೊಂಡೇ ಸಾಗಿದ್ದು ವರದಿಯಾಗಿತ್ತು. ಇದೀಗ ವಿಟ್ಲದ ಯುವಕನೊಬ್ಬ ಅದೇ ಮಾದರಿಯಲ್ಲಿ ಸೈಕಲನ್ನೇರಿ ಉನ್ನತ ಧಾರ್ಮಿಕ ಸಾಧನೆಯ ಉದ್ದೇಶ ಇಟ್ಟುಕೊಂಡು ಅಂತಾರಾಷ್ಟ್ರೀಯ ಗಡಿ ದಾಟಲು ಯೋಜನೆ ಹಾಕಿದ್ದಾನೆ.
ಕೇರಳ ಗಡಿಭಾಗ ನಿವಾಸಿ, ಬಂಟ್ವಾಳ ತಾಲೂಕಿನ ವಿಟ್ಲದ ಕನ್ಯಾನ ಗ್ರಾಮದ ಬೈರಿಕಟ್ಟೆಯ ಹಾಫಿಲ್ ಅಹ್ಮದ್ ಸಾಬಿತ್ ಹೊಸ ನಮೂನೆಯ ಸಾಧನೆಗೆ ಹೊರಟಿರುವಾತ. 21 ವರ್ಷದ ಹಾಫಿಲ್, ಅಕ್ಟೋಬರ್ 20 ರಂದು ಕೇರಳದ ತಿರುವನಂತಪುರಂನಿಂದ ಹೊರಟು ದೂರದ ಮಕ್ಕಾ, ಮದೀನಾ, ಈಜಿಪ್ಟ್ ವರೆಗೂ ಸೈಕಲ್ ಪ್ರಯಾಣದಲ್ಲಿ ತೆರಳಲಿದ್ದಾನೆ. ಕೇರಳದಿಂದ ಕರ್ನಾಟಕ, ಗೋವಾ, ಮಹಾರಾಷ್ಟ್ರ, ರಾಜಸ್ಥಾನ, ಹರಿಯಾಣ, ಪಂಜಾಬ್, ಜಮ್ಮು ಕಾಶ್ಮೀರ, ಲಡಾಖ್ ಹೋಗಿ ಅಲ್ಲಿಂದ ಪಾಕಿಸ್ತಾನ, ಇರಾನ್, ಇರಾಕ್, ಕುವೈತ್, ಸೌದಿ ಅರೇಬಿಯಾ, ಯುಎಇ, ಒಮಾನ್, ಜೋರ್ಡಾನ್, ಇಸ್ರೇಲ್ ಆಗಿ ಈಜಿಪ್ಟ್ ದೇಶದಲ್ಲಿ ಕೊನೆಯಾಗಲಿದೆ. ಈತನ ಸೈಕಲ್ ಯಾತ್ರೆ ಎರಡು ಖಂಡಗಳು, ಹತ್ತು ದೇಶಗಳ ಮೂಲಕ ಸಾಗಲಿದ್ದು ಸುಮಾರು 15 ಸಾವಿರ ಕಿಲೋಮೀಟರ್ ಉದ್ದಕ್ಕೆ ಸಾಗಲಿದೆ.


ಹಾಫಿಲ್ ಅಹ್ಮದ್ ಸಾಬಿತ್ ಅವರು ಲೌಕಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣ ಪಡೆಯುುತ್ತಿದ್ದಾರೆ. ಇವರು ಇಂಗ್ಲಿಷ್ನಲ್ಲಿ ಬಿಎ ಪದವಿ, ಉರ್ದು ಹಾಗೂ ಇಕ್ನೋ ವಿಶ್ವವಿದ್ಯಾಲಯದಿಂದ ಮನಃಶಾಸ್ತ್ರ ವಿಷಯದಲ್ಲಿ ಡಿಪ್ಲೊಮಾ ಅಧ್ಯಯನ ಮಾಡಿದ್ದಾರೆ. ಈಜಿಪ್ಟ್ನ ಅಲ್ ಅಝ್ಹರ್ ಯುನಿವರ್ಸಿಟಿಯಲ್ಲಿ ಉನ್ನತ ಧಾರ್ಮಿಕ ಶಿಕ್ಷಣಕ್ಕಾಗಿ ಅವಕಾಶ ಸಿಕ್ಕಿದ್ದು, ಮುಂದಿನ ವರ್ಷ ಅಲ್ಲಿ ಹಾಜರಾಗುವುದಕ್ಕಾಗಿ ಸೈಕಲ್ ನಲ್ಲಿ ಹೊರಡುವ ಶಪಥ ಮಾಡಿದ್ದಾನೆ. ಈ ಹಿಂದೆ ಸೈಕಲ್ನಲ್ಲಿ ಕೇರಳ ರಾಜ್ಯ ಸುತ್ತಿದ ಅನುಭವ ಹೊಂದಿದ್ದ ಹಾಫಿಲ್ ಅಹ್ಮದ್, ಈಜಿಪ್ಟ್ಗೆ ಸೈಕಲ್ನಲ್ಲಿ ತೆರಳಲು ನಿರ್ಧರಿಸಿದ್ದಾರೆ. ಪ್ರತಿ ದಿನ ನೂರು ಕಿಲೋಮೀಟರ್ ಪ್ರಯಾಣ ಬೆಳೆಸಿ, 200 ದಿನದಲ್ಲಿ ಈಜಿಪ್ಟ್ ತಲುಪುವ ಗುರಿಯನ್ನಿಟ್ಟುಕೊಂಡಿದ್ದಾರೆ. ಗೆಳೆಯರು ರಾತ್ರಿ ಅಲ್ಲಲ್ಲಿ ತಂಗುವ ವ್ಯವಸ್ಥೆ ಮಾಡಿದ್ದಾರೆ.
Hafiz Ahammed Sabith will hold a 15,000-kilometer bicycle expedition to Egypt via Madina for religious studies at Al-Azhar University. Hence, the bicycle expedition will start from Trivandrum on October 20. His religious education will start after seeking blessings from Madina," said Rashid Vittal, founder of MF Foundation.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
12-11-25 06:56 pm
Mangalore Correspondent
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm