ಬ್ರೇಕಿಂಗ್ ನ್ಯೂಸ್
21-07-22 10:25 am Mangalore Correspondent ಕರಾವಳಿ
ಮಂಗಳೂರು, ಜುಲೈ 21 : ಯಾವುದೇ ಜಾತಿ ಇಟ್ಕೊಂಡು ಜಾತಿ ಸಂಘಟನೆ ಕಟ್ಟಬಹುದು, ರಾಜಕೀಯ ಮಾಡಲು ಆಗಲ್ಲ. ಇವರಿಗೆಲ್ಲಾ ಅಷ್ಟೊಂದು ಶಕ್ತಿ ಇದ್ದರೆ ಅವರದ್ದೇ ಜಾತಿ ಹೆಸರಲ್ಲಿ ಸಂಘಟನೆಗಳನ್ನು, ಪಕ್ಷಗಳನ್ನ ಕಟ್ಟಿ ಮುಖ್ಯಮಂತ್ರಿ ಆಗಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಸಿಎಂ ಆಗೋ ವಿಚಾರದಲ್ಲಿ ಜಟಾಪಟಿ ನಡೆಸುತ್ತಿರುವ ಸಿದ್ದರಾಮಯ್ಯ ಮತ್ತು ಸಿದ್ದರಾಮಯ್ಯ ಅವರಿಗೆ ಕುಟುಕಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಹರಿಪ್ರಸಾದ್, ಚುನಾವಣೆ ಬಳಿಕ ಮುಖ್ಯಮಂತ್ರಿ ಯಾರಾಗಬೇಕು ಎಂದು ತೀರ್ಮಾನಿಸುವುದು ಕಾಂಗ್ರೆಸ್ ಪಕ್ಷದ ಶಾಸಕರು. ಚುನಾವಣೆಯಲ್ಲಿ ಆಯ್ಕೆಯಾಗುವ ಶಾಸಕರು ಮುಖ್ಯಮಂತ್ರಿ ಆಯ್ಕೆ ಮಾಡುತ್ತಾರೆ. ಶಾಸಕರಲ್ಲಿ ಅಭಿಪ್ರಾಯಗಳನ್ನು ತಿಳ್ಕೊಂಡು ಸೋನಿಯಾ ಗಾಂಧಿ ಮುಖ್ಯಮಂತ್ರಿ ಬಗ್ಗೆ ತೀರ್ಮಾನ ಮಾಡ್ತಾರೆ. ಇದು ಕಾಂಗ್ರೆಸ್ ನಲ್ಲಿ ಬಹಳ ವರ್ಷಗಳಿಂದ ಬಂದಿರುವ ಸಂಪ್ರದಾಯ. ಅದನ್ನು ಮುಂದೆಯೂ ಪಕ್ಷ ಮುಂದುವರಿಸಿಕೊಂಡು ಹೋಗುತ್ತದೆ ಎಂದು ಹೇಳಿದರು.
ಸಿಎಂ ಆಗಬೇಕೆಂಬ ಕನಸನ್ನು ಎಲ್ಲರೂ ಸಹ ಕಾಣುತ್ತಾರೆ, ಅದರಲ್ಲಿ ಏನೂ ವಿಶೇಷ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಎಲ್ಲಾ ಧರ್ಮದವರು, ಎಲ್ಲಾ ಜಾತಿಯವರು, ಎಲ್ಲಾ ಭಾಷೆಯವರು, ಎಲ್ಲಾ ಪ್ರಾಂತ್ಯದವರು ಸೇರಿ ಕಾಂಗ್ರೆಸ್ ಪಕ್ಷಕ್ಕೆ ವೋಟ್ ಕೊಡ್ತಾರೆ. ಅದಕ್ಕೋಸ್ಕರ ಕಾಂಗ್ರೆಸ್ ಪಕ್ಷದ ತೀರ್ಮಾನ ಅಂತಿಮವಾದದ್ದು. ಯಾರನ್ನು ಸಿಎಂ ಮಾಡಬೇಕು ಅನ್ನೋದನ್ನು ಮೊದಲೇ ತೀರ್ಮಾನಿಸುವುದಿಲ್ಲ. ಕಾಂಗ್ರೆಸ್ ನಾಯಕರಿಗಿಂತ ಹೆಚ್ಚಾಗಿ ಪಕ್ಷದ ಕಾರ್ಯಕರ್ತರು ತಿಳಿದುಕೊಂಡಿದ್ದಾರೆ. ಪಕ್ಷದ ಕಾರ್ಯಕರ್ತರದ್ದೇ ಅಂತಿಮವಾದ ತೀರ್ಮಾನ ಆಗಿರುತ್ತೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ವ್ಯಕ್ತಿಗಳು ತೀರ್ಮಾನ ಮಾಡಲಿಕ್ಕೆ ಸಾಧ್ಯ ಇಲ್ಲ.
ನಾನು ಮುಖ್ಯಮಂತ್ರಿ ಸೇರಿದಂತೆ ಬೇರೆ ಬೇರೆ ಪ್ರಮುಖರ ನೇಮಕ ಮಾಡುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿದ್ದವನು. ಆದ್ದರಿಂದ ಕಾಂಗ್ರೆಸ್ ಪಕ್ಷದ ಒಂದು ಪ್ರಾಕ್ಟೀಸ್ ಅಥವಾ ಸಂಪ್ರದಾಯವನ್ನು ಬಹಳ ಚೆನ್ನಾಗಿ ಫಾಲೋ ಮಾಡ್ತೀವಿ. ಅದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು ಹರಿಪ್ರಸಾದ್.
ಸಿದ್ದರಾಮಯ್ಯ ಹುಟ್ಟುಹಬ್ಬದ ಕುರಿತು ಬಿ.ಸಿ.ಪಾಟೀಲ್ ಟೀಕೆ ಮಾಡಿರುವ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು, ಬಿ.ಸಿ ಪಾಟೀಲ್ ಯಾವ ನೈತಿಕತೆ ಇಟ್ಕೊಂಡು ಮಾತಾಡ್ತಾರೆ ಗೊತ್ತಿಲ್ಲ. ಅವರು ಮೊದಲು ಉತ್ತರ ಕೊಡಬೇಕಾಗಿರೋದು ಯತ್ನಾಳ್ ಅವರ 2500 ಕೋಟಿ ಆರೋಪದ ಬಗ್ಗೆ. ಬಿಜೆಪಿಯಲ್ಲಿ ಮಂತ್ರಿ, ಮುಖ್ಯಮಂತ್ರಿ ಆಗ್ಬೇಕು ಅಂದ್ರೆ ಕೋಟಿ ಕೊಡಬೇಕು ಹೇಳಿದ್ದಾರೆ. ಅದರ ಬಗ್ಗೆ ಇವರು ಹೇಳಲಿ. ಮತ್ತು ಇವರೆಲ್ಲ ವಲಸೆ ಗಿರಾಕಿಗಳು. ವಲಸೆ ಗಿರಾಕಿಗಳ ಬಗ್ಗೆ ಹೆಚ್ಚು ಮಾತನಾಡಲ್ಲ, ಪಕ್ಷಿ ಪ್ರಾಣಿಗಳು ವಲಸೆ ಹೋಗುತ್ತವೆ, ಹಾಗೇ ಇವರು. ಇನ್ನು ಸಿದ್ದರಾಮಯ್ಯ ಹುಟ್ಟಿದ ಹಬ್ಬವನ್ನು ಕಾಂಗ್ರೆಸ್ ಪಕ್ಷ ಮಾಡ್ತಾ ಇಲ್ಲ, ಅದು ಅವರ ಅಭಿಮಾನಿಗಳು ಮಾಡ್ತಾ ಇದಾರೆ. ಅದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಹೇಳಿದರು.
ಕರಾವಳಿ ಜಿಲ್ಲೆಯ ಹಲವೆಡೆ ಮಳೆಯಿಂದಾಗಿ ಬಹಳಷ್ಟು ಹಾನಿಯಾಗಿದೆ. ಸುರತ್ಕಲ್, ಬಂಟ್ವಾಳ, ಉಳ್ಳಾಲದಲ್ಲಿ ಮಳೆಹಾನಿ ವೀಕ್ಷಣೆಗೆ ಹೋಗಿದ್ದೇನೆ. ಅಲ್ಲಿನ ಜನರ ಕಷ್ಟವನ್ನು ತಿಳ್ಕೊಂಡಿದ್ದೇನೆ. ಮುಖ್ಯಮಂತ್ರಿ ಭೇಟಿ ಕೊಟ್ಟಿದ್ದಾರೆ. ಆದರೆ ಯಾರಿಗೂ ಪರಿಹಾರ ಸಿಕ್ಕಿಲ್ಲ. ಸರಕಾರ ಕೂಡಲೇ ತಕ್ಷಣದ ಪರಿಹಾರವನ್ನು ಕುಟುಂಬಕ್ಕೆ ತಲುಪಿಸಬೇಕು ಎಂದು ಆಗ್ರಹಿಸಿದ ಬಿಕೆ ಹರಿಪ್ರಸಾದ್, ಮಂಗಳೂರಿನಲ್ಲಿ ಎಲ್ಲಿ ನೋಡಿದರೂ ನೀರು ಉಕ್ಕುತ್ತದೆ. ಚರಂಡಿ ಬಿಟ್ಟು ರೋಡಿನಲ್ಲಿ ಮಳೆನೀರು ಹರಿಯುತ್ತದೆ. ಇಲ್ಲಿ ಸ್ಮಾರ್ಟ್ ಸಿಟಿಯಲ್ಲ, ಡಿಸಾಸ್ಟರ್ ಸಿಟಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
Leader of Opposition in the Legislative Council B K Hariprasad said the government is in the silent mode over providing flood relief. Addressing media persons here on Wednesday, July 20, B K Hariprasad said, “rain has created havoc in Surathkal and Ullal where there was serious damage and loss of property. As per the guidelines of Central government, there has to be immediate release of relief measures including funds through NDRF and SRDF."
17-07-25 07:45 pm
Bangalore Correspondent
Dharmasthala News, SIT: ಧರ್ಮಸ್ಥಳ ಪ್ರಕರಣದಲ್ಲಿ...
17-07-25 04:50 pm
CM Siddaramaiah, Janardhan Reddy; ನವೆಂಬರ್ ಒಳಗ...
16-07-25 09:36 pm
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
17-07-25 06:30 pm
Mangalore Correspondent
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
Minister Priyank Kharge, Drug Trafficking: ಡ್...
17-07-25 01:51 pm
Mangalore Rain, Landslide, Maryhill: ಭಾರೀ ಮಳೆ...
17-07-25 01:34 pm
Wizdom Education, Guruvandana, Mangalore: ಮಂಗ...
17-07-25 01:26 pm
17-07-25 10:42 pm
Mangalore Correspondent
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm
Cyber Crime Tumkur, Facebook, Mangalore Polic...
16-07-25 11:04 pm
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm