ಬ್ರೇಕಿಂಗ್ ನ್ಯೂಸ್
06-11-26 05:01 pm HK News Staffer ಕ್ರೈಂ
ವರ್ಜೀನಿಯಾ, ನವೆಂಬರ್ 6: ಪತ್ನಿಯ ಸಾವಿನ ಬಳಿಕ ಮೃತದೇಹವನ್ನು ಗರಗಸದಿಂದ ತುಂಡು ಮಾಡಿ ಕಸದ ಚೀಲಗಳಲ್ಲಿ ಎಸೆದಿರುವುದಾಗಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಅಮೆರಿಕದ ನ್ಯಾಯಾಲಯದಲ್ಲಿ ಆಘಾತಕಾರಿ ಅಂಶವನ್ನು ತೆರೆದಿಟ್ಟಿದ್ದಾರೆ. ವರ್ಜೀನಿಯಾದಲ್ಲಿ ಭಾರತ ಮೂಲದ ಮಮತಾ ಭಟ್(28) ಎಂಬ ಮಹಿಳೆಯ ನಿಗೂಢ ಸಾವು ಪ್ರಕರಣದಲ್ಲಿ ಪತಿ ನರೇಶ್ ಭಟ್ ನನ್ನು ಕೊಲೆ ಆರೋಪಿಯಾಗಿ ಪೊಲೀಸರು ಬಂಧಿಸಿದ್ದು ಕೋರ್ಟಿನಲ್ಲಿ ವಿಚಾರಣೆ ಸಂದರ್ಭದಲ್ಲಿ ತಾನು ಸಾಯಿಸಿಲ್ಲ. ಆಕೆಯೇ ವಿಷ ಸೇವಿಸಿ ಸಾವಿಗೀಡಾಗಿದ್ದಳು. ಪೊಲೀಸರಿಗೆ ಹೇಳುವ ಬದಲು ಶವವನ್ನು ಕತ್ತರಿಸಿ ವಿಲೇವಾರಿ ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ.
ಆತನ ಹೇಳಿಕೆಯ ಪ್ರಕಾರ, 2024ರ ಜುಲೈ 29ರ ರಾತ್ರಿ ಮಮತಾ ಮಗಳೊಂದಿಗೆ ಮಲಗಲು ತೆರಳಿದ್ದರು. ಮರುದಿನ ಬೆಳಗಿನ ಜಾವ ಸುಮಾರು 4 ಗಂಟೆಗೆ ಎಚ್ಚರವಾದಾಗ ಪತ್ನಿ ಹಾಸಿಗೆಯ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡಿದ್ದೆ. ಆಕೆಯ ಸುತ್ತ ವಾಂತಿ, ಮಾತ್ರೆಗಳು ಮತ್ತು ಸೆಲ್ಫೋಸ್ ಎಂಬ ವಿಷಕಾರಿ ಕೀಟನಾಶಕದ ಪ್ಯಾಕೆಟ್ ಇತ್ತು. ಬಳಿಕ ಪತ್ನಿಯನ್ನು ಬದುಕಿಸಲು ಒಂದು ಗಂಟೆ ಸಿಪಿಆರ್ ಸೇರಿದಂತೆ ಹಲವು ಪ್ರಯತ್ನಗಳನ್ನು ಮಾಡಿದ್ದಾಗಿ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ.


ಆದರೆ ಮಮತಾ ಮೃತಪಟ್ಟಿರುವುದು ಖಚಿತವಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡುವ ಬದಲು ಮೃತದೇಹವನ್ನು ಹೇಗೆ ವಿಲೇವಾರಿ ಮಾಡುವುದು ಎಂಬ ಬಗ್ಗೆ ಯೋಚಿಸಿದ್ದೆ. ನಾನು ಯಾಕೆ ಹಾಗೆ ಮಾಡಿದೆ ಎಂದು ನನಗೇ ಗೊತ್ತಾಗುತ್ತಿಲ್ಲ. ಆರಂಭದಲ್ಲಿ ಮೃತದೇಹವನ್ನು ಪೊಟೊಮ್ಯಾಕ್ ನದಿಗೆ ಎಸೆಯುವ ಆಲೋಚನೆ ಬಂದಿತ್ತು ಎಂದೂ ಹೇಳಿದ್ದಾರೆ.
ಮೃತದೇಹವನ್ನು ಕಸದ ಬುಟ್ಟಿಯಲ್ಲಿ ಹಾಕಲು ಪ್ರಯತ್ನಿಸಿದಾಗ ಅದು ಒಳಗೆ ಸೇರಲಿಲ್ಲ. ಹೀಗಾಗಿ ಗರಗಸ ಬಳಸಿ ಕಾಲುಗಳನ್ನು ದೇಹದಿಂದ ಬೇರ್ಪಡಿಸಿ ಬೇರೆ ಬೇರೆ ಚೀಲಗಳಲ್ಲಿ ತುಂಬಿಸಿ ಎಸೆದು ಬಂದಿದ್ದೆ ಎಂದು ನರೇಶ್ ಹೇಳಿದ್ದಾರೆ. ಜುಲೈ 2024ರಲ್ಲಿ ನಡೆದ ಈ ಪ್ರಕರಣ ಮೊದಲಿಗೆ ಮಹಿಳೆ ನಾಪತ್ತೆ ಎಂದು ದಾಖಲಾಗಿತ್ತು. ಬಳಿಕ ವಿಚಾರಣೆ ಸಂದರ್ಭದಲ್ಲಿ ಮನೆಯ ಬೆಡ್ ರೂಮಿನಲ್ಲಿ ರಕ್ತದ ಕಲೆಗಳಿದ್ದುದು ಡಿಎನ್ಎ ಪರೀಕ್ಷೆಯಲ್ಲಿ ಸಾಬೀತಾಗಿತ್ತು. ಹೀಗಾಗಿ ಪತಿ ನರೇಶ್ ಭಟ್ ಮೇಲೆ ಕೊಲೆ ಆರೋಪ ಹೊರಿಸಲಾಗಿತ್ತು.
ಮಮತಾ 2024ರ ಜುಲೈ 29ರಂದು ಕೊನೆಯ ಬಾರಿಗೆ ವಿಡಿಯೋ ಕಾಲ್‌ನಲ್ಲಿ ಕಾಣಿಸಿಕೊಂಡಿದ್ದರು. ಆಗಸ್ಟ್ 1ರಂದು ಅವರು ಕೆಲಸಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗಸ್ಟ್ 5ರಂದು ನರೇಶ್ ಪತ್ನಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ ದಂಪತಿಯ ಮನೆಯ ಮಲಗುವ ಕೋಣೆ ಮತ್ತು ಸ್ನಾನಗೃಹದಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದವು. ಜೊತೆಗೆ ಕೂದಲಿನ ತುಣುಕುಗಳು ಹಾಗೂ ರಕ್ತದ ಗುರುತುಗಳಿದ್ದ ಗರಗಸವನ್ನೂ ವಶಪಡಿಸಲಾಗಿತ್ತು.
ನರೇಶ್ ಪತ್ನಿಯನ್ನು ಕೊಂದು, ಮೃತದೇಹವನ್ನು ತುಂಡು ಮಾಡಿ ವಿವಿಧ ಕಸದ ಕಂಟೇನರ್‌ಗಳಲ್ಲಿ ಎಸೆದಿದ್ದಾರೆ ಎಂದು ಪೊಲೀಸರು ಆರೋಪ ದಾಖಲಿಸಿದ್ದರು. ವಿಚಾರಣೆ ವೇಳೆ ಮನೆಯಲ್ಲಿದ್ದ ರಕ್ತದ ಮಾದರಿಗಳು, ಗರಗಸದಲ್ಲಿನ ರಕ್ತದ ಗುರುತುಗಳು ಮತ್ತು ಸಿಸಿಟಿವಿ ದೃಶ್ಯಗಳನ್ನು ಸಾಕ್ಷ್ಯವಾಗಿ ತೋರಿಸಲಾಗಿತ್ತು. ನರೇಶ್ ಕಸದ ಚೀಲಗಳನ್ನು ವಿವಿಧ ಕಂಟೇನರ್‌ಗಳಿಗೆ ಎಸೆಯುತ್ತಿರುವ ದೃಶ್ಯಗಳನ್ನೂ ಸಂಗ್ರಹಿಸಿ ನ್ಯಾಯಾಲಯಕ್ಕೆ ತೋರಿಸಲಾಗಿದೆ. ಮಮತಾ ಅವರ ಸಹೋದರ ಕೂಡ ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡಿದ್ದಾರೆ. ವಿಚಾರಣೆ ಮುಂದುವರಿದಿದ್ದು ಕೊಲೆ ಆರೋಪವನ್ನು ನರೇಶ್ ನಿರಾಕರಿಸಿದ್ದಾರೆ.
03-11-26 09:48 pm
HK News Desk
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲ...
03-11-26 01:01 pm
ಹಿರಿಯ ಸಂಶೋಧಕಿ ಡಾ.ಇಂದಿರಾ ಹೆಗ್ಗಡೆ, ಹಿರಿಯ ವಕೀಲ ಬ...
30-10-26 08:26 pm
ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್ ; ಕೇಂದ್ರ ಸಚಿವ ಕುಮ...
30-10-26 05:15 pm
ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್ ; ನಂದಿನಿ ಹಾ...
29-10-26 08:21 pm
29-10-26 09:28 pm
HK News Staffer
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
06-11-26 11:03 pm
HK News Desk
ಕಾಂಗ್ರೆಸ್ ಕಾಲದಲ್ಲಿ 11 ಬಾರಿ ಎಸ್ಐಆರ್ ಲೀಗಲ್, ಈಗ...
06-11-26 09:35 pm
ಮಂಗಳೂರು ಮೂಲದ ಯಾಯಿನ್ ಕಿರಣ್ ರೈ ಯುಎಇ ಅಂಡರ್-19 ಕ್...
06-11-26 09:21 pm
ಪಿಲಿಕುಳ ನಿಸರ್ಗಧಾಮದ 356 ಎಕರೆ ಭೂ ಗುತ್ತಿಗೆ ರದ್ದು...
05-11-26 09:42 pm
ಬೆಂಗಳೂರಿನಿಂದ LSD ಡ್ರಗ್ಸ್ ಸಪ್ಲೈ: ಮಂಗಳೂರಿನ ವಿದ...
05-11-26 03:23 pm
06-11-26 08:08 pm
HK News Desk
Naresh Bhat, Wife Murder: ಪತ್ನಿ ವಿಷ ಕುಡಿದು ಆತ...
06-11-26 05:01 pm
ಬೆಂಗಳೂರಿನಲ್ಲಿ ಭೀಕರ ಹತ್ಯಾಕಾಂಡ ; ಪತ್ನಿ ಮೇಲಿನ ಸಿ...
06-11-26 10:55 am
Mangalore, Veerendra Shetty: ಜಾಗದ ವಿಚಾರದಲ್ಲಿ...
05-11-26 10:45 pm
ಬಾಳೆಕುದ್ರು ಮಠದ ಸಾವಿರಾರು ವರ್ಷ ಹಿನ್ನೆಲೆಯ ವಿಗ್ರಹ...
05-11-26 07:51 pm