ಬ್ರೇಕಿಂಗ್ ನ್ಯೂಸ್
31-07-22 04:15 pm Mangalore Correspondent ಕರಾವಳಿ
ಸುಳ್ಯ, ಜುಲೈ 31: ಕೇರಳ ಮಾದರಿಯಲ್ಲಿ ಬಿಜೆಪಿ ಕಾರ್ಯಕರ್ತನನ್ನು ಕುತ್ತಿಗೆ ಕಡಿದು ತಲೆಗೆ ಒಡೆದು ಕೊಲ್ಲಲಾಗಿದೆ. ಇದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೊಲೆ ಮಾಡುವ ರೀತಿ. ಅವರು ಸಿರಿಯಾ, ಪಾಕಿಸ್ತಾನಕ್ಕೆ ಹೋಗಿ ತರಬೇತಿ ಪಡೆದು ಹತ್ಯೆ ಮಾಡ್ತಿದಾರೆ. ಕೇರಳದಲ್ಲೂ ನಮ್ಮವರನ್ನು ಇದೇ ರೀತಿ ಹತ್ಯೆ ಮಾಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬೆಳ್ಳಾರೆಯಲ್ಲಿ ಹತ್ಯೆಯಾದ ನೆಟ್ಟಾರಿನ ಬಿಜೆಪಿ ಕಾರ್ಯಕರ್ತ ಪ್ರವೀಣ್ ಮನೆಗೆ ಭೇಟಿ ಕೊಟ್ಟು ತಾಯಿ ಮತ್ತು ಪತ್ನಿಗೆ ಸಾಂತ್ವನ ಹೇಳಿದ ಬಳಿಕ ಶೋಭಾ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರವೀಣ್ ಸಾವು ನಮಗೆಲ್ಲ ದುಃಖ ತಂದಿದೆ, ಸಮಾಜದಲ್ಲಿ ಅಮಾಯಕರು ಬಲಿಯಾಗ್ತಿದಾರೆ. ಪ್ರವೀಣ್ ಚಲನವಲನ ಗೊತ್ತಿದ್ದ ಸ್ಥಳೀಯರೇ ಟಾರ್ಗೆಟ್ ಮಾಡಿ ಈ ಹತ್ಯೆ ಮಾಡಿದ್ದಾರೆ. ನಾನು ಆವತ್ತೇ ದೆಹಲಿಯಲ್ಲಿ ಅಮಿತ್ ಶಾ ಭೇಟಿ ಮಾಡಿ ಎನ್ಐಎ ತನಿಖೆ ನಡೆಸಲು ಪತ್ರ ಕೊಟ್ಟಿದ್ದೆ. ಗೃಹ ಸಚಿವರು ಮೌಖಿಕವಾಗಿ ತಿಳಿಸಿದ ಕಾರಣ ಎನ್ ಎಐ ಪುತ್ತೂರಿಗೆ ಬಂದಿದ್ದು ತನಿಖೆ ಆರಂಭಿಸಿದೆ. ಕೇರಳದ ತಲಶ್ಸೇರಿಯಲ್ಲಿ ಈಗಾಗಲೇ ಒಬ್ಬನನ್ನ ಬಂಧಿಸಲಾಗಿದೆ.

ನನ್ನ ಮನೆಯಿಂದ ಏಳೆಂಟು ಕಿ.ಮೀ ದೂರದಲ್ಲಿ ಘಟನೆ ನಡೆದಿದೆ. ಬಂಧಿತ ಆರೋಪಿಯ ಮನೆ ನನ್ನ ಮನೆಯ ಎರಡು ಕಿ.ಮೀ ದೂರದಲ್ಲಿದೆ. ಆದರೆ ಈ ರೀತಿ ಸಂಚು ಹೆಣೆದು ದುಷ್ಕೃತ್ಯ ಎಸಗಿರುವುದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಬೆಂಗಳೂರಿನ ರುದ್ರೇಶ್, ಮೂಡುಬಿದ್ರೆಯ ಪ್ರಶಾಂತ್ ಪೂಜಾರಿ, ಬಂಟ್ವಾಳದ ಶರತ್ ಮಡಿವಾಳ ರೀತಿಯಲ್ಲೇ ಹತ್ಯೆ ಮಾಡಿದ್ದಾರೆ. ರುದ್ರೇಶ್ ಪ್ರಕರಣದಲ್ಲಿ ಪಿಎಫ್ಐ ಕೈವಾಡ ಸಾಬೀತಾಗಿದ್ದು ಈಗ ಜೈಲು ಸೇರಿದ್ದಾರೆ. ಇಲ್ಲಿಯೂ ಅದೇ ಮಾದರಿ ಕೃತ್ಯ ನಡೆದಿದ್ದು ಎನ್ಐಎ ಅಧಿಕಾರಿಗಳು ಪ್ರಕರಣದ ಸಂಚನ್ನು ಬಯಲು ಮಾಡಲಿದ್ದಾರೆ.
ಪಿಎಫ್ಐ ಬಗ್ಗೆ ಆರೋಪಗಳಿದ್ದರೂ, ಬ್ಯಾನ್ ಮಾಡಿಲ್ಲ ಯಾಕೆ ಎಂಬ ಪ್ರಶ್ನೆಗೆ, ಪಿಎಫ್ಐ ಬ್ಯಾನ್ ಮಾಡಲು ಅದಕ್ಕೆ ಬೇಕಾದಷ್ಟು ಸಾಕ್ಷ್ಯ ಬೇಕು. ಸದ್ಯ ಕೇಂದ್ರ ಸರ್ಕಾರ ಅದಕ್ಕಾಗಿ ಮಾಹಿತಿ ಸಂಗ್ರಹ ಕೆಲಸ ಮಾಡ್ತಿದೆ. ಇಂಥ ಘಟನೆಗಳಾದ ಸಂದರ್ಭದಲ್ಲಿ ಆಕ್ರೋಶ ಸಹಜ, ಅದು ನಮಗೂ ಇದೆ. ಆದರೆ ಆಕ್ರೋಶದ ಹಿಂದೆ ನಮ್ಮ ಹುಡುಗನನ್ನ ಕಳೆದುಕೊಂಡ ನೋವಿದೆ. ಹೀಗಾಗಿ ಕಾನೂನು ಹೋರಾಟದ ಜೊತೆಗೆ ಆರೋಪಿತರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಬೇಕಿದೆ.

ಮಸೂದ್ ಹತ್ಯೆಗೆ ಯಾಕೆ ಪರಿಹಾರ ಕೊಟ್ಟಿಲ್ಲ ಎಂಬ ಪ್ರಶ್ನೆಗೆ, ಅದು ಷಡ್ಯಂತ್ರದ ಕೊಲೆ ಅಲ್ಲ, ಅದು ಬೇರೆ ರೀತಿಯ ಕೊಲೆ. ಯುವಕರು ಯಾವುದೋ ವಿಚಾರದಲ್ಲಿ ಜಗಳ ನಡೆಸಿ, ಬಳಿಕ ರಾಜಿ ಪಂಚಾತಿಕೆಗೆ ಕರೆದು ಹಲ್ಲೆ ಮಾಡಲಾಗಿತ್ತು. ಅದು ದೇಶದ್ರೋಹದ ಜೊತೆ ಜೋಡಿಸಿಕೊಂಡಿಲ್ಲ. ಪ್ರವೀಣ್ ಹತ್ಯೆ ದ್ವೇಷ ಇಟ್ಟುಕೊಂಡು ನಡೆಸಿದ್ದಾಗಿದ್ದು ದೇಶದ್ರೋಹದ ಜೊತೆ ಜೋಡಿಸಿಕೊಂಡಿದೆ. ಆದರೆ ಮಸೂದ್ ಹತ್ಯೆ ಬಗ್ಗೆಯೂ ತನಿಖೆ ಆಗಲಿ, ತಾಯಿಗೆ ಮಗ ಇಲ್ಲ ಎನ್ನುವುದು ಕೂಡ ಸಹಜವಾಗಿಯೇ ನೋವಿನ ವಿಚಾರ ಎಂದರು.
Sullia Shobha Karandlaje visited the house of Praveen Nettaru in Bellare and gave her condolences to the deceased family. Speaking to Media persons she slammed at PFI organisation for their killings. She alleged that they take training in Sullia and do the Killings. She said I have hope in NIA.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 10:56 pm
HK News Desk
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
11-11-25 10:42 pm
Mangalore Correspondent
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
11-11-25 06:33 pm
Mangalore Correspondent
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm