ಬ್ರೇಕಿಂಗ್ ನ್ಯೂಸ್
03-07-21 02:36 pm Reena TK, BoldSky Kannada ಡಾಕ್ಟರ್ಸ್ ನೋಟ್
ಮಗು ಜನಿಸಿದ ಆರು ತಿಂಗಳವರೆಗೆ ಎದೆ ಹಾಲು ಬಿಟ್ಟು ಬೇರೇನೂ ಕೊಡಬೇಡಿ ಎಂದು ಮಕ್ಕಳ ತಜ್ಞರು ಸೂಚಿಸುತ್ತಾರೆ. ಎದೆ ಹಾಲು ಕಡಿಮೆ ಇದ್ದರೆ ಲ್ಯಾಕ್ಟೋಜಿನ್ ಅಥವಾ ಫಾರ್ಮೂಲಾ ಮಿಲ್ಕ್ ನೀಡುವಂತೆ ಸೂಚಿಸುತ್ತಾರೆ.

ಇನ್ನು ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೆ ಅಂದ್ರೆ ಆರು ತಿಂಗಳು ಕಳೆದ ಮೇಲೆ ಉದ್ಯೋಗಸ್ಥೆ ತಾಯಿಯಾದರೆ ಮಗುವನ್ನು ಬಿಟ್ಟು ಕೆಲಸಕ್ಕೆ ಹೋಗುವ ಅನಿವಾರ್ಯತೆ ಎದುರಾಗುವುದು. ಆದರೆ ಮಗು ಬಾಟಲಿಗೆ ಅಭ್ಯಾಸವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ಒಮ್ಮೆ ಮಕ್ಕಳು ಬಾಟಲಿಗೆ ಅಭ್ಯಾಸವಾದರೆ ಮತ್ತೆ ಎದೆ ಹಾಲು ಕುಡಿಯಲು ಹಿಂದೇಟು ಹಾಕುತ್ತಾರೆ, ನನ್ನ ಮಗು ಎದೆ ಹಾಲುಕುಡಿಯಲು ಇಷ್ಟಪಡುತ್ತಿಲ್ಲ ಎಂದು ಎಷ್ಟೋ ತಾಯಂದಿರು ಹೇಳುತ್ತಾರೆ. ಏಕೆ ಮಗು ಹಾಲು ಕುಡಿಯುತ್ತಿಲ್ಲ? ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ನಿಪ್ಪಲ್ ಕನ್ಫ್ಯೂಷನ್ ಎಂದು ಕರೆಯಲಾಗುವುದು.

ನಿಪ್ಪಲ್ ಕನ್ಫ್ಯೂಷನ್ ಎಂದರೇನು?
ಸ್ತನ ಹಾಲು ಕುಡಿಯುವಾಗ ಮಗು ಸ್ವಲ್ಪ ಎಳೆದು ಕುಡಿಯಬೇಕಾಗುತ್ತದೆ. ಆದರೆ ಬಾಟಲಿ ಹಾಲು ಬಾಯಿಗೆ ಇಟ್ಟರೆ ಸುಲಭವಾಗಿ ಹಾಲು ಸಿಗುವುದರಿಂದ ಮಕ್ಕಳು ಬಾಟಲಿ ಹಾಲನ್ನೇ ಕುಡಿಯಲು ಇಷ್ಟಪಡುತ್ತಾರೆ. ಅಲ್ಲದೆ ಬಾಟಲಿ ಅಭ್ಯಾಸವಾದ ಮೇಲೆ ಮೊಲೆ ತೊಟ್ಟಿಗೆ ಬಾಯಿ ಹಾಕಿದಾಗ ಮಗುವಿಗೆ ಸ್ತನ ತೊಟ್ಟಿನ ಗಾತ್ರ ಬಾಟಲ್ ನಿಪ್ಪಲ್‌ಗಿಂತ ಕಡಿಮೆ ಇರುವುದರಿಂದ ಗೊಂದಲ ಉಂಟಾಗುತ್ತದೆ, ಆದ್ದರಿಂದ ಎದೆ ಹಾಲು ಕುಡಿಯಲು ನಿರಾಕರಿಸುತ್ತವೆ.

ಮಗುವಿಗೆ ನೀಡುವ ಬಾಟಲ್ ನಿಪ್ಪಲ್ ಗಾತ್ರ ನೋಡಿ
ಮಗುವಿಗೆ ಬಾಟಲಿ ಹಾಲು ಕೊಡುವಾಗ ಅದರ ನಿಪ್ಪಲ್ ರಂಧ್ರ ತುಂಬಾ ದೊಡ್ಡದು ಬೇಡ, ಸ್ವಲ್ಪ ಎಳೆದುಕೊಂಡು ಕುಡಿಯುವಂತೆ ಇರಲಿ, ಆಗ ಬಾಟಲಿ ಹಾಲು ಹಾಗೂ ಎದೆ ಹಾಲು ಎರಡಕ್ಕೂ ಅಭ್ಯಾಸ ಮಾಡುತ್ತವೆ.

ಬಾಟಲಿಗಿಂತ ಸ್ಪೂನ್ ಅಭ್ಯಾಸ ಮಾಡಿಸಿ
ಮಕ್ಕಳ ತಜ್ಞರು ಮಕ್ಕಳಿಗೆ ಬಾಟಲಿನಲ್ಲಿ ಹಾಲು ಅಥವಾ ನೀರು ಕೊಡುವುದನ್ನು ಪ್ರೋತ್ಸಾಹಿಸುವುದಿಲ್ಲ. ಲೋಟದಲ್ಲಿ ತೆಗೆದು ಸ್ಪೂನ್‌ನಲ್ಲಿ ಕುಡಿಸುವಂತೆಯೇ ಸೂಚಿಸುತ್ತಾರೆ. ಆಗಷ್ಟೇ ಜನಿಸಿದ ಮಗುವಿಗೆ ಫಾರ್ಮೂಲಾ ಹಾಲು ಕೊಡುವುದಾದರೆ ಸ್ಪೂನ್‌ನಲ್ಲಿಯೇ ಕುಡಿಸುವಂತೆ ಸೂಚಿಸುತ್ತಾರೆ. ಮಗುವಿಗೆ ಸ್ಪೂನ್‌ನಲ್ಲಿ ಕುಡಿಸುವ ಅಭ್ಯಾಸ ಮಾಡಿದರೆ ಈ ರೀತಿಯ ನಿಪ್ಪಲ್ ಕನ್ಫ್ಯೂಷನ್ ಇರಲ್ಲ. ಮಗು ಎದೆ ಹಾಲು ಕುಡಿಯಲು ತುಂಬಾ ಆಸಕ್ತಿಯನ್ನು ತೋರಿಸುತ್ತಾರೆ ಕೂಡ.

ಮಗುವಿನ ಆರೋಗ್ಯದ ದೃಷ್ಟಿಯಿಂದ ಕೂಡ ಸ್ಪೂನ್‌ನಲ್ಲಿ ನೀಡುವುದು ಒಳ್ಳೆಯದು
ಬಾಟಲಿನಲ್ಲಿ ಕೊಡುವವರು ಬಾಟಲಿ ಶುಚಿತ್ವದ ಕಡೆ ತುಂಬಾನೇ ಗಮನ ನೀಡಬೇಕು, ಇಲ್ಲದಿದ್ದರೆ ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದೇ ಲೋಟ ಹಾಗೂ ಸ್ಪೂನ್ ಬಳಸುವುದಾದರೆ ಶುಚಿ ಮಾಡುವುದು ಸುಲಭ, ಅಲ್ಲದೆ 9-10 ತಿಂಗಳು ತುಂಬುವಷ್ಟರಲ್ಲಿ ಲೋಟದಲ್ಲಿಯೇ ಕುಡಿಯುವ ಅಭ್ಯಾಸ ಕೂಡ ರೂಢಿಸಿಕೊಂಡು ಬಿಡುತ್ತಾರೆ. ಇದರಿಂದ ಪೋಷಕರಿಗೆ ಹೊರಗಡೆ ಕರಕ್ಕೊಂಡು ಹೋಗುವ ತುಂಬಾನೇ ಅನುಕೂಲವಾಗುವುದು.
(Kannada Copy of Boldsky Kannada)
30-08-26 10:09 pm
HK News Desk
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
ಬಿಜೆಪಿ ಸಂಸದೀಯ ಮಂಡಳಿ ಸಭೆಯಿಂದ ಯಡಿಯೂರಪ್ಪ ಹೊರಕ್ಕೆ...
29-08-26 10:49 pm
‘ದಬ್ಬಾಳಿಕೆ ಮಾಡಲಿ, ರಿಪೇರಿ ಮಾಡೋದು ನಂಗೆ ಗೊತ್ತಿದೆ...
29-08-26 10:47 pm
30-08-26 02:41 pm
HK News Staffer
ನೇಪಾಳದಲ್ಲಿ ಪ್ರಕೃತಿಯ ರೌದ್ರಾವತಾರ ; ಪ್ರವಾಹಕ್ಕೆ 6...
29-08-26 10:25 pm
ನೇಪಾಳ ಪ್ರವಾಹದ ಬಳಿಕ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್...
29-08-26 03:36 pm
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
31-08-26 12:01 pm
HK News Staffer
ವೈಟ್ ಫೀಲ್ಡ್ ಬೇಡ, ಡಾರ್ಕ್ ಫೀಲ್ಡ್ ಮಾಡ್ರೀ..! ಎತ್ತ...
31-08-26 09:51 am
ಸರ್ಕಾರಿ ನಿವೇಶನ ಸಿಗದ ನೋವು, ವಿವಾದದ ಕಾವು ; ಇಬ್ಬರ...
29-08-26 01:02 pm
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm