ಬ್ರೇಕಿಂಗ್ ನ್ಯೂಸ್
19-09-22 10:13 pm Mangalore Correspondent ಕರಾವಳಿ
ಪುತ್ತೂರು, ಸೆ.19 : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಚಲನ ಎಬ್ಬಿಸಿದ ಸಂದರ್ಭದಲ್ಲಿ ಬೆಳ್ಳಾರೆಗೆ ಹೊರಟಿದ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸ್ಥಳಕ್ಕೆ ಬರಲು ಮುಂದಾಗಿದ್ದರು. ಆದರೆ ಶಾಂತಿ ಕದಡುವ ನೆಪದಲ್ಲಿ ಮುತಾಲಿಕ್ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ನಿರ್ಬಂಧ ತೆರವಾಗುತ್ತಿದ್ದಂತೆ ಸೋಮವಾರ ಮುತಾಲಿಕ್ ಪ್ರವೀಣ್ ಮನೆಗೆ ಭೇಟಿಯಿತ್ತು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಇದೇ ವೇಳೆ, ಮಾಧ್ಯಮಕ್ಕೆ ಮಾತನಾಡಿದ ಮುತಾಲಿಕ್ ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಬಂಧಿತರಿಗೆ ಗಲ್ಲು ಶಿಕ್ಷೆ ನೀಡಬೇಕು. ಒಂದು ವರ್ಷದೊಳಗೆ ಕೊಲೆಗಡುಕರನ್ನು ನೇಣಿಗೆ ಹಾಕಬೇಕು. ಇದೇ ರಾಜ್ಯ ಸರಕಾರ ಪ್ರವೀಣ್ ನೆಟ್ಟಾರು ಅವರಿಗೆ ನೀಡುವ ನಿಜವಾದ ಶ್ರದ್ಧಾಂಜಲಿ. ಎನ್ಐಎ ಇನ್ನೊಂದು ತನಿಖೆ ಮಾಡಿದ ಮಾತ್ರಕ್ಕೆ ನ್ಯಾಯ ಸಿಗುವುದಿಲ್ಲ. ಪ್ರವೀಣ್ ನೆಟ್ಟಾರ್ ಕೊಲೆಗಡುಕರಿಗೆ ಗಲ್ಲು ಶಿಕ್ಷೆ ಆಗುವ ವರೆಗೂ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.


ಮೃತ ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಸರಕಾರ ನೀಡಿದ ಭರವಸೆ ಈಡೇರಿಸಬೇಕು. ಪ್ರವೀಣ್ ಪತ್ನಿಗೆ ಸಿಎಂ ಕಚೇರಿಯಲ್ಲಿ ಉದ್ಯೋಗ ನೀಡುವ ಭರವಸೆ ಮುಖ್ಯಮಂತ್ರಿ ನೀಡಿದ್ದಾರೆ. ಕೂಡಲೇ ಭರವಸೆಯಂತೆ ಆದೇಶ ಹೊರಡಿಸಬೇಕು. ಆಶ್ವಾಸನೆ ಈಡೇರಿಸದಿದ್ದರೆ ಸಿಎಂ ಮನೆ ಮುಂದೆ ಧರಣಿ ನಡೆಸುತ್ತೇವೆ. ಮಾತು ತಪ್ಪಿದರೆ ಸಿಎಂ ಮುಖಕ್ಕೆ ಮಸಿ ಬಳಿಯುವುದಕ್ಕೂ ಹೇಸುವುದಿಲ್ಲ ಎಂದು ಮುತಾಲಿಕ್ ಎಚ್ಚರಿಸಿದರು.

ಪ್ರವೀಣ್ ಹತ್ಯೆ ಹೆಣ್ಣು, ಹೊನ್ನು ಅಥವಾ ಇನ್ನಾವುದೇ ದ್ವೇಷಕ್ಕಾಗಿ ನಡೆದಿಲ್ಲ. ಹಿಂದುತ್ವದ ಪರ ಇದ್ದಾನೆ, ಸಮಾಜದಲ್ಲಿ ಸಂಘಟನೆ ನಡೆಸುತ್ತಾನೆ ಎಂಬ ಕಾರಣಕ್ಕೆ ಟಾರ್ಗೆಟ್ ಮಾಡಿ ಕೊಂದಿದ್ದಾರೆ. ಇಂಥ ಇಸ್ಲಾಮಿಕ್ ಗೂಂಡಾಗಳನ್ನು ಭಾರತ ನೆಲದ ಮೇಲಿರಲು ಅವಕಾಶ ನೀಡಬಾರದು. ಇಂತಹ ರಾಕ್ಷಸರ ಕುಲವನ್ನು ಸರ್ವನಾಶ ಮಾಡುವವರೆಗೂ ಬಿಡುವುದಿಲ್ಲ. ಇವರ ಇಂಥ ಮಾನಸಿಕತೆಯನ್ನು ಸಂಪೂರ್ಣವಾಗಿ ನಾಶ ಮಾಡುತ್ತೇವೆ. ಹಿಂದು ಸಮಾಜ ಈಗ ಜಾಗೃತವಾಗಿದೆ. ಇಂಥ ಕೃತ್ಯಕ್ಕೆ ಸೂಕ್ತ ಉತ್ತರ ನೀಡುತ್ತದೆ ಎಂದರು.

ಪ್ರವೀಣ್ ನೆಟ್ಟಾರು ಪ್ರಕರಣದ ಕೊಲೆಗಡುಕರಿಗೆ ಜಾಮೀನು ನೀಡಬಾರದು. ಅವರಿಗೆ ಜಾಮೀನು ಕೊಟ್ಟರೆ ಹಿಂದು ಸಮಾಜ ಹಾಗೇ ಬಿಡುವುದಿಲ್ಲ. ಕೊಲೆ ಗಡುಕರಿಗೆ ಯಾವುದೇ ಪರಿಸ್ಥಿತಿಯಲ್ಲಿ ಜಾಮೀನು ಆಗದಂತೆ ಸರಕಾರ ಜವಾಬ್ದಾರಿ ವಹಿಸಬೇಕು. ಇಂಥ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ನಮಗೆ ಎನ್ಐಎ ತನಿಖೆಯ ಮೇಲೆ ಭರವಸೆ ಇಲ್ಲ. ಹಿಂದೆ ಎನ್ಐಎ ನಡೆಸಿದ ತನಿಖೆಯಿಂದ ಏನೂ ಆಗಿಲ್ಲ. ಕೂಡಲೇ ಹಂತಕರಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಿ ಎಂದು ಸರ್ಕಾರಕ್ಕೆ ಪ್ರಮೋದ್ ಮುತಾಲಿಕ್ ಹೇಳಿದರು.
If Praveen Nettaru doesn't get job in CMs office throw ink on Bommais face says Pramod Muthalik.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm