ಬ್ರೇಕಿಂಗ್ ನ್ಯೂಸ್
15-08-22 12:28 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 15: ಮಂಗಳೂರು ವಿಮಾನ ನಿಲ್ದಾಣದಲ್ಲಿ ವಾಟ್ಸಪ್ ಮೆಸೇಜ್ ಚಾಟಿಂಗ್ ಮೂಲಕ ಆತಂಕಕ್ಕೆ ಕಾರಣವಾಗಿದ್ದ ಯುವಕ- ಯುವತಿಯನ್ನು ಬಜ್ಪೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂಡಿಗೋ ವಿಮಾನ ಸಂಸ್ಥೆಯ ಮ್ಯಾನೇಜರ್ ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ದೀಪಯಾನ್ ಮಾಜಿ (23) ಮತ್ತು ಸಿಮ್ರಾನ್ ಟಾಮ್ (23) ಪೊಲೀಸರು ವಶಕ್ಕೆ ಪಡೆದ ಯುವಕ ಮತ್ತು ಯುವತಿ. ಇವರಿಬ್ಬರು ಕೂಡ ಹಿಂದೆ ಮಣಿಪಾಲದಲ್ಲಿ ಐಐಟಿ ಕಲಿತಿದ್ದು ಕ್ಲಾಸ್ ಮೇಟ್ ಎನ್ನಲಾಗುತ್ತಿದೆ. ದೀಪಯಾನ್ ಮಾಜಿ ಗುಜರಾತಿನ ವಡೋದರಾದಲ್ಲಿ ಎಲ್ ಎಂಡ್ ಟಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಗಿಟ್ಟಿಸಿದ್ದಾನೆ. ಎರಡು ದಿನಗಳ ಹಿಂದೆ ಮಣಿಪಾಲಕ್ಕೆ ಬಂದು ಭಾನವಾರ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಹಿಂತಿರುಗುತ್ತಿದ್ದರು. ದೀಪಯಾನ್ ಮುಂಬೈಗೆ ಹೊರಟಿದ್ದರೆ, ಯುವತಿ ಬೆಂಗಳೂರಿಗೆ ಹೊರಟಿದ್ದಳು. ಭಾನುವಾರ ಬೆಳಗ್ಗೆ 11 ಗಂಟೆಗೆ ಇಂಡಿಗೋ ವಿಮಾನದಲ್ಲಿ ದೀಪಯಾನ್ ಮುಂಬೈಗೆ ಹೊರಟಿದ್ದ. ಇದೇ ವೇಳೆ, ಏರ್ಪೋರ್ಟ್ ಹೊರಗಡೆ ವಿಮಾನಕ್ಕಾಗಿ ಕಾಯುತ್ತಿದ್ದ ಸಿಮ್ರಾನ್ ಟಾಮ್ ಆತನನ್ನು ಗಮನಿಸಿ ಮೆಸೇಜ್ ಚಾಟಿಂಗ್ ಮಾಡುತ್ತಿದ್ದಳು.

ಸಂಭಾಷಣೆ ನಡುವೆ, ಯು ಆರ್ ದಿ ಬಾಂಬರ್ ಎಂದು ಯುವತಿ ಸಿಮ್ರಾನ್, ದೀಪಯಾನ್ ಮಾಜಿಗೆ ಮೆಸೇಜ್ ಮಾಡಿದ್ದಳು. ಯುವಕನ ಮೊಬೈಲ್ ಚಾಟಿಂಗನ್ನು ಗಮನಿಸಿದ್ದ ಹಿಂದಿನ ಸೀಟಿನಲ್ಲಿದ್ದ ಮಹಿಳೆಯೊಬ್ಬರು ವಿಮಾನ ಸಿಬಂದಿಗೆ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಆತಂಕಕ್ಕೆ ಒಳಗಾದ ವಿಮಾನ ನಿಲ್ದಾಣದ ಸಿಬಂದಿ ಮತ್ತು ಭದ್ರತಾ ಸಿಬಂದಿ ಟೇಕಾಫ್ ರೆಡಿಯಾಗಿದ್ದ ವಿಮಾನವನ್ನು ಸ್ಥಗಿತಗೊಳಿಸಿ ತಪಾಸಣೆ ನಡೆಸಿದ್ದರು. ವಿಮಾನವನ್ನು ಹಳೆ ಏರ್ಪೋರ್ಟಿಗೆ ಕರೆದೊಯ್ದು ಅಲ್ಲಿ ಕೂಲಂಕುಷ ತಪಾಸಣೆ ನಡೆಸಿದ ಬಳಿಕ ಸಂಜೆ 5 ಗಂಟೆಗೆ ಪ್ರಯಾಣಕ್ಕೆ ಅನುಮತಿ ನೀಡಲಾಗಿತ್ತು. ಬಳಿಕ 186 ಪ್ರಯಾಣಿಕರನ್ನು ಹೊತ್ತಿದ್ದ ವಿಮಾನ ಸಾವಧಾನದಿಂದ ಹೊರಟಿತ್ತು. ಆದರೆ, ಯುವಕ- ಯುವತಿಯನ್ನು ಸಿಐಎಸ್ಎಫ್ ಭದ್ರತಾ ಸಿಬಂದಿ ತೀವ್ರ ವಿಚಾರಣೆ ನಡೆಸಿದ್ದು, ಕೊನೆಗೆ ಬಜ್ಪೆ ಪೊಲೀಸರ ವಶಕ್ಕೆ ನೀಡಿದ್ದಾರೆ.
ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಭದ್ರತೆಗೆ ಆತಂಕವೊಡ್ಡುವ ರೀತಿ ಮೆಸೇಜ್ ಮಾಡಿರುವುದರ ಹಿನ್ನೆಲೆಯೇನು ಅನ್ನೋದ್ರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಯುವತಿ ತಮಾಷೆಗೆ ಮೆಸೇಜ್ ಮಾಡಿದ್ದೆ ಎಂದಿದ್ದರೂ, ಅದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆಗಾಗಿ ತಮ್ಮ ವಶಕ್ಕೆ ಪಡೆದಿದ್ದಾರೆ. ಯುವಕ- ಯುವತಿ ಇಬ್ಬರು ಕೂಡ ಐಐಟಿ ಕಲಿತವರಾಗಿದ್ದು, ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಈ ರೀತಿ ಮೆಸೇಜ್ ಮಾಡಿರುವುದು ಸಹಜವಾಗಿಯೇ ಆತಂಕ ಮೂಡಿಸಿದೆ.
Bomb text chat by boy and girl at Mangalore International airport creates panic, both from IIT Uttarpradesh taken to custody by Bajpe police and serious investigation is going on. A flight journey was cut short and all the passengers were alighted from the aircraft and the flight was intensely checked for any sabotage on Sunday, August 14, in the afternoon at the international airport here.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 04:39 pm
HK News Staffer
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm