ಬ್ರೇಕಿಂಗ್ ನ್ಯೂಸ್
03-08-22 09:44 pm Udupi Correspondent ಕರಾವಳಿ
ಪಡುಬಿದ್ರಿ, ಆಗಸ್ಟ್ 3: ಐದು ದಶಕಗಳ ಸುದೀರ್ಘ ಕಾಲ ಜೊತೆಯಾಗಿದ್ದು ಮಕ್ಕಳು, ಮೊಮ್ಮಕ್ಕಳ ಜೊತೆಗೆ ಬಾಳ್ವೆ ನಡೆಸಿ, ಸವಾಲುಗಳನ್ನು ಎದುರಿಸುತ್ತಾ ತುಂಬು ಜೀವನ ನಡೆಸಿದ್ದ ವೃದ್ಧ ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ನಡೆದಿದೆ.
ಕಾಪು ತಾಲೂಕಿನ ಬೆಳಪು ಗ್ರಾಮದ 80 ವರ್ಷದ ಕೃಷ್ಣ ಅಲಿಯಾಸ್ ಕುಟ್ಟಿ ಶೆಟ್ಟಿ ಮತ್ತು ಅವರ ಪತ್ನಿ 75 ವರ್ಷದ ರೇವತಿ ಶೆಟ್ಟಿ ಕೆಲವೇ ಗಂಟೆಗಳ ಅಂತರದಲ್ಲಿ ಕೊನೆಯುಸಿರು ಎಳೆದಿದ್ದಾರೆ. ಕೃಷ್ಣ ಶೆಟ್ಟಿ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದರೆ, ಈ ವಿಷಯ ತಿಳಿದು ಶಾಕ್ ಆಗಿದ್ದ ಪತ್ನಿ ರೇವತಿ ಬುಧವಾರ ಬೆಳಗ್ಗೆ ಅಸುನೀಗಿದ್ದಾರೆ.
ಕೃಷ್ಣ ಶೆಟ್ಟಿ ವಯೋಸಹಜ ಬಾಧೆಯಿಂದ ಮೃತಪಟ್ಟಿದ್ದರು. ಅವರ ಮಕ್ಕಳು, ಮೊಮ್ಮಕ್ಕಳು ಮುಂಬೈನಲ್ಲಿ ನೆಲೆಸಿದ್ದರಿಂದ ಅವರು ಬರುವುದಕ್ಕಾಗಿ ಅಂತಿಮ ಸಂಸ್ಕಾರವನ್ನು ಬುಧವಾರಕ್ಕೆ ಉಳಿಸಲಾಗಿತ್ತು. ಇದರ ನಡುವೆ, ಪತ್ನಿಯೂ ಮೃತಪಟ್ಟಿದ್ದರಿಂದ ಪತಿ-ಪತ್ನಿಯ ಶವಗಳನ್ನು ಒಂದೇ ಚಿತೆಯಲ್ಲಿರಿಸಿ ಬೆಂಕಿ ಕೊಡಲಾಗಿದೆ. ಸಾಮಾಜಿಕ ಕಾರ್ಯಕರ್ತ ಸೂರಿ ಶೆಟ್ಟಿಯವರ ನೇತೃತ್ವದಲ್ಲಿ ಮಕ್ಕಳು, ಮೊಮ್ಮಕ್ಕಳು, ಸಂಬಂಧಿಕರ ಸಮ್ಮುಖದಲ್ಲಿ ಅಜ್ಜ- ಅಜ್ಜಿಯ ಕಳೇಬರವನ್ನು ಅಂತ್ಯಕ್ರಿಯೆ ಮಾಡಲಾಗಿದೆ. ಸುದೀರ್ಘ ಕಾಲ ಜೊತೆಯಾಗಿ ಬಾಳಿ ಕೊನೆಗಾಲದಲ್ಲಿ ಜೊತೆಯಾಗಿಯೇ ಇಹಲೋಕ ತ್ಯಜಿಸಿದ್ದು ಪಡುಬಿದ್ರಿ, ಕಾಪು ಪರಿಸರದಲ್ಲಿ ಜನರಲ್ಲಿ ಕುತೂಹಲ ಸೃಷ್ಟಿಸಿದೆ.
In a rare incident, a couple which lived together for five decades, saw children and grandchildren and faced life’s challenges together, died a few hours apart each other. The incident took place at Belapu, Kaup taluk. Eighty-year-old Krishna alias Kutti Shetty, and his wife, 75-year-old year old Revathi Shetty is the couple who had their funeral together.Krishna died on Tuesday August 2 morning and his wife Revathi passed away on Wednesday August 3 morning. They have left behind two sons and two daughters.
10-04-26 06:53 pm
HK News Desk
ಚಿಕ್ಕಮಗಳೂರು ; ಚಂದ್ರದ್ರೋಣ ಪರ್ವತ ಬಳಿ ನಾಪತ್ತೆಯಾಗ...
10-04-26 03:25 pm
PUC Result 2026, State Topper: ಪಿಯುಸಿ ರಿಸಲ್ಟ್...
09-04-26 09:30 pm
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
ಶರಣ್ಯ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್ ; ನಕ್ಸಲ್ ಲ...
09-04-26 03:37 pm
11-04-26 09:05 pm
Giridhar Shetty
ಚಂದ್ರನ ಸುತ್ತಿ ಮರಳಿದ ನಾಸಾದ ಗಗನಯಾತ್ರಿಗಳು ; ಸುರಕ...
11-04-26 12:44 pm
ಶಾಂತಿ ಮಾತುಕತೆಗಿಳಿದ ಪಾಕಿಸ್ತಾನ ವಿರುದ್ಧ ಕಿಡಿಕಾರಿ...
10-04-26 11:05 pm
ಮನೆಯಲ್ಲಿ ಭಾರೀ ನಗದು ಪತ್ತೆ ಪ್ರಕರಣ ; ನ್ಯಾಯಮೂರ್ತಿ...
10-04-26 01:26 pm
Lebanon News: ಲೆಬನಾನ್ ಮೇಲೆ ಇಸ್ರೇಲ್ ಭಾರೀ ಬಾಂಬ್...
09-04-26 11:03 pm
11-04-26 05:05 pm
Mangalore Correspondent
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
ಭರತನಾಟ್ಯ ಗುರು ಶ್ರಾವಣ್ ಉಳ್ಳಾಲ್ ಹಳದಿ ಕಾಮಾಲೆ ರೋಗ...
10-04-26 09:49 pm
ಉಪ ಚುನಾವಣೆ ಫಲಿತಾಂಶಕ್ಕೂ ನಾಯಕತ್ವ ಬದಲಾವಣೆಗೂ ಸಂಬಂ...
10-04-26 06:05 pm
Puc 2026, Result, Mangalore: ಮೂವರು ಮಕ್ಕಳಾದರೂ...
10-04-26 12:35 pm
11-04-26 11:14 pm
HK News Desk
ಕಾಲೇಜು ಗೆಳತಿಯ ಪ್ರೀತಿ ಹುಚ್ಚಾಟ ; ಮಜಾ ಉಡಾಯಿಸಿದ ಬ...
11-04-26 03:09 pm
ಧಾರವಾಡ ಯೂತ್ ಕಾಂಗ್ರೆಸ್ ಮುಖಂಡನ ಹತ್ಯೆ ; ಮನೆಗೆ ನು...
11-04-26 12:04 pm
ಕುಂಭಮೇಳದ ಮೊನಾಲಿಸಾ ಅಂತರ್ಧರ್ಮೀಯ ವಿವಾಹಕ್ಕೆ ಕುತ್ತ...
10-04-26 11:06 pm
Red Corner Notice, Mangalore crime: ದೇರಳಕಟ್ಟೆ...
09-04-26 09:16 pm