ಬ್ರೇಕಿಂಗ್ ನ್ಯೂಸ್
07-07-21 03:16 pm Shreeraksha, BoldSky Kannada ಡಾಕ್ಟರ್ಸ್ ನೋಟ್
ಲೇಡಿ ಫಿಂಗರ್ ಎಂದೇ ಕರೆಯಲ್ಪಡುವ ಬೆಂಡೆಕಾಯಿ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಇದೇ ಬೆಂಡೆಕಾಯಿ ಲೇಡಿಸ್ ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುವುದು ಎಂದು ನಿಮಗೆ ತಿಳಿದಿದೆಯೇ? ಹೌದು, ಆರೋಗ್ಯಕಾರಿ ಬೆಂಡೆಕಾಯಿ, ಮಹಿಳೆಯರ ತ್ವಚೆಯ ಸಮಸ್ಯೆಗಳಾದ ಮೊಡವೆ, ಸುಕ್ಕು ಮೊದಲಾದವುಗಳನ್ನು ಕಡಿಮೆ ಮಾಡುವುದು. ಅದನ್ನು ಹೇಗೆ ಬಳಸಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ವಿಟಮಿನ್ ಭರಿತವಾಗಿದೆ ಈ ತರಕಾರಿ:
ಬೆಂಡೆಕಾಯಿ ಅಥವಾ ಲೇಡಿ ಫಿಂಗರ್ ವಿಟಮಿನ್ ಸಿ ಮತ್ತು ಮೆಗ್ನೀಸಿಯಮ್ ನ ಉತ್ತಮ ಮೂಲವಾಗಿದೆ. ಇದರ ಒಂದು ಗ್ಲಾಸ್ ಜ್ಯೂಸ್ 6 ಗ್ರಾಂ ಕಾರ್ಬೋಹೈಡ್ರೇಟ್, 80 ಮೈಕ್ರೋಗ್ರಾಂ ಫೋಲೇಟ್, 3 ಗ್ರಾಂ ಫೈಬರ್ ಮತ್ತು 2 ಗ್ರಾಂ ಪ್ರೋಟೀನ್ ನ್ನು ಹೊಂದಿರುವುದು. ಆದ್ದರಿಂದ ಇದು ಕೂಡ ಆರೋಗ್ಯಕ್ಕೆ ಒಳ್ಳೆಯದೇ. ಇಂತಹ ಪೋಷಕಾಂಶಯುಕ್ತ ಬೆಂಡೆಕಾಯಿಯನ್ನು ತ್ವಚೆಗೆ ಹೇಗೆ ಸಹಕಾರಿ ಎಂಬುದನ್ನು ನೋಡೋಣ.

ಸುಕ್ಕುಗಳನ್ನು ಕಡಿಮೆ ಮಾಡಲು ಹೀಗೆ ಬಳಸಿ:
ವಯಸ್ಸಾದಂತೆ ಚರ್ಮ ಸುಕ್ಕುಗಟ್ಟುವುದು ಸಾಮಾನ್ಯ. ಆದರೆ ಹಲವಾರು ಕಾರಣಗಳಿಂದ ಕೆಲವೊಮ್ಮೆ ಬೇಗನೇ ಮುಖ ಸುಕ್ಕುಗಟ್ಟುವುದು. ಹೀಗೆ ವಯಸ್ಸಿಗೆ ಮುನ್ನವೇ ಸುಕ್ಕಾಗುವುದನ್ನು ತಡೆಗಟ್ಟಲು ಬೆಂಡೆಕಾಯಿ ಬಳಸಬಹುದು. ಇದು ನಿಮ್ಮ ತ್ವಚೆ ಸುಕ್ಕಾಗುವದನ್ನು ವಿಳಂಬಗೊಳಿಸುವುದು. ಅದಕ್ಕಾಗಿ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ. ಎರಡು ಮಧ್ಯಮ ಗಾತ್ರದ ಬೆಂಡೆಕಾಯಿಗಳನ್ನು ತೆಗೆದುಕೊಂಡು ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಪೇಸ್ಟ್ ತಯಾರಿಸಿ. ನಂತರ ನೀರು ಸೇರಿಸದೆ ಮುಖಕ್ಕೆ ಹಚ್ಚಿ. ನಿಮ್ಮ ಮುಖ ಮತ್ತು ಕುತ್ತಿಗೆಯ ಮೇಲೂ ಇದನ್ನು ಹಚ್ಚಬಹುದು. ಸ್ವಲ್ಪ ಸಮಯದ ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ.

ಮೊಡವೆಗಳನ್ನು ನಿವಾರಿಸಲು:
ಮೊಡವೆಗಳು ಎಲ್ಲರನ್ನು ಕಾಡುವ ಸಾಮಾನ್ಯ ಸಮಸ್ಯೆ. ಇದು ಗಂಡು-ಹೆಣ್ಣು ಎಂಬ ಭೇದವಿಲ್ಲ. ಎಲ್ಲರನ್ನು ಕಾಡುವ ಈ ಚರ್ಮ ಸಮಸ್ಯೆಗೆ ಬೆಂಡೆಕಾಯಿ ಬಳಸಬಹುದು. ಅದಕ್ಕಾಗಿ ಈ ಕೆಳಗಿನ ವಿಧಾನ ಬಳಸಿ. 2 ರಿಂದ 3 ತಾಜಾ ಬೆಂಡೆಕಾಯಿ ತೆಗೆದುಕೊಂಡು, ಸ್ವಚ್ಛಗೊಳಿಸಿ. ನಂತರ ಅದನ್ನು ಕುದಿಸಿ, ತಣ್ಣಗಾಗಲು ಬಿಡಿ. ನಂತೆ ಪೇಸ್ಟ್ ತಯಾರಿಸಿ. ಈಗ ಪೇಸ್ಟ್ ಗೆ 2 ರಿಂದ 3 ಹನಿ ನಿಂಬೆ ರಸ ಸೇರಿಸಿ ಮಿಶ್ರಣ ಮಾಡಿ. ನಿಮ್ಮ ಸ್ವಚ್ಛ ಮುಖದ ಮೇಲೆ ಹಚ್ಚಿ. ಅದು ಒಣಗುವವರೆಗೆ ಮುಖದ ಮೇಲೆ ಇರಿಸಿ. ನಂತರ ಅದನ್ನು ತಣ್ಣೀರಿನಿಂದ ತೊಳೆಯಿರಿ.

ಸೋರಿಯಾಸಿಸ್ ಸಮಸ್ಯೆಗೆ:
ಸೋರಿಯಾಸಿಸ್ ಎನ್ನುವುದು ಹೆಚ್ಚಿನ ಜನರನ್ನು ಕಾಡುವ ಚರ್ಮ ಸಮಸ್ಯೆಗಳಲ್ಲಿ ಒಂದಾಗಿದೆ. ಇಂತಹ ಸಮಸ್ಯೆ ನಿವಾರಿಸುವಲ್ಲೂ ಬೆಂಡೆಕಾಯಿ ಸಹಾಯ ಮಾಡುವುದು. ಅದಕ್ಕಾಗಿ ತಾಜಾ ಬೆಂಡೆಕಾಯಿಯನ್ನು ಬಳಸಿ ಪೇಸ್ಟ್ ತಯಾರಿಸಿ. ಅವುಗಳನ್ನು ಸೋರಿಯಾಸಿಸ್ ಆದ ಜಾಗದಲ್ಲಿ ಹಚ್ಚಿ. ಇದನ್ನು ಇತರ ಚರ್ಮ ಸಮಸ್ಯೆಯಿಂದ ಬಳಲುತ್ತಿರುವವರು ಸಹ ಪ್ರಯತ್ನಿಸಬಹುದು. ನೀವು ಚರ್ಮದ ಮೇಲೆ ಈ ಪೇಸ್ಟ ಹಚ್ಚಿಕೊಂಡಾಗ ನಿಮ್ಮ ಚರ್ಮವು ಬೆಂಡಕಾಯಿಯಲ್ಲಿರುವ ಓಕ್ರಾ ಜೆಲ್ ಅನ್ನು ಹೀರಿಕೊಳ್ಳುತ್ತದೆ ಮತ್ತು ಆ ಪ್ರದೇಶದ ಮೇಲೆ ತೆಳುವಾದ ಪದರವನ್ನು ಬಿಡುತ್ತದೆ. ಈ ಪ್ಯಾಕ್ ಒಣಗಿಸಿ, ನಂತರ ತೊಳೆಯಿರಿ.
(Kannada Copy of Boldsky Kannada)
01-06-26 09:44 pm
HK News Staffer
ಫೈನಲ್ ಸೋಲಿನ ಬೆನ್ನಲ್ಲೇ ಜಿಟಿಗೆ ಮತ್ತೊಂದು ಶಾಕ್...
01-06-26 11:31 am
ದೇಶದ ಸಿರಿವಂತ ಸಿಎಂ ಆಗಲಿದ್ದಾರೆ 'ಕನಕಪುರ ಬಂಡೆ' ಡಿ...
31-05-26 09:23 pm
ಜೂನ್ 3ರಂದು 24ನೇ ಮುಖ್ಯಮಂತ್ರಿಯಾಗಿ ಡಿಕೆಶಿ ಪ್ರಮಾಣ...
30-05-26 06:45 pm
ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸರ್ಪ್ರೈಸ್ ಟ್ವಿಸ್ಟ್ ;...
30-05-26 01:14 pm
31-05-26 09:25 pm
HK News Staffer
ಸೌದಿ ಜೈಲಿನಲ್ಲಿ ಎರಡು ದಶಕಗಳ ಅಗ್ನಿಪರೀಕ್ಷೆ; 34 ಕೋ...
29-05-26 06:17 pm
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
01-06-26 07:05 pm
HK News Staffer
ಬೆಂಗಳೂರು–ಮಂಗಳೂರು ವಂದೇ ಭಾರತ್ ಟ್ರಯಲ್ಗೆ ಬ್ರೇಕ್...
01-06-26 02:22 pm
Bengaluru Mangaluru Vande Bharat: ಬೆಂಗಳೂರು–ಮಂ...
31-05-26 03:40 pm
ತಣ್ಣೀರುಬಾವಿ ಇಕೋ ಬೀಚ್ನಲ್ಲಿ ರಾಷ್ಟ್ರ ಮಟ್ಟದ ಸರ್ಫ...
30-05-26 09:52 pm
Mangalore News, Traffic: ಹೆದ್ದಾರಿ ಅಪಘಾತ ತಡೆಗೆ...
30-05-26 08:06 pm
01-06-26 08:16 pm
HK News Staffer
ಪಿಲಾತಬೆಟ್ಟು ; ದೈವಕ್ಕೆ ತಂಬಿಲ ಮಾಡ್ತಿದ್ದಾಗಲೇ ಕುಡ...
01-06-26 12:40 pm
ನಾಲ್ಕು ಪುಟಗಳ ಡೆತ್ನೋಟ್ ಬರೆದಿಟ್ಟು ಲಾಡ್ಜ್ನಲ್ಲಿ...
31-05-26 08:25 pm
ಬೀದಿ ಬದಿ ವ್ಯಾಪಾರಿಗೆ ನಿಂದಿಸಿ ವಿಡಿಯೋ ವೈರಲ್ ; ಸಾ...
31-05-26 05:06 pm
ಸತ್ಯನಾರಾಯಣ ಪೂಜೆ ಮುಗಿಸಿ ನದಿಗೆ ಇಳಿದವರು ಜಲಸಮಾಧಿ...
31-05-26 02:24 pm