ಬ್ರೇಕಿಂಗ್ ನ್ಯೂಸ್
17-07-22 09:56 pm udupi Correspondent ಕರಾವಳಿ
ಕಾರ್ಕಳ, ಜುಲೈ 16: ಕಾರಿನ ಜೊತೆಗೆ ಒಬ್ಬ ಅಮಾಯಕನನ್ನು ಸುಟ್ಟು ಹಾಕಿದ ಪ್ರಕರಣ ಕಾರ್ಕಳ ಸೇರಿದಂತೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿದೆ. ಸಾಮಾನ್ಯ ಜನರು ಕೂಡ ಜನ ಹೀಗೂ ಮಾಡುತ್ತಾರೆಯೇ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇಷ್ಟಕ್ಕೂ ಜೀವಂತ ಸುಟ್ಟು ಕೊಲೆಯಾದ ಆನಂದ ದೇವಾಡಿಗ(60) ಕಾರ್ಕಳ ಪೇಟೆಯಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು, ಜನಪರ ವ್ಯಕ್ತಿಯಾಗಿದ್ದವರು. ಆಸುಪಾಸಿನಲ್ಲಿ ಹೆಚ್ಚಿನ ಮಂದಿಗೆ ಆನಂದಣ್ಣ ಅಂದರೆ ಪರಿಚಿತ ವ್ಯಕ್ತಿ. ಅವರ ಕೈಕೆಳಗೆ ನಾಲ್ಕು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು.
ಮೊನ್ನೆ ಜುಲೈ 13ರಂದು ಕೊಲೆಯಾಗುವುದಕ್ಕೂ ಮುನ್ನಾ ದಿನವೂ ಕಾರ್ಕಳ ಪೇಟೆಯ ಪಾರ್ಕ್ ಒಂದರಲ್ಲಿ ಆನಂದ ದೇವಾಡಿಗ ಮತ್ತು ಇತರ ನಾಲ್ವರು ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಯಾರದ್ದೋ ಫೋನ್ ಕರೆ ಬಂದಿತ್ತು. ಕರೆ ಬಂದ ಕೂಡಲೇ ಆನಂದ ದೇವಾಡಿಗ ಕೆಲಸ ಬಿಟ್ಟು ಅರ್ಜೆಂಟ್ ಆಗಿ ತೆರಳಿದ್ದರು. ಆನಂದ ದೇವಾಡಿಗ ಸ್ವಂತ ಕುಟುಂಬ ಹೊಂದಿರಲಿಲ್ಲ. ಕಾರ್ಕಳದಲ್ಲಿ ಒಬ್ಬಂಟಿಯಾಗಿಯೇ ಜೀವನ ಮಾಡುತ್ತಿದ್ದರು.
ಮಧ್ಯಾಹ್ನ ಆನಂದ ಕೆಲಸದ ನಡುವಿನಿಂದಲೇ ತೆರಳಿದ್ದರೂ, ಇತರರು ಸಂಜೆಯ ವರೆಗೂ ಕೆಲಸ ಮಾಡಿದ್ದರು. ಮರುದಿನವೂ ಪುರಸಭೆ ವ್ಯಾಪ್ತಿಯ ಅದೇ ಪಾರ್ಕಿನಲ್ಲಿಯೇ ಕೆಲಸ ಪೂರೈಸಿದ್ದರು. ಆದರೆ, ಮರುದಿನ ಸಂಜೆಯ ಹೊತ್ತಿಗೆ ಆನಂದ ದೇವಾಡಿಗ ಜೀವಂತ ಸುಟ್ಟು ಹೋಗಿದ್ದಾರೆ, ಅವರನ್ನು ಕೊಲೆ ಮಾಡಲಾಗಿದೆ ಎನ್ನುವ ಸುದ್ದಿ ಹಬ್ಬುತ್ತಿದ್ದಂತೆ ಕೆಲಸಗಾರರು ಶಾಕ್ ಆಗಿದ್ದರು. ಮುನ್ನಾದಿನ ಜೊತೆಗೇ ಕೆಲಸ ಮಾಡುತ್ತಿದ್ದವರು ಒಂದೇ ರಾತ್ರಿಯಲ್ಲಿ ಅದ್ಹೇಗೆ ಕೊಲೆಯಾಗಲು ಸಾಧ್ಯ ಎಂದು ತಮ್ಮಲ್ಲಿಯೇ ಪ್ರಶ್ನೆ ಮಾಡಲು ತೊಡಗಿದ್ದರು. ಆನಂದ ದೇವಾಡಿಗ ಕೊಲೆಯಾಗಿದ್ದಾರೆ ಎಂದರೆ, ಅವರು ನಂಬಲು ತಯಾರಿರಲಿಲ್ಲ. ಒಬ್ಬನಿಗಂತೂ ಎರಡು ದಿನದ ಸಂಬಳವನ್ನೂ ಆನಂದ ದೇವಾಡಿಗ ಮೊದಲೇ ನೀಡಿದ್ದರಂತೆ.
ಒಂದು ಹುಡುಗಿ ಇದ್ದಾಳೆ, ಬೇಗ ಬಾ..!
ಈಗ ಕೇಳಿಬರುತ್ತಿರುವ ಮಾತಿನ ಪ್ರಕಾರ, ಆನಂದ ದೇವಾಡಿಗರಿಗೆ ಕರೆ ಮಾಡಿದ್ದು ಮುಖ್ಯ ಆರೋಪಿ ಸದಾನಂದ ಶೇರಿಗಾರನೇ ಆಗಿರಬೇಕು ಅನ್ನೋದು. ಒಂದು ಹುಡುಗಿ ಇದೆ, ಸೆಟ್ ಮಾಡುತ್ತೇನೆ, ಬೇಗ ಬಾ ಎಂದು ಸದಾನಂದ ಶೇರಿಗಾರ್ ಫೋನ್ ಮಾಡಿ ಕರೆದಿದ್ದಾನೆ ಎನ್ನಲಾಗುತ್ತಿದೆ. ಆಸೆ ಹುಟ್ಟಿಸಿ ಕರೆಸಿದ್ದಲ್ಲದೆ, ತನ್ನ ಪ್ರೇಯಸಿ ಮೂಲಕ ಕರೆ ಮಾಡಿಸಿದ್ದಾನೆ. ಆನಂತರ, ಶಿಲ್ಪಾಳ ಮನೆ ಹಿರ್ಗಾನದ ಶಿವನಗರಕ್ಕೆ ಆನಂದ ದೇವಾಡಿಗ ತೆರಳಿದ್ದು, ಅಲ್ಲಿ ಲೈಂಗಿಕ ಸುಖ ಪಡೆಯೋದಕ್ಕೂ ಮೊದಲು ಕಂಠಪೂರ್ತಿ ಮದ್ಯ ಕುಡಿಸಿದ್ದಾರೆ. ಅಲ್ಲದೆ, ಹುಮ್ಮಸ್ಸು ಬರಲು ವಯಾಗ್ರ ಎಂದು ಹೇಳಿ ನಿದ್ದೆ ಮಾತ್ರೆಯನ್ನು ಸ್ವತಃ ಶಿಲ್ಪಾಳೇ ಕೊಟ್ಟಿದ್ದಾಳೆ ಎನ್ನೋದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಬಳಿಕ ಸದಾನಂದ ಶೇರಿಗಾರ್ ಆಕೆಯ ಮನೆಗೆ ತೆರಳಿ, ಇಬ್ಬರೂ ಸೇರಿ ಫೋರ್ಡ್ ಇಕಾನ್ ಕಾರಿನಲ್ಲಿ ಬಲವಂತದಿಂದ ಕುಳ್ಳಿರಿಸಿ ಬೈಂದೂರಿನ ಕಡೆಗೆ ಕೊಂಡೊಯ್ದಿದ್ದಾರೆ.
27 ಸಾವಿರ ಕೊಟ್ಟು ಕಾರು ರಿಪೇರಿ ಮಾಡಿಸಿದ್ದ
ಸದಾನಂದ ಶೇರಿಗಾರನ ಫೋರ್ಡ್ ಇಕಾನ್ ಕಾರು ಹಳೆಯದಾಗಿದ್ದು, ಕೆಲವೇ ದಿನಗಳ ಹಿಂದೆ ಕುಂಟಲ್ಪಾಡಿಯ ಗ್ಯಾರೇಜ್ ಒಂದರಲ್ಲಿ ರಿಪೇರಿ ಮಾಡಿಸಿದ್ದ. ಅಲ್ಲಿ ರಿಪೇರಿ ಖರ್ಚು 27 ಸಾವಿರ ರೂಪಾಯಿ ಆಗಿತ್ತು. ಕಾರನ್ನು ಕೃತ್ಯಕ್ಕೆ ಒಯ್ಯುವ ಉದ್ದೇಶದಿಂದಲೇ ರಿಪೇರಿ ಮಾಡಿಸಿದ್ದ ಎನ್ನುವ ಶಂಕೆ ಪೊಲೀಸರದ್ದು. ಅಲ್ಲದೆ, ಆನಂದ ದೇವಾಡಿಗನಿಗೆ ಆರೋಪಿ ಸದಾನಂದ ಶೇರಿಗಾರ್ ತನ್ನದೇ ಬಟ್ಟೆಯನ್ನೂ ತೊಡಿಸಿದ್ದ. ಕೃತ್ಯ ಎಸಗುವುದಕ್ಕೂ ಮುನ್ನ ತನ್ನ ಮೊಬೈಲನ್ನ ಕಾರಿನಲ್ಲಿಯೇ ಇರಿಸಿದ್ದ. ಆಮೂಲಕ ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಬಿಂಬಿಸಲು ಎಲ್ಲ ತಂತ್ರವನ್ನೂ ಹೂಡಿದ್ದ. ಆನಂದ ದೇವಾಡಿಗ ತೊಟ್ಟಿದ್ದ ಬಟ್ಟೆಯನ್ನು ಕಾರಿನಲ್ಲಿ ತೆರಳುತ್ತಲೇ ಎಣ್ಣೆಹೊಳೆಯ ಕಾಡಿನಲ್ಲಿ ಎಸೆದು ಹೋಗಿದ್ದರು.
ಇಷ್ಟಕ್ಕೂ ಕೃತ್ಯ ಎಸಗಲು ಕಾರ್ಕಳದಿಂದ ಬೈಂದೂರಿನ ಹೆನ್ ಬೇರು ವರೆಗೆ ಯಾಕೆ ತೆರಳಿದ್ದರು ಅನ್ನುವ ಶಂಕೆ ಮೂಡಿದೆ. ಹೆನ್ ಬೇರು ಅನ್ನೋದು ನಿರ್ಜನ ಪ್ರದೇಶ ಅನ್ನುವುದನ್ನು ತಿಳಿದುಕೊಂಡೇ ಆರೋಪಿಗಳು ಆ ಜಾಗವನ್ನು ಆಯ್ದುಕೊಂಡಿದ್ದರು ಅನ್ನುವ ಶಂಕೆಯಿದೆ. ಜುಲೈ 12ರ ರಾತ್ರಿ ಜೋರು ಮಳೆಯಿತ್ತು. ಆದರೂ ಎರಡು ಕಾರಿನಲ್ಲಿ ಬಂದು ಮಧ್ಯರಾತ್ರಿ 12ರಿಂದ 1 ಗಂಟೆಯ ನಡುವೆ ಬೆಂಕಿ ಕೊಟ್ಟು ಜೀವಂತ ಸುಟ್ಟು ಹಾಕಿದ್ದಾರೆ. ಪೂರ್ತಿ ಸುಟ್ಟು ಹೋಗುವ ತನಕ ಆರೋಪಿಗಳು ಅಲ್ಲಿ ನಿಂತಿರಲಿಲ್ಲ. ಬದಲಿಗೆ, ಯಾರೋ ಸ್ಥಳೀಯರನ್ನು ಅಲ್ಲಿ ನಿಲ್ಲಿಸಿ ಮಳೆಯ ನಡುವೆ ಪೂರ್ತಿ ಸುಟ್ಟು ಹೋಗುವಂತೆ ನೋಡಿಕೊಂಡಿದ್ದಾರೆ ಎನ್ನುವ ಶಂಕೆ ಇದೆ.
ಸುಸೈಡ್ ಪಾಯಿಂಟ್ ಹೆನ್ ಬೇರು
ಹೆನ್ ಬೇರು ಎನ್ನುವ ಜಾಗ ನಿರ್ಜನ ಪ್ರದೇಶವಾಗಿದ್ದು, ಹಲವು ಕೊಲೆ ಕೃತ್ಯಗಳು ಹಿಂದೆಯೂ ನಡೆದಿದ್ದವು. ಉಡುಪಿಯಲ್ಲಿ ಹೆಚ್ಚು ಸಂಚಲನ ಮೂಡಿಸಿದ್ದ ಅಕ್ಷತಾ ದೇವಾಡಿಗ, ರತ್ನಾ ಕೊಠಾರಿ ಕೊಲೆಯನ್ನೂ ಇದೇ ಜಾಗದಲ್ಲಿ ಮಾಡಲಾಗಿತ್ತು. 20 ವರ್ಷಗಳ ಹಿಂದೆಯೂ ಯುವತಿಯೊಬ್ಬಳನ್ನು ಕರೆತಂದು ಬರ್ಬರವಾಗಿ ಕೊಂದು ಹಾಕಲಾಗಿತ್ತು. ಹೀಗಾಗಿ ಸ್ಥಳೀಯರು ಈ ಜಾಗವನ್ನು ಕೊಲೆ ಕೃತ್ಯದ ಜಾಗ, ಸುಸೈಡ್ ಪಾಯಿಂಟ್ ಎಂದೇ ಗುರುತಿಸುತ್ತಾರೆ.
A girl is there, come was the entrapment used to entice mason Ananda Devadiga (60) into the dragnet by killers Sadananda Sherigar and Shilpa Poojary, who brutally murdered him by pouring petrol on the car at Karkala in Udupo inside which Ananda was made to sit forcibly.Ananda was living alone. He used to work at various places in Karkala as mason. He also had a team of four daily wage labourers with him. Ananda was well known locally.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm