ಬ್ರೇಕಿಂಗ್ ನ್ಯೂಸ್
29-06-22 05:26 pm Mangalore Correspondent ಕರಾವಳಿ
ಮಂಗಳೂರು, ಜೂನ್ 29 : ಕೊಲೆಗೆ ಸ್ಕೆಚ್ ಹಾಕಿದ್ದಾರೆಂದು ಸುದ್ದಿಯಾಗಿದ್ದ ಬೆಂಗಳೂರಿನ ಉದ್ಯಮಿ, ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸೋದರ ಗುಣರಂಜನ್ ಶೆಟ್ಟಿ ಅವರನ್ನು ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಕರೆಸಿ ವಿಚಾರಣೆ ನಡೆಸಲಾಗಿದೆ.
ಕೊಲೆಗೆ ಸ್ಕೆಚ್ ವಿಚಾರದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ಗೃಹ ಇಲಾಖೆಯಿಂದ ಹೊಣೆ ನೀಡಲಾಗಿದೆ. ಹೀಗಾಗಿ ಮಂಗಳೂರು ಕಮಿಷನರ್ ಕಚೇರಿಗೆ ಗುಣರಂಜನ್ ಶೆಟ್ಟಿ ಅವರನ್ನು ಕರೆಸಿ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಮಾಹಿತಿ ಸಂಗ್ರಹಿಸಿದ್ದಾರೆ.
ವಿಚಾರಣೆ ಬಳಿಕ ಮಾಧ್ಯಮಕ್ಕೆ ಮಾಹಿತಿ ನೀಡಿದ ಗುಣರಂಜನ್ ಶೆಟ್ಟಿ, ನನಗೆ ಬಂದಿರುವ ರಿಲೈಬಲ್ ಸೋರ್ಸ್ ಪ್ರಕಾರ ಗೃಹ ಇಲಾಖೆಗೆ ಮನವಿಯನ್ನು ಕೊಟ್ಟಿದ್ದೆ. ಸಾರ್ವಜನಿಕ ಜೀವನದಲ್ಲಿ ಇರೋದ್ರಿಂದ ಹಲವಾರು ಜನರ ಜೊತೆ ವ್ಯವಹಾರ ಇದೆ, ನಿಷ್ಠುರ ಇದ್ದವರು ಕೂಡ ಇದ್ದಾರೆ. ಮಂಗಳೂರು ಪೊಲೀಸರು ಮಾಹಿತಿ ಸಂಗ್ರಹಕ್ಕೆ ಬರಹೇಳಿದ್ದರು. ಪೊಲೀಸರಿಗೆ, ನನಗೇನು ಗೊತ್ತಿದೆ ಆ ಮಾಹಿತಿಗಳನ್ನು ಕೊಟ್ಟಿದ್ದೇನೆ ಎಂದು ಹೇಳಿದರು.

ಇದರ ಹಿಂದೆ ಇಂಥದ್ದೇ ವ್ಯಕ್ತಿ ಇದ್ದಾರೆ ಎಂದು ಖಚಿತವಾಗಿ ಹೇಳಕ್ಕಾಗುವುದಿಲ್ಲ. ಪೊಲೀಸರು ತನಿಖೆ ಆರಂಭಿಸಿದ್ದು ಕೆಲವರನ್ನು ಖಚಿತವಾಗಿ ವಿಚಾರಣೆ ಮಾಡುತ್ತಾರೆ. ನನಗೆ ಪೊಲೀಸ್ ಭದ್ರತೆ ಬೇಕೆಂದು ಕೇಳಿಕೊಂಡಿಲ್ಲ. ಪೊಲೀಸರ ಭದ್ರತೆ ಬೇಕೆಂದಿದ್ದರೆ ಅವರೇ ತೀರ್ಮಾನ ತೆಗೆದುಕೊಳ್ಳಬೇಕು. ಕರ್ನಾಟಕ ಪೊಲೀಸರ ಬಗ್ಗೆ ನಂಬಿಕೆ ಇದೆ, ಸೀರಿಯಸ್ ಇದ್ದಾರೆ. ವಿಚಾರಣೆ ಮಾಡಲಿದ್ದು ಏನು ಸತ್ಯ ಇದೆಯೋ ಅದನ್ನು ಹೊರ ತರುತ್ತಾರೆ ಎಂದು ಹೇಳಿದರು.

ನಿಮಗೇನಾದರೂ ಬೆದರಿಕೆ ಇತ್ತೇ, ಯಾರು ಇದರ ಹಿಂದಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಗುಣರಂಜನ್ ಶೆಟ್ಟಿ, ರಿಲೈಬಲ್ ಸೋರ್ಸ್ ಎಂದು ಯಾಕೆ ಹೇಳಿದ್ದಂದ್ರೆ ನಿಶ್ಚಿತವಾಗಿ ಹೆಸರನ್ನು ಹೇಳಬಾರದು ಅಂತ. ಯಾರು ಶಾಮೀಲಾತಿ ಇದ್ದಾರೋ ಪೊಲೀಸರು ಅವರನ್ನು ತನಿಖೆ ಮಾಡಬೇಕಾಗುತ್ತದೆ. ಪ್ರಕರಣದ ಬಗ್ಗೆ ಮನ್ವಿತ್ ರೈ ಬಗ್ಗೆ ನಾನು ದೂರು ಹೇಳಿಲ್ಲ. ಯಾಕಾಗಿ ಆತ ಹೊರಗಡೆ ಹೇಳಿದ್ದೋ ಗೊತ್ತಿಲ್ಲ. ಮನ್ವಿತ್ ರೈ ಜೊತೆಗೆ ಯಾವುದೇ ವೈಮನಸ್ಸು ಹೊಂದಿಲ್ಲ. ಎರಡು ವರ್ಷದಿಂದ ಸಂಪರ್ಕ ಇಲ್ಲ ಅಷ್ಟೇ. ಅವರು ಇದನ್ನು ಹೊರಗಡೆ ಯಾಕೆ ಹೇಳಿದ್ದು ಅಂತ ಅವರೇ ಹೇಳಬೇಕು. ಪೊಲೀಸ್ ಸೆಕ್ಯುರಿಟಿ ಬೇಕೆಂದು ನಾನು ಕೇಳೋದಿಲ್ಲ. ಪೊಲೀಸರೇ ಅದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಉದ್ಯಮಿ, ನಟಿ ಅನುಷ್ಕಾ ಶೆಟ್ಟಿ ಸೋದರ ಗುಣರಂಜನ್ ಶೆಟ್ಟಿ ಹೇಳಿದ್ದಾರೆ.


ವಿಚಾರಣೆ ಬಗ್ಗೆ ಮಾಹಿತಿ ಹಂಚಿಕೊಂಡ ಪೊಲೀಸ್ ಕಮಿಷನರ್ ಶಶಿಕುಮಾರ್, ನಿಶ್ಚಿತವಾಗಿ ಯಾರು ಬೆದರಿಕೆ ಹಾಕಿದ್ದಾರೆಂದು ಹೇಳಿಲ್ಲ. ಬಲ್ಲ ಮೂಲಗಳ ಪ್ರಕಾರ ಕೊಲೆ ಬೆದರಿಕೆ ಇರುವುದನ್ನು ಹೇಳಿದ್ದಾರೆ. ತನಿಖೆಗೆ ಮಾಹಿತಿ ಸಂಗ್ರಹಿಸುವುದಕ್ಕಾಗಿ ಕರೆಸಿದ್ದೇವೆ. ಕೆಲವರ ಬಗ್ಗೆ ಶಂಕೆ ಇರುವ ಬಗ್ಗೆ ಹೇಳಿದ್ದಾರೆ. ಅವರೊಬ್ಬರು ಸಾರ್ವಜನಿಕ ಜೀವನದಲ್ಲಿ ಇರೋ ವ್ಯಕ್ತಿಯಾಗಿದ್ದು ನಾವು ಎಲ್ಲ ಆಯಾಮದಲ್ಲಿ ತನಿಖೆ ನಡೆಸುತ್ತೇವೆ. ಯಾರೆಲ್ಲರ ಹೆಸರು ಕೇಳಿಬಂದಿತ್ತೋ ಅವರನ್ನು ವಿಚಾರಣೆಗೆ ಕರೆಸುತ್ತೇವೆ ಎಂದು ಹೇಳಿದರು.
Actor Gunaranjan Shetty murder threat, observes enquiry at Mangalore commissioner office. Shashi Kumar has appointed CCB inspector Mahesh prasad to investigate the case. Multilingual actress anushka Shetty's brother Gunaranjan Shetty gets murder threats after which a petition has been filed with the karnataka home minister, requesting security and judicial action. On Sunday, members of Gunaranjan Shetty's Jayakarnataka Janapara Vedike filed a petition with home minister Araga Jnanendra, requesting protection and legal action
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm