ಬ್ರೇಕಿಂಗ್ ನ್ಯೂಸ್
28-08-22 02:10 pm Udupi Correspondent ಕರಾವಳಿ
ಉಡುಪಿ, ಆಗಸ್ಟ್ 28: ಉಡುಪಿ – ಪೆರಂಪಳ್ಳಿ ರಸ್ತೆಯ ಅವ್ಯವಸ್ಥೆ, ಗುಂಡಿ ಬಿದ್ದಿರುವುದನ್ನು ಸರಿಪಡಿಸದ ಶಾಸಕ ರಘುಪತಿ ಭಟ್ ಅವರನ್ನು ಯುವತಿಯೊಬ್ಬರು ತರಾಟೆಗೆತ್ತಿಕೊಂಡು ವಿಡಿಯೋ ಮಾಡಿದ್ದು, ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳಿಗೆ ತಪರಾಕಿ ಬೀಸಿದಂತಾಗಿದೆ.
ಪೆರಂಪಳ್ಳಿ ರಸ್ತೆಯಲ್ಲೇ ನೀವು ಹೋಗುತ್ತೀರಲ್ಲಾ.. ನಿಮಗೆ ಇಲ್ಲಿ ಗುಂಡಿ ಬಿದ್ದಿರುವುದು ಕಾಣಲ್ವಾ.. ನಿಮ್ಮದು ಸರಕಾರಿ ಕಾರು, ಎದ್ದು ಬಿದ್ದು ಹೋದರೂ ಏನೂ ಅನಿಸೋದಿಲ್ಲ. ನಾವು ಕಷ್ಟಪಟ್ಟು ಸ್ಕೂಟರ್, ಕಾರು ತಗೊಂಡಿರುತ್ತೇವೆ. ಒಂದು ಗುಂಡಿಗೆ ಬಿದ್ದಾಗ ವ್ಯಥೆ ಪಡುತ್ತೇವೆ. ನಿಮಗೆ ಒಂಚೂರಾದ್ರೂ ಮನುಷ್ಯತ್ವ ಇಲ್ಲವೇ ಎಂದು ಯುವತಿ ಪ್ರಶ್ನೆ ಮಾಡಿದ್ದಾರೆ.
ಮೊನ್ನೆ ಒಂದು ದಿನ ಇದೇ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಸ್ಕೂಟರಿನಲ್ಲಿ ತೆರಳುತ್ತಿದ್ದಾಗ ಗುಂಡಿಗೆ ಬಿದ್ದು ಗಾಯಗೊಂಡಿದ್ದರು. ನಮ್ಮ ಕಣ್ಣೆದುರಲ್ಲೇ ಘಟನೆ ನಡೆದಿತ್ತು. ಅಲ್ಲಲ್ಲಿ ಗುಂಡಿ ಬಿದ್ದು ರಸ್ತೆ ಹಾಳಾಗಿದ್ದರೂ, ಅದನ್ನು ದುರಸ್ತಿ ಪಡಿಸೋಕೆ ಆಗಿಲ್ಲ. ನಾವು ವಾಹನ ತೆರಿಗೆ, ರಸ್ತೆ ತೆರಿಗೆ, ಟೋಲ್ ಗೇಟ್ ಎಲ್ಲ ಯಾಕೆ ಕಟ್ಟುವುದು. ಈ ಗುಂಡಿ ಬಿದ್ದ ರಸ್ತೆಯಲ್ಲಿ ಪ್ರಯಾಣಿಸಲು ನಾವು ತೆರಿಗೆ ಕಟ್ಟಬೇಕೇ. .ಟೋಲ್ ಕಟ್ಟುವ ಅಗತ್ಯವಿದೆಯೇ..?
ನೀವ್ಯಾಕೆ ಜನಪ್ರತಿನಿಧಿಗಳೆಲ್ಲ ಮನುಷ್ಯತ್ವ ಹೀನರಾಗಿ ವರ್ತಿಸುತ್ತಿದ್ದೀರಿ. ಮಂಗಳೂರಿನಲ್ಲಿ ಮೋದಿ ಬರುತ್ತಿರುವ ಕಾರಣಕ್ಕೆ ರಸ್ತೆ ಸರಿಪಡಿಸುತ್ತಿದ್ದಾರೆ. ಮೋದಿ ಕಾರಣದಿಂದಾದ್ರೂ ರಸ್ತೆ ಸರಿ ಆಗ್ತಾ ಇದೆ. ಉಡುಪಿಗೆ ರಸ್ತೆ ಸರಿ ಮಾಡಲು ಯಾರು ಬರಬೇಕು.. ಮೋದಿಯೇ ಬರಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ. ನಿಮ್ಮಲ್ಲಿ ಬೇರೆ ಯಾವುದೂ ಕೇಳಿಕೊಳ್ಳುವುದಿಲ್ಲ. ಕನಿಷ್ಠ ರಸ್ತೆಯನ್ನು ಮಾತ್ರ ಸರಿಪಡಿಸಿಕೊಡಿ ಎಂದು ಹೇಳಿ ಈ ವಿಡಿಯೋ ಶಾಸಕರಿಗೆ ಮುಟ್ಟುವ ವರೆಗೂ ವೈರಲ್ ಮಾಡುವಂತೆ ಮನವಿ ಮಾಡಿದ್ದಾರೆ.
MLA Raghupati Bhat has responded to a video posted on the social media demanding responsible answers from him over the bad condition of roads. On Friday August 26, Komal Jennifer D’Souza, a resident of Udupi had taken the MLA to task over the pathetic condition of Perampalli-Manipal road. The video had gone viral within minutes of posting it on social media.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 07:01 pm
HK News Staffer
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm