ಬ್ರೇಕಿಂಗ್ ನ್ಯೂಸ್
15-09-22 06:20 pm Mangalore Correspondent ಕರಾವಳಿ
ಮಂಗಳೂರು, ಸೆ.15 : ಸುರತ್ಕಲ್ ಎನ್ ಐ ಟಿ ಕೆ ಬಳಿಯಲ್ಲಿರುವ ಅಕ್ರಮ ಟೋಲ್ ಗೇಟ್ ಕಡೆಗೂ ತೆರವುಗೊಳ್ಳುವುದು ಬಹುತೇಕ ಖಚಿತ ಆಗಿದೆ. ಟೋಲ್ ತೆರವಾದರೆ ಅಲ್ಲಿ ಕೆಲಸಕ್ಕಿದ್ದ 30ರಷ್ಟು ಕಾರ್ಮಿಕರು ಕೆಲಸ ಕಳೆದುಕೊಳ್ಳಲಿದ್ದಾರೆ. ಅವರ ಜೀವನ ಭದ್ರತೆಗಾಗಿ ಶಿಕ್ಷಣ, ಸಾಮರ್ಥ್ಯ ಅನುಸರಿಸಿ ಬೇರೆ ಕಡೆಗಳಲ್ಲಿ ಉದ್ಯೋಗ ದೊರಕಿಸುವ ಭರವಸೆ ನೀಡುತ್ತೇನೆ ಎಂದು ಕೆಪಿಸಿಸಿ ಸಂಯೋಜಕಿ, ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಹೇಳಿದ್ದಾರೆ.
ಸುದ್ದಿಗೋಷ್ಟಿ ಕರೆದು ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ಟೋಲ್ ಗೇಟನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ, ಸಂಸದ ನಳಿನ್ ಕುಮಾರ್ ಕಟೀಲ್ ತೆರವು ಮಾಡುವುದಾಗಿ ದಿನಾಂಕದ ಮೇಲೆ ದಿನಾಂಕ ಘೋಷಣೆ ಮಾಡಿದ್ದರೂ ಟೋಲ್ ಮುಚ್ಚಲು ಅವರಿಂದ ಸಾಧ್ಯವಾಗಿಲ್ಲ. ನೂರಾರು ಸಮಾನ ಮನಸ್ಕ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು ಜೊತೆ ಸೇರಿ ಟೋಲ್ ಗೇಟ್ ವಿರೋಧಿ ಸಮಿತಿ ನಡೆಸಿರುವ ಹೋರಾಟಕ್ಕೆ ಸದ್ಯದಲ್ಲೇ ಗೆಲುವು ಸಿಗಲಿದೆ. ಕೆಲವೇ ಸಮಯದಲ್ಲಿ ಟೋಲ್ ಕೇಂದ್ರ ಅಲ್ಲಿಂದ ಎತ್ತಂಗಡಿ ಆಗುವುದು ನಿಶ್ಚಿತ. ಸದ್ಯ ಟೋಲ್ ಗೇಟ್ ನಲ್ಲಿ 31ಕ್ಕೂ ಹೆಚ್ಚು ಮಂದಿ ಯುವಕ-ಯುವತಿಯರು ಕೆಲಸ ಮಾಡುತ್ತಿದ್ದು ಟೋಲ್ ತೆರವುಗೊಂಡರೆ ಅವರ ಕುಟುಂಬದ ಜೀವನ ನಿರ್ವಹಣೆ ಕಷ್ಟವಾಗಲಿದೆ. ಇದನ್ನು ಮನಗಂಡು ಅವರಿಗೆ ಮುಂದಿನ ದಿನಗಳಲ್ಲಿ ಉದ್ಯೋಗ ನೀಡುವ ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ.

ಸುರತ್ಕಲ್ ಟೋಲ್ ಗೇಟ್ ನಲ್ಲಿ ಒಟ್ಟು 31 ಮಂದಿ ಕಾರ್ಮಿಕರು ದುಡಿಯುತ್ತಿದ್ದು ಅವರಲ್ಲಿ ಯುವಕ-ಯುವತಿಯರು ಸೇರಿದ್ದಾರೆ. ಟೋಲ್ ತೆರವುಗೊಳ್ಳುವುದರಿಂದ ಅವರು ಉದ್ಯೋಗ ಕಳೆದುಕೊಳ್ಳಲಿದ್ದು ಕುಟುಂಬಕ್ಕೆ ಆರ್ಥಿಕ ಹೊರೆ ಬೀಳಲಿದೆ. ಇದನ್ನು ಮನಗಂಡು ಅವರ ವಿದ್ಯಾರ್ಹತೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಉದ್ಯೋಗ ನೀಡಲು ಈಗಾಗಲೇ ವಿವಿಧ ಕಂಪೆನಿಗಳು ಮತ್ತು ಉದ್ಯಮಿಗಳ ಜೊತೆ ಚರ್ಚಿಸಿದ್ದೇನೆ ಎಂದು ಪ್ರತಿಭಾ ಹೇಳಿದರು.
ಇದಲ್ಲದೆ, ಟೋಲ್ ಗೇಟ್ ನಲ್ಲಿ ದುಡಿಯುತ್ತಿರುವ ಕಾರ್ಮಿಕರ ಮೇಲೆ ಹತ್ತಾರು ಕ್ರಿಮಿನಲ್ ಕೇಸ್ ಗಳಿದ್ದು ಟೋಲ್ ತೆರವುಗೊಂಡ ಬಳಿಕ ಅತಂತ್ರ ಸ್ಥಿತಿ ಎದುರಿಸಲಿದ್ದಾರೆ. ಕಾರ್ಮಿಕರು ಮತ್ತವರ ಕುಟುಂಬ ಸದಸ್ಯರು ಸಂಪರ್ಕದಲ್ಲಿದ್ದು ಟೋಲ್ ತೆರವುಗೊಂಡ ತಕ್ಷಣ ಅವರ ಉದ್ಯೋಗ ಭದ್ರತೆಗೆ ಸೂಕ್ತ ಕ್ರಮ ಜರುಗಿಸುವುದಾಗಿ ಪ್ರತಿಭಾ ತಿಳಿಸಿದ್ದಾರೆ.
Surathkal toll gate closure, staff will be given new job says congress Pratibha Kulai.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
14-10-26 08:40 pm
HK News Desk
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
14-10-26 09:09 pm
Mangaluru Staffer
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm