ಬ್ರೇಕಿಂಗ್ ನ್ಯೂಸ್
22-03-22 08:27 pm Source: Vijayakarnataka ಡಾಕ್ಟರ್ಸ್ ನೋಟ್
ಬೇಸಿಗೆ ಕಾಲದಲ್ಲಿ ತಂಪು ತಂಪಾದ ಪಾನೀಯಗಳ ಮೇಲೆ ಮನಸ್ಸು ಹಾತೊರೆಯುತ್ತದೆ. ಅವು ದೇಹವನ್ನು ತಂಪಾಗಿಸುತ್ತವೆ ಎಂಬ ತಪ್ಪು ಪರಿಕಲ್ಪನೆ ನಮ್ಮಲ್ಲಿವೆ. ಆದರೆ ಕೃತಕ ಪಾನೀಯಗಳು ದೇಹವನ್ನು ತಂಪಾಗಿಸುವ ಬದಲಾಗಿ ಅನೇಕ ಆರೋಗ್ಯ ತೊಡಕುಗಳನ್ನು ಸೃಷ್ಟಿಸುತ್ತವೆ.
ಪ್ರತಿನಿತ್ಯ ನಾವು ಬೆಳಗೆದ್ದು ತಪ್ಪದೇ ಕುಡಿಯುವ ಕಾಫಿ, ಚಹಾವನ್ನು ಬೇಸಿಗೆಯ ಕಾಲದಲ್ಲಿ ಕುಡಿಯಬಹುದೇ ಎಂಬ ಸಂಶಯ ಸಹಜವಾಗಿ ಮೂಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಕಾಫಿಯ ಹೊರತಾಗಿ ಚಹಾವನ್ನು ಸೇವನೆ ಮಾಡುವುದು ಉತ್ತಮ ಎನ್ನುತ್ತಾರೆ. ಅಷ್ಟಕ್ಕೂ ಬೇಸಿಗೆ ಕಾಲದಲ್ಲಿ ಚಹಾ ಕುಡಿಯುವುದರಿಂದ ಪಡೆಯಬಹುದಾದ ಲಾಭಗಳು ಯಾವುವು ಎಂಬುದನ್ನು ಸಂಕ್ಷಿಪ್ತವಾಗಿ ಇಲ್ಲಿ ತಿಳಿಯಿರಿ.
ಚಹಾ ಕುಡಿಯುವುದರಿಂದ ಆಗುವ ಲಾಭಗಳು
ಚಹಾ ಏಕೆ ಕುಡಿಯಬೇಕು?
ಚಹಾವನ್ನು ಪ್ರತಿನಿತ್ಯ ನಿಯಮಿತವಾಗಿ ಕುಡಿಯುವುದರಿಂದ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಇದು ಕೇವಲ ನಿಮ್ಮನ್ನು ಉಲ್ಲಾಸಮಯವಾಗಿಸುವುದಿಲ್ಲ, ಬದಲಾಗಿ ಉರಿಯೂತದ ವಿರುದ್ಧ ಹೋರಾಡುತ್ತದೆ. ಇನ್ನು ಖಿನ್ನತೆಯನ್ನು ದೂರವಾಗಿಸುತ್ತದೆ.
ಅಪಾಯಕಾರಿ ಕ್ಯಾನ್ಸರ್ ಮತ್ತು ಹೃದ್ರೋಗದಂತಹ ಕಾಯಿಲೆಗಳಿಂದ ದೂರವಿಡುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಈ ಬೇಸಿಗೆಯ ಕಾಲದಲ್ಲಿ ಕಾಫಿಯ ಬದಲಾಗಿ ಚಹಾವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎಂದು ಅಧ್ಯಯನಗಳು ಕೂಡ ಹೇಳುತ್ತವೆ.
ಬೇಸಿಗೆಯಲ್ಲಿ ಚಹಾ
ಕಾಫಿಯಂತೆ ಚಹಾ ಕೂಡ ಬಿಸಿ ಪಾನೀಯವಾಗಿದೆ. ಬೇಸಿಗೆಯಲ್ಲಿ ಬಿಸಿ ಬಿಸಿ ಚಹಾ ಕುಡಿಯುವುದರಿಂದ ಬೆವರುವಿಕೆಯ ಹೆಚ್ಚುತ್ತದೆ. ಅಂದರೆ ದೇಹದಲ್ಲಿನ ಶಾಖವನ್ನು ಉತ್ಪಾದನೆ ಮಾಡುತ್ತದೆ. ಹೆಚ್ಚಿದ ಬೆವರು ಉತ್ಪಾದನೆಯ ಪರಿಣಾಮವಾಗಿ ಬೆವರು ಆವಿಯಾಗಿ, ದೇಹವನ್ನು ತಂಪಾಗುವಂತೆ ಮಾಡುತ್ತದೆ.
ಸಾಕಷ್ಟು ಮಂದಿ ಸುಡುವ ಶಾಖದಿಂದ ತಪ್ಪಿಸಿಕೊಳ್ಳಲು ತಂಪು ಪಾನೀಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಸಂಶೋಧನೆಗಳು ಮಾತ್ರ ಬೇಸಿಗೆಯಲ್ಲಿ ಬಿಸಿ ಚಹಾವನ್ನು ಕುಡಿಯುವುದು ದೇಹವನ್ನು ಹೆಚ್ಚು ತಂಪಾಗಿಸುವ ಪರಿಣಾಮವನ್ನು ಬೀರುತ್ತದೆ ಎಂದು ಹೇಳುತ್ತದೆ.ಚಹಾವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಮನಸ್ಥಿತಿ, ಖಿನ್ನತೆಯಂತಹ ಲಕ್ಷಣಗಳನ್ನು ನಿವಾರಿಸಲು ಚಹಾ ಸೂಕ್ತವಾದ ಪಾನೀಯವಾಗಿದೆ. ಇಷ್ಟೇ ಅಲ್ಲ, ಚಹಾ ಕಣ್ಣಿನ ಆರೋಗ್ಯವನ್ನು
ಸುಡುವ ಬಿಸಿಲಿಗೆ ಪಾನೀಯ
ಈ ಬೇಸಿಗೆಯ ಸಮಯದಲ್ಲಿ ಜನರು ನಿರ್ಜಲೀಕರಣ ಮತ್ತು ಶಾಖದ ಹೊಡೆತವನ್ನು ತಡೆಯಲು ಸಾಕಷ್ಟು ದ್ರವ ರೂಪದ ಆಹಾರ ಅಥವಾ ಕುಡಿಯುವುದು ಬಹಳ ಮುಖ್ಯ. ಬಿಸಿ ವಾತಾವರಣದ ಅವಧಿಯಲ್ಲಿ ಸಾಕಷ್ಟು ನೀರು, ತಾಜಾ ಹಣ್ಣಿನ ಜ್ಯೂಸ್‌ಗಳನ್ನು ಸೇವನೆ ಮಾಡಲಾಗುತ್ತದೆ. ಅದೇ ಸಾಲಿನಲ್ಲಿ ಚಹಾ ಕೂಡ ಕಡಿಮೆ ಕೊಬ್ಬನ್ನು ಹೊಂದಿರುವುದರಿಂದ ಅತ್ಯುತ್ತಮವಾದ ಪಾನೀಯವಾಗಿದೆ.
Drinking Tea During Summer Is Good Or Bad.
12-08-25 10:39 pm
Bangalore Correspondent
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
KN Rajanna resigns: ಸಹಕಾರ ಸಚಿವ ಕೆ.ಎನ್ ರಾಜಣ್ಣ...
11-08-25 03:29 pm
12-08-25 02:49 pm
HK News Desk
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
ಮದುವೆಯಾಗುತ್ತೇನೆಂದು ನಂಬಿಸಿ ಮೋಸ, ಇಸ್ಲಾಮಿಗೆ ಮತಾಂ...
11-08-25 08:55 pm
Rabies Death, Supreme Court: ರಾಜಧಾನಿಯಲ್ಲಿ ರೇಬ...
11-08-25 02:48 pm
12-08-25 08:34 pm
Mangalore Correspondent
Pilikula Zoo Director, Mangalore Police: ಪಿಲಿ...
12-08-25 01:49 pm
Mangalore, Manipal Health Card, Silver Jubile...
12-08-25 01:09 pm
Dharmasthala Case, SIT, Radar: ಧರ್ಮಸ್ಥಳ 13ನೇ...
11-08-25 07:39 pm
Padmalatha Murder Case, Dharmasthala, SIT: 19...
11-08-25 03:33 pm
12-08-25 12:36 pm
Bangalore Correspondent
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm