ಬ್ರೇಕಿಂಗ್ ನ್ಯೂಸ್
18-10-22 01:55 pm Mangalore Correspondent ಕರಾವಳಿ
ಮಂಗಳೂರು, ಅ.18: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮೇಲೆ ಬೆದರಿಕೆ ಹಾಕಿದ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಸಿಐಡಿಗೆ ಒಪ್ಪಿಸಿದೆ. ಈಗಾಗಲೇ ಪ್ರಕರಣದಲ್ಲಿ ರಿಯಾಜ್ ಎಂಬ ಯುವಕನನ್ನು ಬಂಟ್ವಾಳ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ತನಿಖೆಯ ಸಂದರ್ಭದಲ್ಲಿ ಕೇವಲ ಓವರ್ ಟೇಕ್ ಮಾಡುವ ವಿಚಾರದಲ್ಲಿ ಬೈಗುಳ ನೀಡಿದ್ದೇನೆ ಹೊರತು ವೈಯಕ್ತಿಕ ದ್ವೇಷ ಇಲ್ಲವೆಂದು ತಿಳಿದುಬಂದಿತ್ತು.
ಈ ಬಗ್ಗೆ ತನಿಖೆ ನಡೆಸಿದ್ದ ಎಸ್ಪಿ ಋಷಿಕೇಷ್ ಸೋನವಾಣೆ, ಪ್ರಕರಣದಲ್ಲಿ ಯಾವುದೇ ಶಸ್ತ್ರ ಬಳಕೆಯಾಗಿಲ್ಲ. ತಲವಾರು ಕಂಡುಬಂದಿಲ್ಲ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ, ಓವರ್ ಟೇಕ್ ವಿಚಾರದಲ್ಲಿ ಘಟನೆ ನಡೆದಿತ್ತು. ಆರೋಪಿ ರಿಯಾಜ್ ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲ. ಶಾಸಕರು ಪ್ರಯಾಣಿಸುತ್ತಿದ್ದ ಖಾಸಗಿ ಕಾರು ಓವರ್ ಟೇಕ್ ಮಾಡಲು ಬಿಡಲಿಲ್ಲವೆಂದು ಹಿಂದಿನಿಂದ ತೆರಳುತ್ತಿದ್ದ ಸ್ಕಾರ್ಪಿಯೋ ಚಾಲಕ ರಿಯಾಜ್ ಫರಂಗಿಪೇಟೆಯಲ್ಲಿ ಶಾಸಕರಿದ್ದ ವಾಹನದ ಚಾಲಕನಿಗೆ ದಬಾಯಿಸಿದ್ದರು. ಶಾಸಕರಿಗೆ ಬೆದರಿಕೆ ಹಾಕುವ ವಿಚಾರ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಮರುದಿನ ಒತ್ತಡಕ್ಕೆ ಒಳಗಾಗಿಯೋ ಏನೋ, ಆರೋಪಿ ಕಾರಿನಲ್ಲಿ ಸ್ಪಾನರ್ ಪತ್ತೆಯಾಗಿತ್ತು. ಆತ ಬೆದರಿಕೆ ಹಾಕುವ ಸಂದರ್ಭದಲ್ಲಿ ತಲವಾರಿನಂತೆ ಸ್ಪಾನರ್ ತೋರಿಸಿದ್ದ ಅನ್ನುವುದನ್ನು ಎಸ್ಪಿ ಹೇಳಿದ್ದರು.
ಎಸ್ಪಿ ನೀಡಿದ್ದ ಸ್ಪಷ್ಟನೆಯಿಂದ ಶಾಸಕ ಹರೀಶ್ ಪೂಂಜಾ ತೀವ್ರ ಮುಜುಗರಕ್ಕೊಳಕ್ಕೆ ಒಳಗಾಗಿದ್ದರು. ಹರೀಶ್ ಪೂಂಜ ಕಾರು ಚಾಲಕ ಬಂಟ್ವಾಳ ಗ್ರಾಮಾಂತರ ಠಾಣೆಗೆ ನೀಡಿದ್ದ ದೂರಿನಲ್ಲಿ ಆರೋಪಿ ತಲವಾರು ತೋರಿಸಿ ಬೆದರಿಕೆ ಹಾಕಿದ್ದ ಎಂದು ದೂರಲಾಗಿತ್ತು. ಈ ನಡುವೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ಹರೀಶ್ ಪೂಂಜಾ, ಕಾರಿನಲ್ಲಿ ಒಬ್ಬನೇ ಇದ್ದ, ಆತನೇ ಕಾರು ಚಲಾಯಿಸಿಕೊಂಡಿದ್ದಲ್ಲದೆ ತಲವಾರು ಹಿಡಿದುಕೊಂಡಿದ್ದ ಎಂದು ಹೇಳಿರುವ ವಿಡಿಯೋ ಜಾಲತಾಣದಲ್ಲಿ ಟ್ರೋಲ್ ಆಗಿತ್ತು. ಇದೀಗ ರಾಜ್ಯ ಸರಕಾರ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸಿಐಡಿ ಪೊಲೀಸರಿಗೆ ಒಪ್ಪಿಸಿದೆ. ಸಿಐಡಿ ತನಿಖೆಯಲ್ಲಿ ಸ್ಪಾನರ್ ಜೊತೆಗೆ ಹೊಸ ವಿಚಾರ ಏನು ಬೆಳಕಿಗೆ ಬರುತ್ತದೆ ಅನ್ನೋದು ನೋಡಬೇಕು.
Mangalore Life threat to MLA Harish Poonja, case handed over to CID for investigation.
09-09-25 09:14 pm
Bangalore Correspondent
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
09-09-25 09:38 pm
HK News Desk
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
09-09-25 08:01 pm
Mangalore Correspondent
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
Mangalore, Bajilakere, Suicide: ನನ್ನವರೇ ನನ್ನನ...
09-09-25 03:07 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm