ಬ್ರೇಕಿಂಗ್ ನ್ಯೂಸ್
23-06-21 02:19 pm Shreeraksha, BoldSky Kannada ಡಾಕ್ಟರ್ಸ್ ನೋಟ್
ರಸಭರಿತವಾದ ಹಣ್ಣುಗಳು ನಮ್ಮ ದೇಹಕ್ಕೆ ಎಲ್ಲ ರೀತಿಯಲ್ಲೂ ಪ್ರಯೋಜನಕಾರಿ. ಅವು ನಮ್ಮನ್ನು ಹೈಡ್ರೀಕರಿಸುವುಲ್ಲದೇ, ನಮಗೆ ದೈನಂದಿನ ಜೀವನದಲ್ಲಿ ಅಗತ್ಯವಾದ ನೀರಿನಾಂಶವನ್ನು ಪಡೆಯಲು ಸಹಾಯ ಮಾಡುತ್ತವೆ. ಜೊತೆಗೆ ಹಣ್ಣುಗಳ ಸೇವನೆಯಿಂದ ತ್ವಚೆಯೂ ಹೊಳೆಯಲು ಸಹಾಯವಾಗುವುದು. ಅಂತಹ ಹಣ್ಣುಗಳಲ್ಲಿ ಒಂದು ಲಿಚಿ. ಸಾವಿರಾರು ವರ್ಷಗಳ ಹಿಂದೆ ವಿಯೆಟ್ನಾಂನಲ್ಲಿ ಮೊದಲು ಬೆಳೆಸಿದ ರಾಯಲ್ ಹಣ್ಣು ಅದ್ಭುತ ಸೌಂದರ್ಯ ಪ್ರಯೋಜನಗಳನ್ನು ಹೊಂದಿದೆ.
1. ವಯಸ್ಸಾಗುವಿಕೆಯ ಲಕ್ಷಣ ಕಡಿಮೆ ಮಾಡಲು:
ಲಿಚ್ಚಿಯಲ್ಲಿರುವ ವಿಟಮಿನ್ ಮತ್ತು ಉತ್ಕರ್ಷಣ ನಿರೋಧಕಗಳು ವಯಸ್ಸಾದಂತೆ ಬರುವ ಚಿಹ್ನೆಗಳನ್ನು ವಿಳಂಬಗೊಳಿಸಲು ಸಹಾಯ ಮಾಡುತ್ತದೆ. ನಿಮಗೆ ವಯಸ್ಸಾದಂತೆ, ನಿಮ್ಮ ದೇಹವು ಆಮೂಲಾಗ್ರಗಳನ್ನು ಉತ್ಪಾದಿಸುತ್ತದೆ. ಆದರೆ ಅದರ ಪರಿಣಾಮಕಾರಿ ಗುಣಲಕ್ಷಣಗಳನ್ನು ಹೊಂದಿರುವ ಲಿಚಿ ಈ ರಾಡಿಕಲ್ಗಳಿಂದ ನಿಮ್ಮ ಚರ್ಮಕ್ಕೆ ಹಾನಿಯಾಗದಂತೆ ತಡೆಯಬಹುದು. ಬಳಸುವ ವಿಧಾನ: ಮ್ಯಾಶ್ ಮಾಡಿದ ¼ ಮಾಗಿದ ಬಾಳೆಹಣ್ಣನ್ನು, 3-4 ಸಿಪ್ಪೆ ಸುಲಿದ ಲಿಚಿಗಳೊಂದಿಗೆ ಸೇರಿಸಿ, ನಯವಾದ ಪೇಸ್ಟ್ ತಯಾರಿಸಿ. ನಂತರ ಅದನ್ನು ಫೇಸ್ ಪ್ಯಾಕ್ ಆಗಿ ಹಚ್ಚಿಕೊಳ್ಳಿ. 15 ನಿಮಿಷಗಳ ಕಾಲ ಬಿಟ್ಟು ತಣ್ಣೀರನ್ನು ಬಳಸಿ ತೊಳೆಯಿರಿ.

2. ಕಲೆಗಳನ್ನು ತೆಗೆದುಹಾಕಲು:
ಬ್ಲ್ಯಾಕ್ ಹೆಡ್ಸ್ ಅಥವಾ ಮೊಡವೆಗಳ ಕಲೆಗಳಿಲ್ಲದ ತ್ವಚೆ ಪಡೆಯಬೇಕೇಂಬುದು ಪ್ರತಿಯೊಬ್ಬರ ಆಸೆ. ಈ ದೋಷರಹಿತ ತ್ವಚೆಯನ್ನು ಪಡೆಯಲು ಲಿಚಿ ಜ್ಯೂಸ್ ನಿಮಗೆ ಸಹಾಯ ಮಾಡುವುದು. ಲಿಚಿಗಳಲ್ಲಿರುವ ವಿಟಮಿನ್ ಸಿ ಹೈಪರ್ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಳಸುವ ವಿಧಾನ: ಹತ್ತಿ ಉಂಡೆಗಳನ್ನು ಹಿಸುಕಿದ ಲಿಚಿ ಪೇಸ್ಟ್ನಲ್ಲಿ ಅದ್ದಿ, ಕಲೆಗಳಿರುವ ಜಾಗದಲ್ಲಿ ಹಚ್ಚಿ. 15-20 ನಿಮಿಷಗಳ ಕಾಲ ಬಿಟ್ಟು, ತಣ್ಣನೆಯ ಬಟ್ಟೆಯನ್ನು ಬಳಸಿ ತೊಳೆಯಿರಿ.

3. ಸನ್ ಬರ್ನ್ ತಡೆಯಲು:
ಬಿಸಿಲಿನಿಂದ ಉಂಟಾದ ಗುಳ್ಳೆಗಳು ಮತ್ತು ಕೆಂಪು ಬಣ್ಣವನ್ನು ತಡೆಯುವಲ್ಲಿ ಲಿಚಿ ಉತ್ತಮವಾಗಿ ಕಾರ್ಯನಿರ್ವಹಿಸುವುದು. ಲಿಚಿಯಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು, ಕಿರಿಕಿರಿಯುಂಟುಮಾಡುವ ಚರ್ಮವನ್ನು ತಂಪಾಗಿಸಲು ಮತ್ತು ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಬಳಸುವ ವಿಧಾನ: ವಿಟಮಿನ್ ಇ ಕ್ಯಾಪ್ಸುಲ್ ಮತ್ತು ಲಿಚಿ ಜ್ಯೂಸ್ ಅಥವಾ ರಸದೊಂದಿಗೆ ಬೆರೆಸಿ, ಆ ಪ್ರದೇಶಕ್ಕೆ ಹಚ್ಚಿ. ಇದನ್ನು 30 ನಿಮಿಷಗಳ ಕಾಲ ಬಿಟ್ಟು ತೊಳೆಯುವುದರಿಂದ ಸನ್ ಬರ್ನ್ ನಿಂದಾದ ಗುಳ್ಳೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

4. ಎಣ್ಣೆಯುಕ್ತ ತ್ವಚೆಯನ್ನು ತಡೆಯಲು:
ಎಣ್ಣೆಯುಕ್ತ ಚರ್ಮವು ನಿಮ್ಮ ರಂಧ್ರಗಳನ್ನು ಮುಚ್ಚಿಹಾಕುತ್ತದೆ, ಅದು ಬ್ರೇಕೌಟ್ಸ್ ಮತ್ತು ಮೊಡವೆಗಳಿಗೆ ಕಾರಣವಾಗಬಹುದು ಆದರೆ ಲಿಚಿಯಲ್ಲಿರುವ ಖನಿಜಗಳಿಂದ ನೀವು ಮೊಡವೆ ಮುಕ್ತ ಮತ್ತು ನಯವಾದ ತ್ವಚೆಯನ್ನು ಪಡೆಯಬಹುದು. ಬಸುವ ವಿಧಾನ: ಫೇಸ್ ಪ್ಯಾಕ್ಗಾಗಿ ಸಮಾನ ಪ್ರಮಾಣದ ಲಿಚಿ ರಸ ಮತ್ತು ರೋಸ್ ವಾಟರ್ ಅನ್ನು ಒಟ್ಟಿಗೆ ಬೆರೆಸಿ, ಹತ್ತಿ ಉಂಡೆಯನ್ನು ಬಳಸಿ ಮುಖಕ್ಕೆ ಹಚ್ಚಿ. 20-30 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ.

5. ನೈಸರ್ಗಿಕ ಕೂದಲಿನ ಬೆಳವಣಿಗೆ:
ಲಿಚಿಯು ತಾಮ್ರದ ಅದ್ಭುತ ಮೂಲವಾಗಿದ್ದು, ಕೂದಲು ಕಿರುಚೀಲಗಳು ಹಾಗೂ ನೆತ್ತಿಯನ್ನು ಪೋಷಿಸಲು ಜೊತೆಗೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಬಳಸುವ ವಿಧಾನ: 2 ಚಮಚ ಅಲೋವೆರಾ ಜೆಲ್ ಅನ್ನು ಲಿಚಿ ರಸದೊಂದಿದೆ ಸೇರಿಸಿ ಮಿಶ್ರಣ ಮಾಡಿ. ಇದನ್ನ ನಿಮ್ಮ ನೆತ್ತಿಗೆ ಹಚ್ಚಿ ಮಸಾಜ್ ಮಾಡಿ. ಸುಮಾರು ಒಂದು ಗಂಟೆ ಬಿಟ್ಟು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.
(Kannada Copy of Boldsky Kannada)
28-10-26 10:52 pm
HK News Desk
ವಿಧಾನ ಪರಿಷತ್ತಿನ ನಾಲ್ಕು ಸ್ಥಾನಕ್ಕೆ ಚುನಾವಣೆ ; ನಾ...
27-10-26 09:47 pm
ಅರಮನೆ ಮಂಡಳಿ ಸರಕಾರದ್ದು, ಅರಮನೆ ಜಾಗವೂ ಸರಕಾರದ್ದು...
27-10-26 01:23 pm
ದೇವೇಗೌಡ್ರ ಕುಟುಂಬವನ್ನು ಮುಗಿಸಲು ಡಿಕೆಶಿಯಿಂದ 600...
26-10-26 11:55 am
Rahul Gandhi, Siddaramaiah: ಸ್ಟಿಂಗ್ ಆಪರೇಶನ್ ;...
26-10-26 11:53 am
25-10-26 09:40 pm
HK News Staffer
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
28-10-26 09:28 pm
HK News Desk
TIVA Investment Scam, Mangalore: ಮತ್ತೊಂದು ದೋಖ...
28-10-26 07:18 pm
ವೇದವ್ಯಾಸ ಕಾಮತರೇ ಮಂಗಳೂರಿನ ಅಭಿವೃದ್ಧಿಗೆ ನಿಮ್ಮ ಕೊ...
28-10-26 04:59 pm
ಉದಯೋನ್ಮುಖ ನಟಿ ವಿನುತಾ ನಾಯಕ್ ಹಠಾತ್ ಕುಸಿದು ಬಿದ್ದ...
28-10-26 11:53 am
CT Ravi, Mangalore, SIR: ನೇಪಾಳ ಮಾದರಿ ಅರಾಜಕತೆ...
27-10-26 10:52 pm
29-10-26 01:14 pm
HK News Staffer
Kedila Society, Keshav Gowda, Blackmail: ಮುಸ್...
29-10-26 12:14 pm
ಯುನೈಟೆಡ್ ನೇಶನ್ಸ್ ಹೈಕಮಿಷನರ್ ಹೆಸರಲ್ಲಿ ಫೋನ್ ಕರೆ...
28-10-26 10:42 pm
ಬ್ರಹ್ಮಾವರ ರೌಡಿಶೀಟರ್ ಕೊಲೆ ; ಸೋದರರಿಬ್ಬರ ಬಂಧನ, ಹ...
28-10-26 04:57 pm
ತಮಿಳುನಾಡು ಜೈಲಿನಿಂದ 17 ಕೈದಿಗಳ ಪರಾರಿ; 30 ವರ್ಷಗಳ...
28-10-26 10:28 am