ಬ್ರೇಕಿಂಗ್ ನ್ಯೂಸ್
14-08-22 04:47 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 14: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಅತ್ಯಂತ ವಿಶಿಷ್ಟವಾಗಿ ತ್ರಿವರ್ಣ ರಚಿಸಲಾಗಿದೆ. ದೇವಸ್ಥಾನದ ಮುಂದಿನ ಅಂಗಣದಲ್ಲಿ ಧವಸ ಧಾನ್ಯಗಳನ್ನಷ್ಟೇ ಬಳಸಿಕೊಂಡು ಆಕರ್ಷಕ ತ್ರಿವರ್ಣ ರಚಿಸಿದ್ದು ನೋಡುಗರ ಗಮನ ಸೆಳೆದಿದೆ.
ಗುರು ಬೆಳದಿಂಗಳು ಸಂಸ್ಥೆಯ ಆಶ್ರಯದಲ್ಲಿ ಮಂಗಳೂರಿನ ಕಲಾವಿದ ಮತ್ತು ಛಾಯಾಗ್ರಾಹಕ ಪುನಿಕ್ ಶೆಟ್ಟಿ ನೇತೃತ್ವದಲ್ಲಿ ಕ್ಷೇತ್ರದ ಸಿಬಂದಿ ಮತ್ತು ಗುರು ಬೆಳದಿಂಗಳು ಸಂಸ್ಥೆಯ ಸದಸ್ಯರು ಸೇರಿ 18 ಗಂಟೆಗಳ ಪರಿಶ್ರಮದಿಂದ ಆಕರ್ಷಕ ತ್ರಿವರ್ಣ ರಚಿಸಿದ್ದಾರೆ. ಯಾವುದೇ ಬಣ್ಣಗಳನ್ನು ಬಳಸದೆ ಕೇವಲ ಧಾನ್ಯ, ತರಕಾರಿ, ಹೂಗಳನ್ನಷ್ಟೇ ಬಳಸ್ಕೊಂಡು ತ್ರಿವರ್ಣದ ಆಕರ್ಷಣೆ ಮೂಡಿಸಿದ್ದು ವಿಶೇಷ.



ಒಟ್ಟು 900 ಕೇಜಿ ಧಾನ್ಯ, 100 ಕೇಜಿ ತರಕಾರಿ, 38 ಅಡಿ ವೃತ್ತ, 54 ಕಲಶ, 108 ಬಾಳೆಎಲೆ, 500 ವೀಳ್ಯದೆಲೆ, 100 ಕೇಜಿ ಬೆಳ್ತಿಗೆ ಅಕ್ಕಿಯನ್ನು ಬಳಸಲಾಗಿದೆ. 38 ಅಡಿ ವ್ಯಾಸದ ವೃತ್ತದಲ್ಲಿ ಹೆಸರು ಬೇಳೆಯನ್ನು ಹಸಿರು ಬಣ್ಣಕ್ಕೆ ಬಳಸಿದರೆ, ಬಿಳಿ ಬಣ್ಣವನ್ನು ಸೂಚಿಸಲು ಸಾಗುವನ್ನು ಬಳಸಲಾಗಿದೆ. ಕೇಸರಿ ಬಣ್ಣ ಸೂಚಿಸಲು ಕಡ್ಲೆ ಬೇಳೆಯನ್ನು ಉಪಯೋಗಿಸಲಾಗಿದೆ. ಅದರ ಸುತ್ತಲೂ ಬಾಳೆ ಎಲೆಯಲ್ಲಿ ಕಲಶಗಳನ್ನಿಟ್ಟು ವೀಳ್ಯದೆಲೆ ಮತ್ತು ಅಡಿಕೆ ಇರಿಸಲಾಗಿದೆ. ದೇವಸ್ಥಾನದ ಆವಣರಣ ಆಗಿರುವುದರಿಂದ ಧಾರ್ಮಿಕತೆಯ ಟಚ್ ಕೊಡಲಾಗಿದೆ.


ಕುದ್ರೋಳಿ ದೇವಸ್ಥಾನದ ರೂವಾರಿ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ದೀಪ ಬೆಳಗಿಸಿ, ಆಕರ್ಷಕ ತ್ರಿವರ್ಣವನ್ನು ಲೋಕಾರ್ಪಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗುರು ಬೆಳದಿಂಗಳು ಸಂಸ್ಥೆಯ ಅಧ್ಯಕ್ಷ ಪದ್ಮರಾಜ್ ಆರ್., ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಕ್ಷೇತ್ರದ ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಮೊಂತೇರೊ, ಕಾರ್ಪೊರೇಟರ್ ಅನಿಲ್, ಲೀಲಾಕ್ಷ ಕರ್ಕೇರ, ಚಿತ್ತರಂಜನ್ ಗರೋಡಿ ಮತ್ತಿತರರಿದ್ದರು.
To mark the Amrut Mahotsav (75th anniversary of the country's Independence), the Kudroli Shree Gokarnanatheshwara Temple Committee has drawn a 38 feet tricolor national flag with food grains (Dhanya) and vegetables on the premises of Kudroli Gokarnanatheshwara Temple here on Sunday, August 14.Former minister B Janardhan Poojary inaugurated the rangoli. He also greeted the public for the 75th anniversary of the country's Independence on the occasion.
29-05-26 10:41 pm
HK News Staffer
ಒಬ್ಬರಿಗೆ ಒಂದೇ ಹುದ್ದೆ ; ಕೆಪಿಸಿಸಿ ಅಧ್ಯಕ್ಷ ಹುದ್ದ...
29-05-26 04:30 pm
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾ...
28-05-26 06:18 pm
CM Siddaramaiah, Supporters crying, Kaveri: ಸ...
28-05-26 05:31 pm
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
28-05-26 02:45 pm
HK News Staffer
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
29-05-26 10:21 pm
HK News Staffer
Expert College Case, Mangalore: ಕೋವಿಡ್ ಲಾಕ್ಡ...
29-05-26 08:30 pm
ಕಾರಿನ ಟೈಯರ್ ಬ್ಲಾಸ್ಟ್ ಆಗಿ ರಸ್ತೆಬದಿ ನಿಂತಿದ್ದ...
29-05-26 03:05 pm
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am