ಬ್ರೇಕಿಂಗ್ ನ್ಯೂಸ್
30-09-20 03:45 pm Mangalore Correspondent ಕರಾವಳಿ
ಮಂಗಳೂರು, ಸೆಪ್ಟಂಬರ್ 30: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಅ.1ರಿಂದ ಮಂಗಳೂರು - ಹೈದರಾಬಾದ್ ಮಾರ್ಗದಲ್ಲಿ ಅಂಬಾರಿ ಡ್ರೀಮ್ಕ್ಲಾಸ್ ಮಲ್ಟಿ ಆ್ಯಕ್ಸಿಲ್ ಎಸಿ ಸ್ಲಿಪರ್ ದರ್ಜೆಯ ಬಸ್ ಹಾಗೂ ಉಡುಪಿ - ಹೈದರಾಬಾದ್ ಮಾರ್ಗದಲ್ಲಿ ರಾಜಹಂಸ ಬಸ್ ಸೇವೆ ಪ್ರಾರಂಭಿಸಲಿದೆ. ಕೊರೊನಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪ್ರಯಾಣಿಸಲು ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಅಂಬಾರಿ ಡ್ರೀಮ್ ಕ್ಲಾಸ್ ಮಲ್ಟಿ ಆ್ಯಕ್ಸಿಲ್ ಎಸಿ ಸ್ಲಿಪರ್ ಬಸ್ ಮಧ್ಯಾಹ್ನ 3ಕ್ಕೆ ಮಂಗಳೂರಿನಿಂದ ಹೊರಟು ಸುರತ್ಕಲ್, ಮೂಲ್ಕಿ, ಉಡುಪಿ, ಕುಂದಾಪುರ, ಭಟ್ಕಳ, ಹುಬ್ಬಳ್ಳಿ, ಗದಗ, ಕೊಪ್ಪಳ, ರಾಯಚೂರು ಮೂಲಕ ಹೈದರಾಬಾದ್ಗೆ ಮರುದಿನ ಬೆಳಗ್ಗೆ 8.30ಕ್ಕೆ ತಲುಪಲಿದೆ. ಹೈದರಾಬಾದ್ನಿಂದ ಸಂಜೆ 5ಕ್ಕೆ ಹೊರಟು ಅದೇ ಮಾರ್ಗವಾಗಿ ಮಂಗಳೂರಿಗೆ ಮರುದಿನ ಬೆಳಗ್ಗೆ 10 ಗಂಟೆಗೆ ತಲುಪಲಿದೆ. ಪ್ರಯಾಣ ದರ 1,700 ರೂ. ಆಗಿರುತ್ತದೆ.

ರಾಜಹಂಸ ಬಸ್ ಉಡುಪಿಯಿಂದ ಬೆಳಗ್ಗೆ 11.30ಕ್ಕೆ ಹೊರಟು ಮಣಿಪಾಲ, ಕುಂದಾಪುರ, ಸಿದ್ದಾಪುರ, ತೀರ್ಥಹಳ್ಳಿ, ಶಿವಮೊಗ್ಗ, ಹರಿಹರ, ಹರಪನಹಳ್ಳಿ, ಹೊಸಪೇಟೆ, ಗಂಗಾವತಿ, ಮಾನ್ವಿ, ರಾಯಚೂರು ಮೂಲಕ ಹೈದರಾಬಾದ್ಗೆ ಮರುದಿನ ಬೆಳಗ್ಗೆ 6.30ಕ್ಕೆ ತಲುಪಲಿದೆ. ಹೈದರಾಬಾದ್ನಿಂದ ಸಂಜೆ 5.30ಕ್ಕೆ ಹೊರಟು ಉಡುಪಿಗೆ ಮರುದಿನ ಬೆಳಗ್ಗೆ 11 ಗಂಟೆಗೆ ತಲುಪಲಿದೆ. ಪ್ರಯಾಣ ದರ 970 ರೂ. ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದೆ ಎಂದು ಕೆಎಸ್ಆರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟನೆ ತಿಳಿಸಿದೆ.
30-01-26 12:38 pm
HK News Desk
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
ಕಾರವಾರ ರಿಶೇಲ್ ಡಿಸೋಜಾ ಆತ್ಮಹತ್ಯೆ ; ಕೊನೆಗೂ JDS ನ...
30-01-26 11:55 am
ಚೀಟಿ ವ್ಯವಹಾರ ಇತ್ಯರ್ಥಕ್ಕೆ 4 ಲಕ್ಷ ರೂ. ಲಂಚಕ್ಕೆ ಬ...
29-01-26 11:03 pm
ಡಿಕೆ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವಕಾಶ...
29-01-26 10:48 pm
30-01-26 03:38 pm
HK News Desk
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
30-01-26 03:43 pm
Mangalore Correspondent
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
ನಿರ್ಲಕ್ಷ್ಯದಿಂದಲೇ ಅಪಘಾತ ಹೆಚ್ಚಳ, ಕುಡಿದು ವಾಹನ ಚಲ...
27-01-26 10:50 pm
27-01-26 10:18 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm
ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ! ಬಣ್...
27-01-26 03:21 pm
JAKEA Michael Rego, Rajeev Gowda Arrest: ಧಮ್ಕ...
27-01-26 12:22 pm