ಬ್ರೇಕಿಂಗ್ ನ್ಯೂಸ್
09-09-21 11:42 am Reena TK, Boldsky ಡಾಕ್ಟರ್ಸ್ ನೋಟ್
ಮೋದಕ ಇಲ್ಲದಿದ್ದರೆ ಗಣೇಶ ಹಬ್ಬ ಸಂಪೂರ್ಣವಾಗುವುದೇ ಇಲ್ಲ. ಗಣೇಶನಿಗೆ ಮೋದಕ ಎಂದರೆ ತುಂಬಾ ಪ್ರಿಯವಾದದ್ದು. ಆದ್ದರಿಂದ 21 ಮೋದಕ ಮಾಡಿ ಗಣೇಶನಿಗೆ ಅರ್ಪಿಸಲಾಗುವುದು.
ಗಣೇಶನಿಗೆ ಪ್ರಿಯವಾಗಿರುವ ಮೋದಕ ಎಲ್ಲರ ಮೆಚ್ಚಿನ ಸಿಹಿ ತಿಂಡಿಯಾಗಿದೆ. ಮೋದಕ ಇಷ್ಟವಿಲ್ಲ ಎಂದು ಹೇಳುವವರು ಬಲು ಅಪರೂಪ ಅಷ್ಟೊಂದು ರುಚಿಯಾಗಿರುತ್ತೆ. ಕಾಯಿ ಬೆಲ್ಲ ಹಾಕಿ ಮಾಡುವ ಮೋದಕ ಎಷ್ಟು ತಿಂದರೂ ಸಾಕಾಗುವುದಿಲ್ಲ, ಅಷ್ಟೊಂದು ರುಚಿಯಾಗಿರುತ್ತೆ. ಈ ಮೋದಕ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು.
ನಮ್ಮ ಎಲ್ಲಾ ಹಬ್ಬಗಳಲ್ಲಿ ಮಾಡುವ ಸಾಂಪ್ರದಾಯಿಕ ಅಡುಗೆಗಳಲ್ಲಿ ಆರೋಗ್ಯಕರ ಗುಣವೂ ಇರುತ್ತದೆ. ಸಂಕ್ರಾಂತಿಯ ಎಳ್ಳು-ಬೆಲ್ಲ ಆರೋಗ್ಯಕರ ಗುಣವನ್ನು ಹೊಂದಿದೆ. ಗಣೇಶನ ಹಬ್ಬದಲ್ಲಿ ಮಾಡುವ ಮೋದಕದಲ್ಲಿಯೂ ತುಂಬಾನೇ ಆರೋಗ್ಯಕರ ಗುಣಗಳಿವೆ.
ಭಾರತದ ಪ್ರಸಿದ್ಧ ನ್ಯೂಟ್ರಿಷಿಯನಿಸ್ಟ್ ಆಗಿರುವ ರುಜುತಾ ದ್ವಿವೇದಿ ಮೋದಕದಲ್ಲಿ ಯಾವೆಲ್ಲಾ ಆರೋಗ್ಯಕರ ಗುಣಗಳಿವೆ ಎಂದು ಹೇಳಿದ್ದಾರೆ ನೋಡಿ:
ಮೋದಕದ ಆರೊಗ್ಯಕರ ಗುಣಗಳು
ಮಲಬದ್ಧತೆ ಮತ್ತು ಕೊಲೆಸ್ಟ್ರಾಲ್ ಸಮಸ್ಯೆ ತಡೆಗಟ್ಟುತ್ತೆ
ಮಲಬದ್ಧತೆ:
ಮೋದಕವನ್ನು ತುಪ್ಪ ಬಳಸಿ ಮಾಡುವುದರಿಂದ ಇದು ಕರುಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕಲು ಸಹಕಾರಿ. ರಕ್ತದೊತ್ತಡ ನಿಯಂತ್ರಿಸುತ್ತದೆ: ಮೋದಕ ಒಳಗೆ ತುಂಬುವ ಬೆಲ್ಲ ಹಾಗೂ ತೆಂಗಿನ ಕಾಯಿ ಮಿಶ್ರಣ ರಕ್ತದೊತ್ತಡ ನಿಯಂತ್ರಣದಲ್ಲಿಡುವಲ್ಲಿ ಸಹಕಾರಿಯಾಗಿದೆ. ಕೊಲೆಸ್ಟ್ರಾಲ್: ಮೋದಕವನ್ನು ತಯಾರಿಸುವಾಗ ತುಪ್ಪ, ಡ್ರೈ ಫ್ರೂಟ್ಸ್, ಕೊಬ್ಬರಿ ಇವೆಲ್ಲಾ ಬಳಸಲಾಗುವುದು. ಇವೆಲ್ಲಾ ದೇಹದಲ್ಲಿರುವ ಬೇಡದ ಕೊಬ್ಬನ್ನು ಕಡಿಮೆ ಮಾಡಿ ಒಳ್ಳೆಯ ಕೊಬ್ಬನ್ನು ಹೆಚ್ಚಿಸುತ್ತದೆ.
ಮಧುಮೇಹ
ಮೋದಕದಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ ಮಧುಮೇಹಿಗಳು ಕೂಡ ಇದನ್ನು ಸವಿಯಬಹುದು. ಮೋದಕ ಸಿಹಿಯಾದರೂ ಇದನ್ನು ತಿಂದರೆ ರಕ್ತದಲ್ಲಿ ಸಕ್ಕರೆಯಂಶ ತಕ್ಷಣ ಹೆಚ್ಚಾಗುವುದಿಲ್ಲ. ಆದ್ದರಿಂದ ಮಧುಮೇಹಿಗಳು ಭಯಪಡದೆ ಮೋದಕದ ರುಚಿ ಸವಿಯಬಹುದು. ಸಂಧಿವಾತ ಸಮಸ್ಯೆ ಕಡಿಮೆಯಾಗಲೂ ಸಹಕಾರಿ ತುಪ್ಪದಲ್ಲಿರುವ ಬಟ್ರೈಕ್ ಆಮ್ಲ ನರಗಳಲ್ಲಿರುವ ಉರಿಯೂತ ಕಡಿಮೆ ಮಾಡಲು ಸಹಕಾರಿ, ಅದರಲ್ಲೂ ಸಂಧಿವಾತದ ನೋವು ಕಡಿಮೆ ಮಾಡುವುದು.
ಪಿಸಿಓಡಿ ಹಾಗೂ ಥೈರಾಯ್ಡ್ ಹಾರ್ಮೋನ್‌ಗಳ ಸಮತೋಲನಕ್ಕೆ ಸಹಕಾರಿ
ಪಿಸಿಓಡಿ: ಪಿಸಿಓಡಿ ಹಾರ್ಮೋನಲ್‌ಗಳ ಅಸಮತೋಲನಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದೆ. ಇದನ್ನು ಅಕ್ಕಿ ಹಿಟ್ಟು ಬಳಸಿ ಮಾಡಿದರೂ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿರುತ್ತದೆ. ಜೊತೆಗೆ ಹಿಟ್ಟಿನಲ್ಲಿರುವ ಬಿ1 ಅಂಶವೂ PMS (premenstrual syndrome) ಹಾಗೂ ಸಿಹಿ ತಿನ್ನುವ ಬಯಕೆಯನ್ನು ಕಡಿಮೆ ಮಾಡುತ್ತದೆ. ಥೈರಾಯ್ಡ್ ಗ್ರಂಥಿಗೂ ಒಳ್ಳೆಯದು ಇದು ಯೌವನದ ಕಳೆ ಮಾಸದಂತೆ ತಡೆಗಟ್ಟುವುದು ಹಾಗೂ ಥೈರಾಯ್ಡ್ ಗ್ರಂಥಿ ಸರಿಯಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಿದೆ.
ತೂಕ ಇಳಿಕೆ
ಮತ್ತೊಂದು ಖುಷಿಯ ವಿಷಯ ಎಂದರೆ ಮೋದಕ ತೂಕ ಇಳಿಕೆಗೆ ತುಂಬಾನೇ ಸಹಕಾರಿ. ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆಯಿದ್ದು, ಆರೋಗ್ಯಕರ ಕೊಬ್ಬಿನಂಶವಿದ್ದು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅತ್ಯುತ್ತಮವಾದ ಆಹಾರವಾಗಿದೆ.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
16-08-25 03:34 pm
HK News Desk
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
16-08-25 04:45 pm
Mangalore Correspondent
Expert PU College Announces ‘Xcelerate 2025’...
15-08-25 09:04 pm
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
16-08-25 11:25 am
HK News Desk
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am