ಬ್ರೇಕಿಂಗ್ ನ್ಯೂಸ್
06-07-22 12:01 pm Mangalore Correspondent ಕರಾವಳಿ
ಉಳ್ಳಾಲ, ಜು.6: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಅಂಗಳದಲ್ಲಿದ್ದ ಬಾವಿ ಕುಸಿದಿದ್ದು ಘಟನೆ ರಾತ್ರಿ ವೇಳೆ ನಡೆದ ಪರಿಣಾಮ ಭಾರೀ ದುರಂತ ತಪ್ಪಿರುವ ಘಟನೆ ಉಳ್ಳಾಲದ ಕುಂಪಲ ಮೂರುಕಟ್ಟೆ ಎರಡನೇ ಅಡ್ಡ ರಸ್ತೆಯಲ್ಲಿ ನಡೆದಿದೆ.
ನಿನ್ನೆ ರಾತ್ರಿ ಮೂರುಕಟ್ಟೆ ನಿವಾಸಿ ಸಂದೀಪ್ ಪೂಜಾರಿಯವರ ಮನೆಯಂಗಳದ ಬಾವಿ ಆವರಣ ಕಟ್ಟೆ ಸಮೇತ ಕುಸಿತಕ್ಕೊಳಗಾಗಿದೆ. ಸಂದೀಪ್ ಮತ್ತು ಅವರ ಇಬ್ಬರು ಸಹೋದರರು ಪತ್ನಿ ಮಕ್ಕಳೊಂದಿಗೆ ಈ ಮನೆಯಲ್ಲಿ ಜೊತೆಯಾಗಿ ವಾಸಿಸುತ್ತಿದ್ದಾರೆ. ಸಂದೀಪ್ ಅವರ ಸಹೋದರ ಅವಿನಾಶ್ ಅವರ ಪತ್ನಿ ದಿನನಿತ್ಯವೂ ಬೆಳ್ಳಂಬೆಳಗ್ಗೆ ಕುಡಿಯಲು ಬಾವಿಯ ನೀರನ್ನು ಸೇದುವ ಪರಿಪಾಠ ಬೆಳೆಸಿದ್ದರಂತೆ. ಅಲ್ಲದೇ ಹಗಲಲ್ಲಿ ಮೂವರು ಸಹೋದರರ ಮಕ್ಕಳು ಅಂಗಳದಲ್ಲಿ ಆಟವಾಡುತ್ತಿರುತ್ತಾರೆ. ಅದೃಷ್ಟವಶಾತ್ ಘಟನೆ ರಾತ್ರಿ ನಡೆದುದರಿಂದ ಭಾರೀ ದುರುಂತ ತಪ್ಪಿದಂತಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.




ಬಾವಿಯ ಹತ್ತಿರವೇ ಕಾರನ್ನೂ ನಿಲ್ಲಿಸಲಾಗಿದ್ದು ಅದಕ್ಕೆ ಹಾನಿ ಸಂಭವಿಸಿಲ್ಲ. ಘಟನೆಯಿಂದ ಸುಮಾರು ಮೂರು ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಭೇಟಿ ಕೊಟ್ಟ ಸೋಮೇಶ್ವರ ಪುರಸಭಾ ನಿಕಟಪೂರ್ವ ಸದಸ್ಯರಾದ ಮನು ಕಟ್ಟೆಮನೆ ಅವರು ನಷ್ಟದ ಪರಿಹಾರ ಒದಗಿಸಿ ಕೊಡುವುದಾಗಿ ಹೇಳಿದ್ದಾರೆ. ನಿರಂತರ ಮಳೆ ಸುರಿಯುವಾಗ ಬಾವಿಯ ನೀರು ಸೇದಬೇಡಿ ಎಂದು ಜನರಿಗೆ ಅವರು ಎಚ್ಚರಿಸಿದ್ದಾರೆ.
Water Well collapsed due to heavy rain at Kumpala in Mangalore.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm