ಬ್ರೇಕಿಂಗ್ ನ್ಯೂಸ್
11-10-22 08:19 pm Mangalore Correspondent ಕರಾವಳಿ
ಮಂಗಳೂರು, ಅ.11: ಲ್ಯಾಪ್ ಟಾಪ್ ಕೊಡಿಸುತ್ತೇನೆಂದು ಹೇಳಿ ನಗರದ ಉದ್ಯಮಿಯೊಬ್ಬರ ಬಳಿಯಿಂದ ಹಣ ಪಡೆದು ವಂಚಿಸಿರುವ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನಲ್ಲಿ ಶಾಪ್ ಹೊಂದಿರುವ ಉದ್ಯಮಿ, ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಗಳು, ಬಿಡಿ ಭಾಗಗಳನ್ನು ಮಾರಾಟ ಮಾಡುವ ಉದ್ಯಮ ಹೊಂದಿದ್ದಾರೆ. ಇವರಿಗೆ ಜೈಪುರದ ವೈಶಾಲಿ ನಗರದ ಮನೋಜ್ ಚೌರಾಸಿಯಾ ಎಂಬಾತ ಫೋನ್ ಕರೆ ಮಾಡಿ, ನಾವು ಕಡಿಮೆ ದರಕ್ಕೆ ಲ್ಯಾಪ್ ಟಾಪ್ ಪೂರೈಸುತ್ತೇವೆ ಎಂದು ನಂಬಿಸಿದ್ದಾನೆ. ಅದರಂತೆ, ಕಳೆದ ಆಗಸ್ಟ್ ತಿಂಗಳಲ್ಲಿ ಎರಡು ಲ್ಯಾಪ್ ಟಾಪ್ ಖರೀದಿಸಿದ್ದರು.

ಆನಂತರ ಕೆಲವು ದಿನಗಳ ಬಳಿಕ ಮನೋಜ್ ಚೌರಾಸಿಯಾ ಮತ್ತು ಆತನ ಅಸಿಸ್ಟೆಂಟ್ ಸುರಕ್ಷಾ ಖಂಡೇಲ್ ವಾಲಾ ಫೋನ್ ಕರೆ ಮಾಡಿ, ಮತ್ತಷ್ಟು ಲ್ಯಾಪ್ ಟಾಪ್ ಖರೀದಿಸುವಂತೆ ಆಫರ್ ಮಾಡಿದ್ದಾರೆ. ಅದರಂತೆ, ಉದ್ಯಮಿ 15 ಎಚ್ ಪಿ ಬ್ರಾಂಡಿನ ಲ್ಯಾಪ್ ಟಾಪ್ ಮತ್ತು ಕ್ಯಾರಿ ಬ್ಯಾಗನ್ನು ನೀಡುವಂತೆ ಡೀಲ್ ಕುದುರಿಸಲು ಒಪ್ಪಿದ್ದರು. ಅಲ್ಲದೆ, ಸಾಮಗ್ರಿ ಪೂರೈಸುವುದಕ್ಕಾಗಿ 5.70 ಲಕ್ಷ ರೂ.ಗಳನ್ನು ಮನೋಜ್ ಚೌರಾಸಿಯಾಗೆ ನೀಡಿದ್ದರು. ಆದರೆ ಚೌರಾಸಿಯಾ ಹಣ ಪಡೆದು ಲ್ಯಾಪ್ ಟಾಪ್ ನೀಡದೆ ವಂಚಿಸಿದ್ದಾರೆಂದು ದೂರು ನೀಡಲಾಗಿದೆ.
ಪೊಲೀಸರು ಪರಿಶೀಲನೆ ನಡೆಸಿದಾಗ ಮನೋಜ್ ಚೌರಾಸಿಯಾ ಮಂಗಳೂರಿನಲ್ಲೇ ಹಲವರಿಗೆ ಇದೇ ರೀತಿ ಹಣ ಪಡೆದು ಲ್ಯಾಪ್ ಟಾಪ್ ನೀಡದೆ ವಂಚಿಸಿದ್ದಾನೆಂದು ಗೊತ್ತಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.
A case is filed in which it is accused that a person was fleeced Rs 5.70 lac on the pretext of supplying laptops. An entrepreneur from the city is selling spare parts of laptop and computers. He was approached by Manoj Chaurasia of Vaishali city in Jaipur saying that he will supply laptops at low price. Accordingly, in the month of August, the city entrepreneur bought two laptops from him.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm