ಬ್ರೇಕಿಂಗ್ ನ್ಯೂಸ್
25-02-22 11:18 pm Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ದಾಳಿಂಬೆ ಹಣ್ಣಿನ ಆರೋಗ್ಯ ಪ್ರಯೋಜನಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ ಅಲ್ವಾ? ಈ ಹಣ್ಣುಗಳು ಸ್ವಲ್ಪ ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ, ಆರೋಗ್ಯದ ವಿಷ್ಯಕ್ಕೆ ಬಂದಾಗ, ದೇಹಕ್ಕೆ ಅಗತ್ಯವಾಗಿ ಬೇಕಾದ ಎಲ್ಲಾ ಪೌಷ್ಟಿಕಾಂಶಗಳು, ವಿಟಮಿನ್‌ಗಳು ಸಾಕಷ್ಟು ಪ್ರಮಾಣದಲ್ಲಿ ಈ ಹಣ್ಣಿನಲ್ಲಿ ಸಿಗುತ್ತಿರುವುದರಿಂದ, ಹಲವಾರು ರೀತಿಯ ರೋಗಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ವಿಶೇಷವಾಗಿ ಬೇರೆಲ್ಲಾ ಹಣ್ಣುಗಳಂತೆ ದಾಳಿಂಬೆ ಹಣ್ಣು ಕೂಡ ಹೆಚ್ಚಾಗಿ ವರ್ಷಪೂರ್ತಿ ಸಿಗುವ ಕಾರಣ, ನಾವೆಲ್ಲರು ಹೆಚ್ಚಾಗಿ ಈ ಹಣ್ಣನ್ನು ನಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುತ್ತೇವೆ. ಆದರೆ ದಾಳಿಂಬೆ ಹಣ್ಣಿನ ಸಿಪ್ಪೆಯ ಬಗ್ಗೆ ಮರೆತುಬಿಡುತ್ತೇವೆ! ಇಲ್ಲಿಯೇ ನೋಡಿ, ನಾವು ಮಾಡುತ್ತಿರುವುದು ದೊಡ್ಡ ತಪ್ಪು! ಹಾಗಾದರೆ ಇನ್ನು ಮುಂದೆ ಈ ಹಣ್ಣಿನ ಬೀಜಗಳನ್ನು ತಿಂದ ಬಳಿಕ ಇದರ ಸಿಪ್ಪೆಯನ್ನು ಬಿಸಾಡಲು ಹೋಗಬೇಡಿ, ಇದರಿಂದ ಕೂಡ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ...
ಮೊಡವೆಗಳ ಸಮಸ್ಯೆಗೆ
ದಾಳಿಂಬೆ ಹಣ್ಣಿನ ಸಿಪ್ಪೆಯಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿ ಕಂಡು ಬರುವುದರಿಂದ, ಚರ್ಮದ ಭಾಗದಲ್ಲಿ ಕಂಡು ಬರುವ ಮೊಡವೆ, ಕೆಂಪು ಗುಳ್ಳೆಗಳು, ದದ್ದುಗಳು, ತುರಿಕೆಯಂತಹ ಸಮಸ್ಯೆಗಳು ಕೂಡಲೇ ಕಮ್ಮಿ ಆಗುತ್ತದೆ
ನೀವು ಹೀಗೆ ಮಾಡಿದರೆ ಸಾಕು
ಮೊದಲಿಗೆ ದಾಳಿಂಬೆ ಹಣ್ಣಿನ ಬೀಜಗಳನ್ನು ಬೇರ್ಪಡಿಸಿದ ಬಳಿಕ, ಇದರ ಸಿಪ್ಪೆಯನ್ನು ಬಿಸಿಲಿನಲ್ಲಿ, ಒಂದೆರಡು ದಿನಗಳವರೆಗೆ ಸರಿಯಾಗಿ ಒಣಗಲು ಬಿಡಿ. ನಂತರ ಒಂದು ಬಿಸಿಯಾದ ತವಾದ ಮೇಲೆ ರೋಸ್ಟ್ ಮಾಡಿಕೊಳ್ಳಿ. ಆಮೇಲೆ ಇದನ್ನು ತಣ್ಣಗಾಗಲು ಬಿಡಿ
ಒಮ್ಮೆಈ ಸಿಪ್ಪೆ ತಣ್ಣಗಾದ ಬಳಿಕ ಮಿಕ್ಸರ್ ಜಾರ್‌ಗೆ ಈ ದಾಳಿಂಬೆ ಸಿಪ್ಪೆಯನ್ನು ಹಾಕಿ, ಚೆನ್ನಾಗಿ ರುಬ್ಬಿಕೊಳ್ಳಿ. ಇನ್ನು ಈ ಮಿಶ್ರಣಕ್ಕೆ ಒಂದು ಚಮಚ ಆಗುವಷ್ಟು ನಿಂಬೆ ರಸ ಮಿಶ್ರಣ ಮಾಡಿ ಚೆನ್ನಾಗಿ ಕಲಸಿ, ಪೇಸ್ಟ್ ಮಾಡಿಕೊಂಡು ನಿಮ್ಮ ಮೊಡವೆಗಳ ಮೇಲೆ ಇದನ್ನು ಹಚ್ಚಿ. ಸುಮಾರು ೧೦ ನಿಮಿಷ ಆಗುವಷ್ಟು ಹೊತ್ತು ಹಾಗೆಯೇ ಒಣಗಲು ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿ.
ವಯಸ್ಸಾಗುವಿಕೆಯನ್ನು ತಡೆಯುತ್ತದೆ
ಇತ್ತೀಚಿನ ದಿನಗಳಲ್ಲಿ ಕೆಲವರಿಗೆ ಸಣ್ಣ ವಯಸ್ಸಿಗೆಯೇ ಮುಖದ ಚರ್ಮದ ಮೇಲೆ ಸುಕ್ಕುಗಳು ಕಂಡು ಬರುವ ಕಾರಣ ವಯಸ್ಸಾದವರ ಹಾಗೆ ಕಾಣುತ್ತಾರೆ. ಆದರೆ ಈ ಸಮಸ್ಯೆಗೆ ದಾಳಿಂಬೆ ಸಿಪ್ಪೆಗಳು ಪರಿಹಾರ ಒದಗಿಸುತ್ತವೆ. ಸಣ್ಣ ವಯಸ್ಸಿನಲ್ಲಿ ವಯಸ್ಸಾದವರ ಹಾಗೆ ಕಾಣುವ ಪ್ರಕ್ರಿಯೆಯನ್ನು ಇದು ದೂರ ಮಾಡುತ್ತದೆ.
ಇದಕ್ಕಾಗಿ ನೀವು ಹೀಗೆ ಮಾಡಿ
ಹೃದಯ ಸಮಸ್ಯೆಗಳಿಂದ ದೂರ ಇರಬಹುದು
ಒಂದು ಟೀ ಚಮಚ ದಾಳಿಂಬೆ ಸಿಪ್ಪೆಯ ಪುಡಿಯನ್ನು ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ಹಾಕಿ, ಮಿಕ್ಸ್ ಮಾಡಿಕೊಂಡು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ವಾರಕ್ಕೆ ಎರಡು ಬಾರಿ ಈ ರೀತಿ ಮಾಡುವುದರಿಂದ, ಹೃದಯದ ಸಮಸ್ಯೆಗಳಿಂದ ದೂರವಿರಬಹುದು.
ಗಂಟಲು ನೋವಿಗೆ ರಾಮಬಾಣ
ಹಲ್ಲುಗಳ ಆರೋಗ್ಯಕ್ಕೆ
ಮೂಳೆಗಳ ಆರೋಗ್ಯಕ್ಕೂ ಒಳ್ಳೆಯದು
ಸುಮಾರು ಎರಡು ಟೇಬಲ್ ಚಮಚ ಆಗುವಷ್ಟು ದಾಳಿಂಬೆ ಸಿಪ್ಪೆಯ ಪೌಡರ್‌ನ್ನು ಒಂದು ಲೋಟ ಉಗುರುಬೆಚ್ಚಗಿನ ನೀರಿನಲ್ಲಿ ಹಾಕಿ, ಆಮೇಲೆ ಇದಕ್ಕೆ ಒಂದು ಟೀ ಚಮಚ ನಿಂಬೆ ರಸ ಹಾಗೂ ಚಿಟಿಕೆಯಷ್ಟು ಉಪ್ಪು ಬೆರೆಸಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ದೇಹದ ಮೂಳೆಗಳ ಆರೋಗ್ಯಕ್ಕೆ ಬಹಳ ಒಳ್ಳೆಯದು. ವಿಶೇಷವಾಗಿ ಮಹಿಳೆಯರಿಗೆ ಇದರಿಂದ ಸಾಕಷ್ಟು ಅನುಕೂಲವಿದೆ.
Dont Throw Pomegranate Peels, Its Having Lots Of Health Benefits.
12-08-25 10:39 pm
Bangalore Correspondent
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
KN Rajanna resigns: ಸಹಕಾರ ಸಚಿವ ಕೆ.ಎನ್ ರಾಜಣ್ಣ...
11-08-25 03:29 pm
13-08-25 11:56 am
HK News Desk
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
13-08-25 01:49 pm
Mangalore Correspondent
ಶವ ಹೂತ ಪ್ರಕರಣ ; ಕೊನೆಗೂ ಎಂಟ್ರಿಯಾದ ರಾಷ್ಟ್ರೀಯ ಮಾ...
13-08-25 10:37 am
ನಿಯಂತ್ರಣ ತಪ್ಪಿದ ಸ್ಕೂಟರ್ ಆವರಣ ಗೋಡೆಗೆ ಡಿಕ್ಕಿ ;...
13-08-25 10:17 am
ಧರ್ಮಸ್ಥಳ ಕೇಸ್ ; ಜಿಪಿಆರ್ ಬಳಸಿದರೂ ಸಿಗಲಿಲ್ಲ ಎಲುಬ...
12-08-25 11:06 pm
ಕೆಂಪು ಕಲ್ಲು ಗಣಿಗಾರಿಕೆಗೆ ಶೀಘ್ರದಲ್ಲೇ ಹೊಸ ನಿಯಮ ;...
12-08-25 08:34 pm
13-08-25 05:40 pm
Udupi Correspondent
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm