ಬ್ರೇಕಿಂಗ್ ನ್ಯೂಸ್
30-07-22 11:01 pm udupi Correspondent ಕರಾವಳಿ
ಉಡುಪಿ, ಜುಲೈ 30: ಮುಸ್ಲಿಂ ಸಮುದಾಯದ ಗೌರವಕ್ಕೆ ಧಕ್ಕೆ ತಂದಿರುವ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳನ್ನು ಮುಸ್ಲಿಮರೇ ಬಹಿಷ್ಕರಿಸಬೇಕು. ಆಮೂಲಕ ಸಮಾಜದಲ್ಲಿ ಶಾಂತಿ ಕಾಪಾಡಲು ಸಹಕರಿಸಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಮನವಿ ಮಾಡಿದ್ದಾರೆ.
ಕರಾವಳಿಯಲ್ಲಿ ಕೋಮು ವೈಷಮ್ಯದ ವಾತಾವರಣ ನೆಲೆಸಿರುವುದರಿಂದ ಈ ಬಗ್ಗೆ ಹೇಳಿಕೆ ನೀಡಿರುವ ರಘುಪತಿ ಭಟ್, ಕರಾವಳಿ ಭಾಗದಲ್ಲಿ ಕೋಮು ಉದ್ರೇಕದ ಸ್ಥಿತಿ ನೆಲೆಯಾಗಲು ಈ ಸಂಘಟನೆಗಳೇ ಕಾರಣ. ಎಸ್ಡಿಪಿಐ ಮತ್ತು ಪಿಎಫ್ಐ ಕಾರಣದಿಂದಾಗಿ ಮುಸ್ಲಿಮರನ್ನು ಜನರು ಅನುಮಾನದಿಂದ ನೋಡುವಂತಾಗಿದೆ. ಹೀಗಾಗಿ ಆ ಸಂಘಟನೆಗಳನ್ನು ಸ್ವತಃ ಮುಸ್ಲಿಂ ಬಾಂಧವರೇ ಬಹಿಷ್ಕರಿಸಬೇಕು. ಇತ್ತೀಚೆಗೆ ಹಿಜಾಬ್ ವಿಚಾರದಲ್ಲಿ ವಿವಾದ ಸೃಷ್ಟಿಸಿದ್ದೂ ಇದೇ ಸಂಘಟನೆಗಳು. ಜಾತ್ಯತೀತ ಭಾವನೆಯುಳ್ಳ ಮತ್ತು ಶಾಂತಿ ಬಯಸುವ ಮುಸ್ಲಿಮರು ಈ ಸಂಘಟನೆಗಳನ್ನು ಹತ್ತಿರ ಬರದಂತೆ ದೂರ ಮಾಡಬೇಕು ಎಂದು ಹೇಳಿದ್ದಾರೆ.
![]()
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಇಡೀ ರಾಜ್ಯದಲ್ಲಿ ಕಾರ್ಯಕರ್ತರನ್ನು ಬಡಿದೆಬ್ಬಿಸಿದೆ. ಈಗಾಗಲೇ ರಾಜ್ಯ ಸರಕಾರ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಿದ್ದು, ಯಾರು ಇದರ ಹಿಂದಿದ್ದಾರೆ, ಯಾರು ಸಂಚು ಹೆಣೆದಿದ್ದಾರೆ ಅನ್ನುವುದನ್ನು ಪತ್ತೆ ಮಾಡಲಿದೆ. ಅಲ್ಲದೆ, ಮುಂದೆ ಸಂಚು ಹೆಣೆದಿರುವುದನ್ನೂ ಬಯಲು ಮಾಡಲಿದೆ ಎಂದು ಭಟ್ ಹೇಳಿದ್ದಾರೆ.

ಹಿಜಾಬ್ ವಿವಾದದ ಹಿಂದೆ ಅಂತಾರಾಷ್ಟ್ರೀಯ ಷಡ್ಯಂತ್ರ ಇತ್ತು. ಅದೇ ಕಾರಣದಿಂದಾಗಿ ಅಷ್ಟು ದೊಡ್ಡದಾಗಿ ವಿವಾದ ಸದ್ದು ಮಾಡಿತ್ತು. ಸಂಚು ದೊಡ್ಡದಿದ್ದರಿಂದ ಭಾರೀ ಪ್ರಚಾರ ಪಡೆದಿತ್ತು. ಆದರೆ ಅದರ ಕಾರಣಕ್ಕೆ ಸಾವು ಆಗುತ್ತದೆ ಅನ್ನುವುದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಅಮಾಯಕ ಹರ್ಷನ ಕೊಲೆ ಆಗಿಹೋಗಿತ್ತು. ಈಗ ಮತ್ತೊಬ್ಬ ಕಾರ್ಯಕರ್ತನ ಹತ್ಯೆ ಆಗಿದೆ. ಕಾರ್ಯಕರ್ತರೇ ನಮ್ಮ ಪಕ್ಷದ ಜೀವಾಳ. ಒಂದು ಜೀವ ಹೋಗುವುದನ್ನು ನಾವು ಸರಳವಾಗಿ ನೋಡಿ ಕುಳಿತುಕೊಳ್ಳುವಂತಿಲ್ಲ. ಅಮೂಲ್ಯ ಜೀವ ತೆಗೆದ ಹಂತಕರಿಗೆ ಕಠಿಣ ಶಿಕ್ಷೆ ನೀಡುವಂತಾಗಬೇಕು ಎಂದರು.
MLA Raghupati Bhat said SDPI and PFI organisations should be banned from Muslim society adding that the educated Muslims should become aware of the activities of the two organisations that are bringing disrepute to the entire minority communitHe was speaking to newspersons and answering queries pertaining to the serial killings that have rocked the coastal districts. He said the activities carried out by SDPI and PFI had created an impression and one of looking at minorities with suspicion.
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm