ಬ್ರೇಕಿಂಗ್ ನ್ಯೂಸ್
24-09-21 11:45 am Reena TK, Boldsky ಡಾಕ್ಟರ್ಸ್ ನೋಟ್
ಆಗಾಗ ನಮ್ಮ ದೇಹವನ್ನು ಡಿಟಾಕ್ಸ್ ಮಾಡಬೇಕು. ಆಗ ಮಾತ್ರ ನಮ್ಮ ದೇಹದಲ್ಲಿರುವ ಕಶ್ಮಲ ಹೊರ ಹೋಗುವುದು. ದೇಹವನ್ನು ಡಿಟಾಕ್ಸ್ ಮಾಡುವುದರಿಂದ ಅನೇಕ ಕಾಯಿಲೆ ತಡೆಗಟ್ಟಬಹುದು ಹಾಗೂ ಮೈ ಬೊಜ್ಜು ಹೆಚ್ಚುವುದನ್ನು ತಡೆಗಟ್ಟಬಹುದು. ಆಯುರ್ವೇದ ಪ್ರಕಾರ ದೇಹದಲ್ಲಿ ದೋಷ ಹಾಗೂ ಕಶ್ಮಲ ಹೆಚ್ಚಾದರೆ ಅನೇಕ ತೊಂದರೆಗಳು ಉಂಟಾಗುವುದು. ಆದ್ದರಿಂದ ದೇಹವನ್ನು ಡಿಟಾಕ್ಸ್ ಮಾಡಬೇಕು. ಡಿಟಾಕ್ಸ್ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುವುದು.
ದೇಹವನ್ನು ಡಿಟಾಕ್ಸ್ ಮಾಡುವುದು ಹೇಗೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ನಿಮ್ಮ ದೇಹವನ್ನುಒಳಗಿನಿಂದ ಕ್ಲೆನ್ಸ್ ಮಾಡುವುದು ಹೇಗೆ, ಅದಕ್ಕಾಗಿ ನಿಮ್ಮ ಡಯಟ್ ಪ್ಲ್ಯಾನ್ ಹೇಗಿರಬೇಕು ಎಂದು ನೋಡೋಣ ಬನ್ನಿ:
ಡಿಟಾಕ್ಸ್ ಆಹಾರ ಕ್ರಮ
* ಮೊದಲ 2 ದಿನ ಗಂಟೆಗೊಮ್ಮೆ 1 ಕಪ್ ಶುಂಠಿ ನೀರು ಕುಡಿಯಬೇಕು.
ಶುಂಠಿ ನೀರು ತಯಾರಿಸುವುದು ಹೇಗೆ?
3 ಲೀಟರ್ ನೀರಿಗೆ 1-2 ಚಮಚ ಒಣ ಶುಂಠಿ ಪುಡಿ ಹಾಕಿ ಕುದಿಸಿ ಆ ನೀರನ್ನು ಕುಡಿಯಬೇಕು.
3 ಹಾಗೂ 4ನೇ ದಿನ ಹೆಸರು ಬೇಳೆ ಹಾಗೂ ತರಕಾರಿ ಸೂಪ್ ಅನ್ನು 2-3 ಗಂಟೆಗೊಮ್ಮೆ ಸೇವಿಸಬೇಕು.
5 ಹಾಗೂ 6ನೇ ದಿನ ಹೆಸರು ಬೇಳೆ ಸೂಪ್ ಅನ್ನು 2-3 ಗಂಟೆಗೊಮ್ಮೆ ಒಂದು ಬೌಲ್‌ನಂತೆ ತೆಗೆದುಕೊಳ್ಳಬೇಕು.
7 ನೇ ದಿನ ಬರೀ ತರಕಾರಿ ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ. ಈ ದಿನ ಈ ಆಹಾರಗಳನ್ನು ಸೇವಿಸಬಹುದು.
* ಹೆಸರು ಕಾಳು ಬೇಯಿಸಿ ತಿನ್ನುವುದು
* ಅಥವಾ ಹೆಸರುಕಾಳಿನ ಕಿಚಡಿ
* ಸಿಹಿ ಕುಂಬಳಕಾಯಿ, ಸೊಪ್ಪು, ಪಾಲಾಕ್, ಬೀನ್ಸ್, ಹಾಗಾಲಕಾಯಿ, ಬ್ರೊಕೋಲಿ, ಬೀಟ್ರೂಟ್, ಸೆಲೆರಿ, ಸೋರೆಕಾಯಿ ಈ ಆಹಾರಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಬಹುದು.
ಇನ್ನು ಈ ಸ್ಮೂತಿ ಮಾಡಿ ಸೇವಿಸುವುದರಿಂದ ಕೂಡ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.
* ಸ್ಮೂತಿ ರೆಸಿಪಿ 1 1 ಲೋಟ ಪುದೀನಾ ಕೊತ್ತಂಬರಿ ಜ್ಯೂಸ್ ಸ್ವಲ್ಪ ಪುದೀನಾ, ಸ್ವಲ್ಪ ಕೊತ್ತಂಬರಿ ಸೊಪ್ಪು ತೆಗೆದು, ನೀರು ಹಾಕಿ ರುಬ್ಬಿ ಜ್ಯೂಸ್ ಮಾಡಿ ಅದಕ್ಕೆ ಉಪ್ಪು, ಪೆಪ್ಪರ್ ಪೌಡರ್ ಹಾಕಿ ಕುಡಿಯಬಹುದು. ಸ್ಮೂತಿ ರೆಸಿಪಿ 2
* ಒಂದು ಸಾಧಾರಣ ಗಾತ್ರದ ಸೇಬು+1/2 ಬೀಟ್‌ರೂಟ್ _ 1 ಕ್ಯಾರೆಟ್+ ಒಂದು ಚಿಕ್ಕ ತುಂಡು ಶುಂಠಿ
ಇವುಗಳನ್ನು ಹಾಕಿ ರುಬ್ಬಿ ಜ್ಯೂಸ್ ತಯಾರಿಸಿ ಕುಡಿಯಿರಿ.
ಡಿಟಾಕ್ಸ್ ಟೀ
* ಲೀಟರ್ ನೀರಿಗೆ ಈ ಕೆಳಗಿನ ಹರ್ಬ್ಸ್ (ಗಿಡ ಮೂಲಿಕೆ) ಹಾಕಿ ಕುದಿಸಿ ಅದನ್ನು ದಿನದಲ್ಲಿ ಕುಡಿಯುತ್ತಾ ಇದ್ದರೆ ದೇಹ ಡಿಟಾಕ್ಸ್ ಆಗುವುದು.
* ಜೀರಿಗೆ: ಅಜೀರ್ಣ, ಗ್ಯಾಸ್ಟ್ರಿಕ್ ಮುಂತಾದ ಸಮಸ್ಯೆ ನಿವಾರಣೆಗೆ ಇದು ಸಹಕಾರಿ.
* ಕೊತ್ತಂಬರಿ ಬೀಜ: ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಹಾಕಿ ಕುದಿಸಿ ಕುಡಿದರೆ ಜೀರ್ಣಕ್ರಿಯೆಗೆ ಸಹಕಾರಿ ದೇಹದ ಉಷ್ಣತೆ ಕಡಿಮೆ ಮಾಡುವುದು.
* ಸೋಂಪು: ಸೋಂಪನ್ನು ಕೂಡ ನೀರಿನಲ್ಲಿ ಹಾಕಿ ಕುದಿಸಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ದೂರವಗುವುದು, ಅಲ್ಲದೆ ದೇಹದಲ್ಲಿರುವ ಕೊಬ್ಬು ಕರಗಿಸಲು ಸಹಕಾರಿ.
ಹರ್ಬಲ್ ಟೀ ಪ್ರಯೋಜನಗಳು
ಈ ಹರ್ಬಲ್ ಟೀ ಕುಡಿಯುವುದರಿಂದ ದೇಹದಲ್ಲಿ ಜೀರ್ಣಕ್ರಿಯೆ ಚೆನ್ನಾಗಿ ನಡೆಯುವುದು ಹಾಗೂ ದೇಹವು ಆಹಾರದಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುವುದು, ಜೊತೆಗೆ ದೇಹದಲ್ಲಿರುವ ಕಶ್ಮಲವನ್ನು ಮಲ, ಮೂತ್ರದ ಮೂಲಕ ಹೊರ ಹಾಕುವುದು.
ಇನ್ನು ಈ ರೀತಿ ಮಾಡುವುದರಿಂದಲೂ ನಿಮ್ಮ ದೇಹದ ಆರೋಗ್ಯ ಹೆಚ್ಚಿಸಬಹುದು.
* 1/2 ಚಮಚ ಕಾಳು ಮೆಣಸಿನ ಪುಡಿ+ 1 ಚಮಚ ಶುದ್ಧ ಹಸುವಿನ ತುಪ್ಪವನ್ನು ಮಿಶ್ರ ಮಾಡಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ.
* 1 ಚಮಚ ಅಜ್ವೈನ್ ಪುಡಿ _ 1 ಚಮಚ ಬೆಲ್ಲದ ಪುಡಿ + 1 ಚಮಚ ಶುದ್ಧ ಹಸುವಿನ ತುಪ್ಪ ಇವುಗಳನ್ನು ಮಿಶ್ರ ಮಾಡಿ ರಾತ್ರಿ ಮಲಗುವ ಮುಂಚೆ ತೆಗೆದುಕೊಳ್ಳಿ. ಈ ರೀತಿ ಪ್ರತಿದಿನ ಮಾಡುವುದರಿಂದ ಆರೋಗ್ಯ ಉತ್ತಮವಾಗುವುದು.
03-05-25 09:38 pm
HK News Desk
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 10:57 pm
Mangalore Correspondent
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
U T Khader, Satish Kumapla, Mangalore, Suhas,...
03-05-25 10:13 pm
Mangalore, Stabbing, Suhas Shetty Murder, Arr...
03-05-25 08:39 pm
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm