ಬ್ರೇಕಿಂಗ್ ನ್ಯೂಸ್
28-07-22 05:41 pm Mangalore Correspondent ಕರಾವಳಿ
Photo credits : NEWS FIRST
ಸುಳ್ಯ, ಜುಲೈ 28: ನಿಮ್ಮ ಮಗಳಿಗೆ ಈ ಗತಿ ಆಗುತ್ತಿದ್ದರೆ, ನೀವು ಎರಡು ದಿನ ಬಿಟ್ಟು ಬರುತ್ತಿದ್ರಾ.. ನೀವು ಎರಡು ದಿನ ಕಳೆದು ನಮ್ಮ ಮನೆಗೆ ಬಂದಿದ್ದೀರಲ್ಲಾ.. ನೀವ್ಯಾಕೆ ಬಂದ್ರಿ.. ಎಂದು ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ಪತ್ನಿ, ಪುತ್ತೂರು ಶಾಸಕ ಸಂಜೀವ ಮಠಂದೂರು ಅವರನ್ನು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ.
ಎರಡು ದಿನಗಳ ಬಳಿಕ ಪ್ರವೀಣ್ ಮನೆಗೆ ಭೇಟಿಯಿತ್ತ ಶಾಸಕ ಮಠಂದೂರು ಅವರನ್ನು ಮನೆಯವರು ಮತ್ತು ಕುಟುಂಬಸ್ಥರು ತೀವ್ರ ತರಾಟೆಗೆತ್ತಿಕೊಂಡರು. ಪಕ್ಷ ಪಕ್ಷ ಅಂತ ದಿನದ 24 ಗಂಟೆಯೂ ಓಡುತ್ತಿದ್ದರು. ಅಂಗಾರಣ್ಣ ಅಂತಾ ಅವರ ಹಿಂದೆ ಓಡುತ್ತಿದ್ದರು. ಕುಂಜಾಡಿಯ ಮನೆಯಲ್ಲಿ ಏನೇ ಕಾರ್ಯಕ್ರಮ ಆದರೂ ನಳಿನಣ್ಣ ಅಂತ ಓಡುತ್ತಿದ್ದರು. ನನ್ನನ್ನು ಅರ್ಧದಲ್ಲಿ ಬಿಟ್ಟು ಕುಂಜಾಡಿಗೆ ಅಂತ ಹೋಗುತ್ತಿದ್ದರು. ಈಗ ಎಲ್ಲಿದ್ದಾರೆ ನಿಮ್ಮ ನಳಿನಣ್ಣ ಎಂದು ಪ್ರವೀಣ್ ಪತ್ನಿ ಪ್ರಶ್ನಿಸಿದರೆ, ಅಲ್ಲಿದ್ದ ಯಾರಿಗೂ ಮಾತು ಹೊರಡಲಿಲ್ಲ.


ಅಳುತ್ತಲೇ ಪ್ರವೀಣ್ ಪತ್ನಿ ಶಾಸಕರನ್ನು ಪ್ರಶ್ನೆ ಮಾಡಿದರು. ನಿಮ್ಮ ಪರಿಹಾರದ ಹಣ ನನಗೆ ಬೇಡ. ಹೋದವರನ್ನು ಮತ್ತೆ ಜೀವ ಮಾಡಲು ಆಗುವುದಿಲ್ಲ. ಆದರೆ ಅವರನ್ನು ಹತ್ಯೆ ಮಾಡಿದವರನ್ನಾದ್ರೂ ಬಂಧಿಸಲು ನಿಮ್ಮಿಂದ ಆಯಿತೇ.. ನಳಿನ್ ಗೆ ಆಯಿತೇ.. ನಿನ್ನೆ ಬೆಳ್ಳಾರೆಗೆ ಬಂದು ಪೋಸು ಕೊಟ್ಟರಲ್ಲ. ಅಲ್ಲಿಂದ ಓಡಿ ಹೋದರಲ್ಲಾ.. ಅವರು ಅಲ್ಲಿಗೆ ಬಂದಿದ್ದಕ್ಕೇ ಗಲಾಟೆ ಆಯ್ತು.. ಅವರು ಅಲ್ಲಿ ಯಾಕೆ ಹೋಗಿದ್ದು ಇಲ್ಲಿ ಮನೆಗೆ ಬರಬಹುದಿತ್ತಲ್ಲ ಎಂದು ತೀವ್ರ ತರಾಟೆಗೆತ್ತಿಕೊಂಡರು ಪ್ರವೀಣ್ ಪತ್ನಿ.

ಇದೇ ವೇಳೆ, ಅಲ್ಲಿದ್ದ ಸಂಬಂಧಿಕರು ನಾಯಕರು ಈಗ ಯಾಕೆ ಇಲ್ಲಿಗೆ ಬರುವುದು. ಫೋಟೋ ತೆಗೆಯುವುದಕ್ಕಾಗಿಯೇ.. ನಾವು ಹೋಗಿದ್ದೇವೆ ಎಂದು ಪೇಪರಲ್ಲಿ ಫೋಟೋ ಕೊಡುವುದಕ್ಕೆ ಬರ್ತೀರಾ.. ನೀವು ಯಾಕೆ ಈಗ ಬಂದ್ರಿ.. ನಾವು ನಿಮ್ಮ ಕ್ಷೇತ್ರದ ಕಾರ್ಯಕರ್ತರು. ನಿಮಗೆ ನಿನ್ನೆ ಬೆಳಗ್ಗೆ ಪುತ್ತೂರಲ್ಲಿ ಕಾದೆವು. ನೀವು ಮೊನ್ನೆ ರಾತ್ರಿ ಬೆಂಗಳೂರಲ್ಲಿದ್ದರೆ, ಬೆಳಗ್ಗೆ ಬರಬಹುದಿತ್ತಲ್ಲ. ನಿಮಗೆ ರಸ್ತೆಯಲ್ಲಿ ಬರೋಕೆ ಆಗಲ್ವಾ.. ವಿಮಾನ ಆಗಬೇಕೇ ಎಂದು ನೇರಾ ನೇರ ಪ್ರಶ್ನೆ ಮಾಡಿದ್ದಾರೆ. ಸಂಜೀವ ಮಠಂದೂರು ಯಾವುದೇ ಸಮಜಾಯಿಷಿ ಹೇಳುವುದಕ್ಕೂ ಬಿಡಲಿಲ್ಲ.
Bellare Praveen murder, Sanjeeva Matandoor slammed by Praveens wife and family. My husband who worked so much for the party in return had to die brutally. He was so much loving Angara but did he even come to see his face. What did Nalin Kateel do in return?. They also alleged that why can't get yogis rule in Karnataka.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 10:56 pm
HK News Desk
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
11-11-25 10:42 pm
Mangalore Correspondent
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
11-11-25 06:33 pm
Mangalore Correspondent
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm