ಬ್ರೇಕಿಂಗ್ ನ್ಯೂಸ್
23-07-22 01:58 pm Mangalore Correspondent ಕರಾವಳಿ
ಮಂಗಳೂರು, ಜುಲೈ 22 : ಸಾಯುವಾಗ ಯಾರೂ ಸುಳ್ಳು ಹೇಳಿ ಸಾಯೋದಿಲ್ಲ. ಸಂತೋಷ್ ಪಾಟೀಲ್ ಡೈಯಿಂಗ್ ಡಿಕ್ಲರೇಶನ್ ಇದ್ದರೂ ರಾಜಕೀಯ ಒತ್ತಡದಿಂದ ಈಶ್ವರಪ್ಪ ಅವರಿಗೆ ಪೊಲೀಸರು ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಇದನ್ನು ಸತ್ಯಕ್ಕೆ ಸಂದ ಜಯ ಎಂದು ಹೇಳುವುದಲ್ಲ. ಸುಳ್ಳಿಗೆ ಸಂದ ಜಯ ಎನ್ನಬೇಕು. ಸತ್ಯಕ್ಕೆ ಜಯ ಎಂದು ಹೇಳುವವರು ಮಾನಗೆಟ್ಟವರು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ರಮಾನಾಥ ರೈ, ನ್ಯಾಯದ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಪೊಲೀಸರ ಕ್ಲೀನ್ ಚಿಟ್ ಇನ್ನಷ್ಟು ನೋವನ್ನು ನೀಡಿದೆ. ಪೊಲೀಸರು ಕ್ಲೀನ್ ಚಿಟ್ ಕೊಡುತ್ತಾರೆಂದು ಕುಟುಂಬಸ್ಥರು ಮೊದಲೇ ಹೇಳಿದ್ದರು, ಇವರು ಹಾಗೇ ಮಾಡಿದ್ದಾರೆ. ಪ್ರಕರಣ ದಾಖಲಾದರೂ, ಒಮ್ಮೆಯೂ ಈಶ್ವರಪ್ಪ ಅವರನ್ನು ಪೊಲೀಸರು ತನಿಖೆಗೆ ಒಳಪಡಿಸಿಯೇ ಇಲ್ಲ, ವಿಚಾರಣೆಯನ್ನು ನಡೆಸಿಲ್ಲ. ಈಶ್ವರಪ್ಪ ಅವರನ್ನು ಹೊರಗಿಟ್ಟು ತನಿಖೆ ಮಾಡಿರುವುದರಿಂದ ನ್ಯಾಯದ ನಿರೀಕ್ಷೆ ಮಾಡಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.

ಗುತ್ತಿಗೆದಾರರ ಸಂಘದವರೇ ಈಶ್ವರಪ್ಪ ವಿರುದ್ಧ ನಲ್ವತ್ತು ಪರ್ಸೆಂಟ್ ಆರೋಪ ಮಾಡಿದ್ದಾರೆ. ಪ್ರಕರಣದಲ್ಲಿ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕೆಂದು ಸಿದ್ದರಾಮಯ್ಯ ಅಂದೇ ಹೇಳಿದ್ದರು. ಕಾಂಗ್ರೆಸ್ ಈಗಲೂ ಅದನ್ನೇ ಒತ್ತಾಯಿಸುತ್ತದೆ. ಕೆಲವರು ಕೆಜೆ ಜಾರ್ಜ್ ಪ್ರಕರಣದಲ್ಲಿ ಕ್ಲೀನ್ ಚಿಟ್ ಕೊಟ್ಟಿದ್ದನ್ನು ಹೇಳುತ್ತಾರೆ, ಆದರೆ ಜಾರ್ಜ್ ಅವರಿಗೆ ಕ್ಲೀನ್ ಚಿಟ್ ಕೊಟ್ಟಿದ್ದು ಮೋದಿಯವರ ಸಿಬಿಐ. ಎನ್ ಡಿಎ ಸರಕಾರದ ಅಧೀನದ ಸಿಬಿಐ ಕ್ಲೀನ್ ಚಿಟ್ ಕೊಟ್ಟಿತ್ತು. ಈಶ್ವರಪ್ಪಗೆ ಇಲ್ಲಿನ ಪೊಲೀಸರು ಕೊಟ್ಟ ಕ್ಲೀನ್ ಚಿಟ್ಟನ್ನು ಸತ್ಯಕ್ಕೆ ಸಂದ ಜಯ ಎಂದಿದ್ದಾರಲ್ಲಾ ಕೆಲವರು. ಅದು ಸುಳ್ಳಿಗೆ ಸಂದ ಜಯ ಅಷ್ಟೇ. ಸರಕಾರ ನೇರ ಹಸ್ತಕ್ಷೇಪ ಮಾಡಿ ಕ್ಲೀನ್ ಚಿಟ್ ಕೊಟ್ಟಿರುವುದು. ಭ್ರಷ್ಟಾಚಾರದಿಂದ ಮುಳುಗಿರುವ ರಾಜ್ಯ ಸರಕಾರ, ಪೊಲೀಸರಿಗೆ ಒತ್ತಡ ಹೇರಿ ಕ್ಲೀನ್ ಚಿಟ್ ಕೊಟ್ಟಿದೆ. ಇಡಿ ತನಿಖೆಯನ್ನು ಭ್ರಷ್ಟಾಚಾರ ಮಾಡಿದವರ ವಿರುದ್ಧ ಮಾಡೋದಿಲ್ಲ. ಈಶ್ವರಪ್ಪ ಒಬ್ಬ ಪ್ರಚಂಡ ಭ್ರಷ್ಟಾಚಾರಿ, ಇಡಿ ತನಿಖೆ ಅವರ ಮೇಲಾಗಬೇಕು. ಇದನ್ನು ಸತ್ಯಕ್ಕೆ ಸಂದ ಜಯ ಹೇಳುವವರಿಗೆ ನಾಚಿಕೆಯಾಗಬೇಕು, ಮಾನ ಗೆಟ್ಟವರು. ಇಂಥವನಿಗೆ ಮತ್ತೆ ಸಚಿವ ಸ್ಥಾನ ಕೊಟ್ಟರೆ ಅದಕ್ಕಿಂತ ಹೊಲಸು ಇನ್ನೊಂದಿಲ್ಲ ಎಂದು ಮೂದಲಿಸಿದರು.

ಸುಳ್ಯದ ಕಳಂಜ ಎಂಬಲ್ಲಿ ಬಿಜೆಪಿಯವರು ಗುಂಪು ಹಲ್ಲೆ ನಡೆಸಿ ಅಮಾಯಕನನ್ನು ಸಾಯಿಸಿದ್ದಾರೆ. ಎಲ್ಲೋ ಉತ್ತರ ಪ್ರದೇಶದಲ್ಲಿ ಆಗಿರುವಂತೆ ಇಲ್ಲಿಯೂ ಮಾಡಿದ್ದಾರೆ. ಈ ಜಿಲ್ಲೆಯಲ್ಲಿ ಆಗಿರುವ ಬಹಳಷ್ಟು ಕೊಲೆ ಪ್ರಕರಣಗಳಲ್ಲಿ ಬಿಜೆಪಿ ಪಾತ್ರ ಇದರ. ಬಿಜೆಪಿ ಕೊಲೆಗಡುಕ ಪಕ್ಷ. ಯಾವುದೇ ಹತ್ಯೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಎಫ್ಐಆರ್ ಇಲ್ಲ. ಆದರೆ ಒಂದು ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ಮತ್ತು ಮತೀಯ ಪಕ್ಷಗಳ ಮೇಲೆ ಎಫ್ಐಆರ್ ದಾಖಲಾಗಿದೆ. ಕಾಂಗ್ರೆಸ್ ಕಾರ್ಯಕರ್ತನನ್ನು ಪಂಚಾಯತ್ ನುಗ್ಗಿ ಹತ್ಯೆ ಮಾಡಿದ್ದಾರೆ. ಸುಳ್ಯದಲ್ಲಿಯೇ ಘಟನೆ ಆಗಿದ್ದರೂ, ಅದೇ ಕ್ಷೇತ್ರದ ಶಾಸಕ, ಸಚಿವರಾಗಿರುವ ಅಂಗಾರ ಮೃತನ ಮನೆಗೆ ಭೇಟಿ ನೀಡಿಲ್ಲ. ಇದು ಅವರ ಮನೋಸ್ಥಿತಿಯನ್ನು ತೋರಿಸುತ್ತದೆ. ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನಿಗೆ 25 ಲಕ್ಷ ಕೊಟ್ಟಿದ್ದಾರೆ, ಹಾಗೆಯೇ ಮಸೂದನಿಗೂ 25 ಲಕ್ಷ ಪರಿಹಾರ ಕೊಡಬೇಕು ಎಂದು ರಮಾನಾಥ ರೈ ಆಗ್ರಹಿಸಿದರು.
Ex minister KS Eshwarappa gets clean chit in contractor's suicide case, Ramanath Rai slams police and Modi during a press meet held at Mangalore.
14-10-26 12:21 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 10:57 am
HK News Staffer
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm