ಬ್ರೇಕಿಂಗ್ ನ್ಯೂಸ್
14-08-21 11:22 am Reena TK, Boldsky ಡಾಕ್ಟರ್ಸ್ ನೋಟ್
ಕೊರೊನಾ ವೈರಸ್ 3ನೇ ಆತಂಕ ಎದುರಾಗಿದೆ, ಇದೀಗ ಕರ್ನಾಟಕದಲ್ಲಿ ಕೊರೊನಾವೈರಸ್ನ ಮತ್ತೊಂದು ರೂಪಾಂತರ ಈಟ ವೈರಸ್ ಪತ್ತೆಯಾಗಿದೆ. ನಾಲ್ಕು ತಿಂಗಳ ಹಿಂದೆ ದುಬೈನಿಂದ ಮಂಗಳೂರಿಗೆ ಬಂದಿರುವ ವ್ಯಕ್ತಿಯಲ್ಲಿ ಪತ್ತೆಯಾಗಿದೆ. ಅವರಿಗೆ ಈಟ ವೈರಸ್ ತಗುಲಿರುವುದು ಆಗಸ್ಟ್ 5ಕ್ಕೆ ಖಚಿತವಾಗಿದೆ.
ಈಟ ವೈರಸ್ ಇತರ ರೂಪಾಂತರಗಳಿಗಿಂತಲೂ ಪರಿಣಾಮಕಾರಿಯೇ, ಲಸಿಕೆ ಇದರ ವಿರುದ್ಧ ಪರಿಣಾಮ ಬೀರುವುದೇ? ಈ ರೂಪಾಂತರ ಬೇಗನೆ ಹರಡುವುದೇ ಎಂಬೆಲ್ಲಾ ಮಾಹಿತಿ ತಿಳಿಯೋಣ:

ಭಾರತದಲ್ಲಿ ಈಟ ವೈರಸ್ ಪತ್ತೆಯಾಗಿರುವುದು ಇದೇ ಮೊದಲಲ್ಲ
ಗಮನಿಸಬೇಕಾದ ಒಂದು ವಿಷಯ ಏನೆಂದರೆ ಕೊರೊನಾ ರೂಪಾಂತರ ಈಟ ವೈರಸ್ ಪತ್ತೆಯಾಗಿರುವುದು ಇದೇ ಮೊದಲಲ್ಲ, 2020 ಏಪ್ರಿಲ್ನಲ್ಲೂ ಈ ವೈರಸ್ ಕಂಡು ಬಂದಿತ್ತು. ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯ ವೈರಾಲಾಜಿ ಲ್ಯಾಬ್ ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ನೀಡಿತ್ತು. ಜುಲೈ, 2021ರಲ್ಲಿ ಭಾರತದಲ್ಲಿ ಮತ್ತೊಂದು ಈಟ ವೈರಸ್ ಕೇಸ್ ಪತ್ತೆಯಾಯ್ತು. ಮಿಜೋರಾಂನ 75 ಜನರ ಸ್ಯಾಂಪಲ್ ತೆಗೆದು ಪರೀಕ್ಷಿಸಿದಾಗ ಅಲ್ಲಿಯೂ ಈ ವೈರಸ್ ಪತ್ತೆಯಾಗಿತ್ತು.

ಮೊದಲಿಗೆ ಈ ವೈರಸ್ ಎಲ್ಲಿ ಪತ್ತೆಯಾಯ್ತು?
ಈಟ ರೂಪಾಂತರ ಅಥವಾ B.1.525 ರೂಪಾಂತರ ವೈರಸ್ ಡಿಸೆಂಬರ್ 2020ರಲ್ಲಿ ಯುಕೆ ಮತ್ತು ನೈಜೀರಿಯಾದಲ್ಲಿ ಕಂಡು ಬಂತು

ಈಟ ರೂಪಾಂತರ ಅಪಾಯಕಾರಿಯೇ?
ಈಟ ರೂಪಾಂತರ ಇತರ ರೂಪಾಂತರಗಳಂತೆಯೇ ಪರಿಣಾಮ ಬೀರುವುದು. ಈಟ ರೂಪಾತರ ಇತರ ರೂಪಾಂತರಗಳಾದ ಆಲ್ಫಾ, ಬೇಟಾ, ಗಾಮಾದಂತೆ N501Y ರೂಪಾಂತರ ಹರಡುವುದಿಲ್ಲ. ಅಲ್ಲದೆ ಇತರ ವೈರಸ್ಗಳಿಗಿಂತ ಬೇಗನೆ ಹರಡುವುದೋ ಇಲ್ಲ. ಈ ರೂಪಾಂತರ ವೈರಸ್ನ ಲಕ್ಷಣಗಳು ಇತರ ಕೊರೊನಾ ವೈರಸ್ನಂತೆಯೇ ಇರುವುದು. ಈಟ ವೈರಸ್ ಇತರ ವೈರಸ್ಗಳಂತೆಯೇ ಸ್ವಭಾವ ಲಕ್ಷಣಗಳನ್ನು ಹೊಂದಿದೆ, ಇತರ ರೂಪಾಂತರ ವೈರಸ್ ತಗುಲಿದಾಗ ಉಂಟಾಗುವ ಆರೋಗ್ಯ ಸಮಸ್ಯೆಗಳು ಈಟ ವೈರಸ್ ತಗುಲಿದಾಗಲೂ ಉಂಟಾಗುವುದು.

ರೂಪಾಂತರಗಳ ವಿರುದ್ಧ ಲಸಿಕೆ ಪರಿಣಾಮಕಾರಿಯೇ?
ಲಸಿಕೆ ಆಲ್ಫಾ, ಬೇಟಾ, ಗಾಮ, ಡೆಲ್ಟಾ, ಈಟ ರೂಪಾಂತರ ವಿರುದ್ಧ ಪರಿಣಾಮಕಾರಿಯಾಗಿದೆ. ಎರಡು ಡೋಸ್ ಲಸಿಕೆ ಪಡೆದವರು ಈ ರೂಪಾಂತರ ವೈರಸ್ ವಿರುದ್ಧ ಹೆಚ್ಚಿನ ರೋಗ ನಿರೋಧಕ ಶಕ್ತಿ ಹೊಂದಿರುತ್ತಾರೆ.
(Kannada Copy of Boldsky Kannada)
30-08-26 10:09 pm
HK News Desk
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
ಬಿಜೆಪಿ ಸಂಸದೀಯ ಮಂಡಳಿ ಸಭೆಯಿಂದ ಯಡಿಯೂರಪ್ಪ ಹೊರಕ್ಕೆ...
29-08-26 10:49 pm
‘ದಬ್ಬಾಳಿಕೆ ಮಾಡಲಿ, ರಿಪೇರಿ ಮಾಡೋದು ನಂಗೆ ಗೊತ್ತಿದೆ...
29-08-26 10:47 pm
30-08-26 02:41 pm
HK News Staffer
ನೇಪಾಳದಲ್ಲಿ ಪ್ರಕೃತಿಯ ರೌದ್ರಾವತಾರ ; ಪ್ರವಾಹಕ್ಕೆ 6...
29-08-26 10:25 pm
ನೇಪಾಳ ಪ್ರವಾಹದ ಬಳಿಕ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್...
29-08-26 03:36 pm
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
31-08-26 12:01 pm
HK News Staffer
ವೈಟ್ ಫೀಲ್ಡ್ ಬೇಡ, ಡಾರ್ಕ್ ಫೀಲ್ಡ್ ಮಾಡ್ರೀ..! ಎತ್ತ...
31-08-26 09:51 am
ಸರ್ಕಾರಿ ನಿವೇಶನ ಸಿಗದ ನೋವು, ವಿವಾದದ ಕಾವು ; ಇಬ್ಬರ...
29-08-26 01:02 pm
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm