ಬ್ರೇಕಿಂಗ್ ನ್ಯೂಸ್
14-08-21 02:54 pm Shreeraksha, Boldsky ಡಾಕ್ಟರ್ಸ್ ನೋಟ್
ಕಡಿಮೆ ಕ್ಯಾಲೋರಿ ಮತ್ತು ಫೈಬರ್ ತುಂಬಿರುವ ಆರೋಗ್ಯಕರವಾದ ಹಣ್ಣಿನಲ್ಲಿ ಪೇರಳೆ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಪೇರಳೆ ಹಣ್ಣು ಮಾತ್ರವಲ್ಲ, ಅದರ ಎಲೆಯೂ ಸಹ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆಹಾರದಲ್ಲಿ ಪೇರಳೆ ಎಲೆಯ ರಸವನ್ನು ಸೇರಿಸುವುದರಿಂದ ನಿಮ್ಮ ಹೃದಯದ ಆರೋಗ್ಯ, ಜೀರ್ಣಕ್ರಿಯೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆ ಸುಧಾರಣೆಯಾಗುವುದು. ಆದರೆ ಈ ಹಣ್ಣಿನಲ್ಲಿರುವ ಇರುವ ಕೆಲವು ಸಂಯುಕ್ತಗಳಿದ, ಪೇರಳೆಯು ಎಲ್ಲರಿಗೂ ಉತ್ತಮವಲ್ಲ. ಹಾಗಾದರೆ, ಪೇರಳೆ ಹಣ್ಣನ್ನು ಯಾರು ತಿನ್ನಬಾರದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಪೇರಳೆಯಲ್ಲಿರುವ ಪೋಷಕಾಂಶಗಳು:
ಪೇರಳೆಯಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. 1 ಹಣ್ಣಿನಲ್ಲಿ ಕೇವಲ 112 ಕ್ಯಾಲೋರಿಗಳು ಮತ್ತು 23 ಗ್ರಾಂ ನಷ್ಟು ಕಾರ್ಬೋಹೈಡ್ರೇಟ್ ಇರುತ್ತದೆ. ನಾರಿನ ಅಂಶವು ಸುಮಾರು 9 ಗ್ರಾಂಗಳಾಗಿದ್ದು, ಪೇರಳೆಯಲ್ಲಿ ಯಾವುದೇ ಪಿಷ್ಟವಿಲ್ಲ. ಅಧ್ಯಯನಗಲ ಪ್ರಕಾರ, ಈ ಹಣ್ಣು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವುದರಿಂದ ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಪ್ರಯೋಜನಕಾರಿ.. ಇದರ ಜೊತೆಯಲ್ಲಿ, ಫೋಲೇಟ್ ಮತ್ತು ಬೀಟಾ ಕ್ಯಾರೋಟಿನ್ ಈ ಹಣ್ಣಿನಲ್ಲಿ ಹೇರಳವಾಗಿ ಕಂಡುಬರುವ ಇತರ ಕೆಲವು ಪೋಷಕಾಂಶಗಳಾಗಿವೆ.

ಉಬ್ಬುವಿಕೆಯಿಂದ ಬಳಲುತ್ತಿರುವವರು:
ಪೇರಳೆಯಲ್ಲಿ ವಿಟಮಿನ್ ಸಿ ಮತ್ತು ಫ್ರಕ್ಟೋಸ್ ಸಮೃದ್ಧವಾಗಿದ್ದು, ಇವುಗಳಲ್ಲಿ ಯಾವುದೇ ಒಂದರ ಹೆಚ್ಚಿನ ಪ್ರಮಾಣವು ನಿಮಗೆ ಉಬ್ಬಿದ ಅನುಭವವನ್ನು ಉಂಟುಮಾಡಬಹುದು. ಇದು ನೀರಿನಲ್ಲಿ ಕರಗುವ ವಿಟಮಿನ್ ಆಗಿರುವುದರಿಂದ ನಮ್ಮ ದೇಹವು ಹೆಚ್ಚು ವಿಟಮಿನ್ ಸಿ ಯನ್ನು ಹೀರಿಕೊಳ್ಳಲು ಕಷ್ಟವಾಗುತ್ತದೆ, ಆದ್ದರಿಂದ ಉಬ್ಬುವಿಕೆ ಉಂಟಾಗುತ್ತದೆ. ಅಷ್ಟೇ ಅಲ್ಲ, ಸುಮಾರು 40 ಪ್ರತಿಶತ ಜನರು ಫ್ರಕ್ಟೋಸ್ ಮಾಲಾಬ್ಸರ್ಪ್ಶನ್ ಎಂಬ ಸ್ಥಿತಿಯಿಂದ ಬಳಲುತ್ತಿದ್ದಾರೆ. ಇದರಲ್ಲಿ, ನೈಸರ್ಗಿಕ ಸಕ್ಕರೆಯು ದೇಹದಿಂದ ಹೀರಲ್ಪಡುವುದಿಲ್ಲ, ಬದಲಾಗಿ ಅದು ನಮ್ಮ ಹೊಟ್ಟೆಯಲ್ಲಿ ಕುಳಿತು ಉಬ್ಬುವುದಕ್ಕೆ ಕಾರಣವಾಗುತ್ತದೆ. ಪೇರಳೆ ತಿಂದು ತಕ್ಷಣ ನಿದ್ರಿಸುವುದು ಕೂಡ ಹೊಟ್ಟೆ ಉಬ್ಬುವಿಕೆಗೆ ಕಾರಣವಾಗಬಹುದು.

ಕರುಳಿನ ಸಿಂಡ್ರೋಮ್ನಿಂದ ಬಳಲುತ್ತಿರುವವರು:
ಪೇರಳೆಯಲ್ಲಿ ಫೈಬರ್ ಸಮೃದ್ಧವಾಗಿದ್ದು, ಇದು ಮಲಬದ್ಧತೆಯನ್ನು ನಿವಾರಿಸಲು ಮತ್ತು ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಆದರೆ ಅತಿಯಾದ ಸೇವನೆಯು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಗೊಂದಲಕ್ಕೀಡು ಮಾಡುತ್ತದೆ, ವಿಶೇಷವಾಗಿ ನೀವು ಕಿರಿಕಿರಿಯುಂಟುಮಾಡುವ ಕರುಳಿನ ಸಿಂಡ್ರೋಮ್ನಿಂದ ಬಳಲುತ್ತಿದ್ದರೆ. ಆದ್ದರಿಂದ, ಸೀಮಿತ ರೀತಿಯಲ್ಲಿ ತಿನ್ನಲು ಮುಖ್ಯವಾಗಿದೆ.

ಮಧುಮೇಹದಿಂದ ಬಳಲುತ್ತಿರುವವರು:
ಕಡಿಮೆ ಗ್ಲೈಸೆಮಿಕ್ ಸೂಚ್ಯಂಕದಿಂದಾಗಿ ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಪೇರಳೆ ಪ್ರಮುಖ ಹಣ್ಣುಗಳಲ್ಲಿ ಒಂದಾಗಿದೆ. ಆದರೆ, ನೀವು ಈ ಹಣ್ಣು ಸೇವಿಸಿದ ನಂತರ ನಿಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣವಾಗಿ ನಿಯಮಿತವಾಗಿ ಪತ್ತೆ ಹಚ್ಚಿ. 100 ಗ್ರಾಂ ಕತ್ತರಿಸಿದ ಪೇರಳೆಯು 9 ಗ್ರಾಂ ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತದೆ. ಆದ್ದರಿಂದ, ಅತಿಯಾಗಿ ತಿನ್ನುವುದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು. ಮಿತವಾಗಿ ತಿನ್ನುವುದು ಅತ್ಯುತ್ತಮ ಆಯ್ಕೆಯಾಗಿದೆ.

ಪೇರಳೆ ತಿನ್ನಲು ಸುರಕ್ಷಿತ ಮಿತಿ ಮತ್ತು ಸರಿಯಾದ ಸಮಯ:
ದಿನಕ್ಕೆ ಒಂದು ಬಾರಿ ಪೇರಳೆ ಸೇವನೆ ಸುರಕ್ಷಿತವಾಗಿದೆ. ಅದಕ್ಕಿಂತ ಹೆಚ್ಚು ಸೇವಿಸುವುದು ಒಳ್ಳೆಯದಲ್ಲ. ನೀವು ವ್ಯಾಯಾಮ ಆದ ನಂತರ ಅಥವಾ ಊಟವಾದ ಒಮದೆರಡು ಗಂಟೆಗಳ ಬಳಿಕ ಸೇವಿಸುವುದು ಉತ್ತಮ ದಾರಿ. ರಾತ್ರಿ ಈ ಹಣ್ಣುಗಳನ್ನು ಸೇವಿಸಬೇಡಿ ಏಕೆಂದರೆ ಅದು ಶೀತ ಮತ್ತು ಕೆಮ್ಮಿಗೆ ಕಾರಣವಾಗಬಹುದು. ಪೇರಳೆ ಎಲೆಗಳ ಸಾರಗಳ ಬಳಕೆ ಮತ್ತು ಪ್ರಯೋಜನಗಳ ಮೇಲೆ ಸೀಮಿತ ಪುರಾವೆಗಳು ಲಭ್ಯವಿದೆ. ಆದರೆ ಯಾವುದೇ ತೀರ್ಮಾನಕ್ಕೆ ಬರಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಇದನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.
(Kannada Copy of Boldsky Kannada)
30-08-26 10:09 pm
HK News Desk
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
ಬಿಜೆಪಿ ಸಂಸದೀಯ ಮಂಡಳಿ ಸಭೆಯಿಂದ ಯಡಿಯೂರಪ್ಪ ಹೊರಕ್ಕೆ...
29-08-26 10:49 pm
‘ದಬ್ಬಾಳಿಕೆ ಮಾಡಲಿ, ರಿಪೇರಿ ಮಾಡೋದು ನಂಗೆ ಗೊತ್ತಿದೆ...
29-08-26 10:47 pm
30-08-26 02:41 pm
HK News Staffer
ನೇಪಾಳದಲ್ಲಿ ಪ್ರಕೃತಿಯ ರೌದ್ರಾವತಾರ ; ಪ್ರವಾಹಕ್ಕೆ 6...
29-08-26 10:25 pm
ನೇಪಾಳ ಪ್ರವಾಹದ ಬಳಿಕ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್...
29-08-26 03:36 pm
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
31-08-26 12:01 pm
HK News Staffer
ವೈಟ್ ಫೀಲ್ಡ್ ಬೇಡ, ಡಾರ್ಕ್ ಫೀಲ್ಡ್ ಮಾಡ್ರೀ..! ಎತ್ತ...
31-08-26 09:51 am
ಸರ್ಕಾರಿ ನಿವೇಶನ ಸಿಗದ ನೋವು, ವಿವಾದದ ಕಾವು ; ಇಬ್ಬರ...
29-08-26 01:02 pm
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm