ಬ್ರೇಕಿಂಗ್ ನ್ಯೂಸ್
18-06-21 02:28 pm Reena TK, BoldSky Kannada ಡಾಕ್ಟರ್ಸ್ ನೋಟ್
ಮಳೆಗಾಲ ತುಂಬಾ ಹಿತವಾದ ಕಾಲವಾಗಿದೆ, ಪ್ರಕೃತಿಯಲ್ಲಿ ಹಸಿರು ತುಂಬಿರುತ್ತದೆ. ಆರ್ದ್ರತೆ ವಾತಾವರಣ. ಸೌಂದರ್ಯದ ದೃಷ್ಟಿಯಿಂದ ನೋಡುವುದಾದರೆ ಈ ವಾತಾವರಣ ಮೊಡವೆ ಸಮಸ್ಯೆ ಇರುವವರಿಗೆ ಸ್ವಲ್ಪ ತೊಂದರೆಯನ್ನುಂಟು ಮಾಡಬಹುದು. ಹೌದು ಈ ಸಮಯದಲ್ಲಿ ತ್ವಚೆ ಆರೈಕೆ ಕಡೆ ಗಮನ ಹರಿಸದಿದ್ದರೆ ಮೊಡವೆ ಹೆಚ್ಚಾಗಬಹುದು.
ಮಳೆಗಾಲದಲ್ಲಿ ಮೊಡವೆ ಸಮಸ್ಯೆಗೆ ಕಾರಣ:
ಬೇಸಿಗೆಯ ಉಷ್ಣತೆಯ ಜೊತೆಗೆ ಮಳೆಗಾಲದ ಆರ್ದ್ರತೆ ಸೇರಿದಾಗ ತ್ವಚೆಯಲ್ಲಿ ಸೆಬಮ್ ಉತ್ಪತ್ತಿ ಹೆಚ್ಚಾಗಿ ಇದು ಮುಖದಲ್ಲಿ ಎಣ್ಣೆಯಂಶ ಹೆಚ್ಚಿಸುವುದು, ಎಣ್ಣೆ ತ್ವಚೆಯಲ್ಲಿ ಬ್ಯಾಕ್ಟಿರಿಯಾಗಳು ಕೂತಾಗ ಮೊಡವೆ ಬರುವುದು. ಕೆಲವರಿಗಂತೂ ಉಳಿದ ಎರಡು ಕಾಲದಲ್ಲಿ ಮೊಡವೆ ಸಮಸ್ಯೆ ಇರಲ್ಲ, ಮಳೆಗಾಲ ಬಂತೆಂದರೆ ಮೊಡವೆ ಬರುತ್ತದೆ, ಮೊಡವೆ ಮುಖದಲ್ಲಿ ಮಾತ್ರವಲ್ಲ ಕೈಗಳಲ್ಲಿ, ಬೆನ್ನಿನಲ್ಲಿ ಕುತ್ತಿಗೆ ಭಾಗದಲ್ಲಿ, ಬೆನ್ನಿನಲ್ಲಿ, ಹಿಂಬದಿಯಲ್ಲೂ ಕೂಡ ಕಂಡು ಬರುವುದು.
ಮೊಡವೆ ಹೋಗಲಾಡಿಸುವುದು ಹೇಗೆ?
ಮೊಡವೆ ಹೋಗಲಾಡಿಸಲು ಮೊದಲಿಗೆ ನಿಮ್ಮದು ಯಾವ ಬಗೆಯ ತ್ವಚೆಯೆಂದು ಅರಿಯಬೇಕು, ಇಲ್ಲದಿದ್ದರೆ ಅತೀ ಹೆಚ್ಚು ಕ್ಲೆನ್ಸ್ ಮಾಡುವುದರಿಂದ ಹೆಚ್ಚು ಸೆಬಮ್ ಉತ್ಪತ್ತಿ ಹೆಚ್ಚಿ ಮೊಡವೆ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಇಲ್ಲಿ ಮೊಡವೆ ಸಮಸ್ಯೆ ನಿವಾರಣೆಗೆ ಕೆಲವೊಂದು ಸರಳವಾದ ಟಿಪ್ಸ್ ನೀಡಿದ್ದೇವೆ ನೋಡಿ:

ಕಹಿ ಬೇವಿನ ಎಲೆ, ಎಣ್ಣೆ ಹಾಗೂ ಅದರ ಕಾಯಿ
* ಕಹಿ ಬೇವಿನ ಎಲೆಯನ್ನು ಅರಿದು ಪೇಸ್ಟ್ ಮಾಡಿ, ಅದಕ್ಕೆ ಸ್ವಲ್ಪ ಅರಿಶಿಣ ಪುಡಿ ಹಾಗೂ ಹಾಲು ಸೇರಿಸಿ ಮಿಶ್ರ ಮಾಡಿ, ಅದನ್ನು ಮುಖಕ್ಕೆ ಹಚ್ಚಬೇಕು. 10 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
* ಮತ್ತೊಂದು ವಿಧಾನವೆಂದರೆ ಕಹಿ ಬೇವಿನ ಎಣ್ಣೆಯನ್ನು ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆ ಜೊತೆ ಮಿಶ್ರ ಮಾಡಿ ಹಚ್ಚಿ. ಈ ರೀತಿ ಮಾಡುವುದರಿಂದ ಮೊಡವೆ ಕಡಿಮೆಯಾಗುವುದು.
* ಕಹಿ ಬೇವಿನ ಮರದ ಹಣ್ಣನ್ನು ಕಿತ್ತು ಅದರ ಒಳಭಾಗವನ್ನು ಮೊಡವೆ ಮೇಲೆ ಹಚ್ಚಿ, ಒಣಗಿದ ಮೇಲೆ ಬಿಸಿ ನೀರಿನಿಂದ ಮುಖ ತೊಳೆಯಿರಿ. ಈ ರೀತಿ ಪ್ರತಿದಿನ ಮಾಡಿ.

ತ್ವಚೆ ಸ್ವಚ್ಛತೆಗೆ
1 ಚಮಚ ಜೇನಿಗೆ 3 ಚಮಚ ಬ್ರೌನ್ ಶುಗರ್ ಹಾಕಿ ಮಿಶ್ರ ಮಾಡಿ ಅದರಿಂದ ಮುಖವನ್ನು ಸ್ಕ್ರಬ್ ಮಾಡಿ 15 ನಿಮಿಷ ಬಿಟ್ಟು ಮುಖ ತೊಳೆಯಿರಿ. ಇದರಿಂದ ಮುಖದಲ್ಲಿ ಯಾವುದೇ ಕೊಳೆಯಿಲ್ಲದೆ ಸ್ವಚ್ಛವಾಗಿರುತ್ತದೆ.
ಆಲೂಗಡ್ಡೆಯಿಂದ ತ್ವಚೆ ಆರೈಕೆ
ನೀವು ಮೊಡವೆ ಸಮಸ್ಯೆ ನಿವಾರಣೆಗೆ ಆಲೂಗಡ್ಡೆಯನ್ನು ಬಳಸಿ. ಆಲೂಗಡ್ಡೆಯನ್ನು ಕತ್ತರಿಸಿ, ಅದನ್ನು ಮೊಡವೆ ಮೇಲೆ ಮೆಲ್ಲನೆ ತಿಕ್ಕಿ, ನಂತರ ಆ ರಸ ಒಣಗಿದ ಮೇಲೆ ಮುಖ ತೊಳೆಯಿರಿ.

ಎಣ್ಣೆ ತ್ವಚೆಯೇ:
ನಿಮ್ಮದು ಸ್ವಾಭಾವಿಕವಾಗಿ ಎಣ್ಣೆ ತ್ವಚೆಯಾಗಿದ್ದರೆ ಮೇಲೆ ಹೇಳಿರುವ ವಿಧಾನದಲ್ಲಿ ಮುಖವನ್ನು ಕ್ಲೆನ್ಸ್ ಮಾಡಿದ ಬಳಿಕ ಆಸ್ಟ್ರಿನ್‌ಜೆಂಟ್ ಬಳಸಿ. ಇದು ತ್ವಚೆಯಲ್ಲಿನ ಎಣ್ಣೆಯಂಶ ತೆಗೆಯಲು ಸಹಕಾರಿ

ಸಾಕಷ್ಟು ನೀರು ಕುಡಿಯಿರಿ, ಮುಖವನ್ನು ತೊಳೆದು ಸ್ವಚ್ಛವಾಗಿಡಿ
ಮಳೆಗಾಲ ಬಂತೆಂದರೆ ದಾಹ ಆಗಲ್ಲ ಎಂದು ನೀರು ಕುಡಿಯುವುದನ್ನು ಕಡಿಮೆ ಮಾಡುತ್ತಾರೆ. ಇದು ಕೂಡ ತ್ವಚೆ ಕಾಂತಿ ಕುಗ್ಗಲು ಒಂದು ಕಾರಣವಾಗಿದೆ. ಮಳೆಗಾಲವಾದರೂ ಕೂಡ ನೀವು ದಿನಾ 8 ಲೋಟ ನೀರು ಕುಡಿಯಿರಿ. ತಣ್ಣೀರು ಕುಡಿದರೆ ಬೇಗನೆ ಸಾಕು ಅನಿಸುವುದು, ಅದಕ್ಕೆ ಈ ಸಮಯದಲ್ಲಿ ಬಿಸಿ ನೀರು ಕುಡಿಯಿರಿ.
ಅಲ್ಲದೆ ಮುಖವನ್ನು 3-4 ಬಾರಿ ತೊಳೆಯಿರಿ. ಹೀಗೆ ಮಾಡುವುದರಿಂದ ಮೊಡವೆ ಸಮಸ್ಯೆ ಕಡಿಮೆಯಾಗಿ ಆಕರ್ಷಕ ತ್ವಚೆ ಕಾಂತಿ ಪಡೆಯಬಹುದು.
(Kannada Copy of Boldsky Kannada)
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
15-07-26 10:44 pm
HK News Staffer
ಪ್ರಧಾನಿ ಮೋದಿ ನೇಮಿಸಿದ್ದ ಚೌಕಿದಾರರೇ ರಾಮನ ದೇಣಿಗೆ...
15-07-26 10:03 pm
ಬಾಂಗ್ಲಾನ್ನರು ಅನ್ನುವ ಶಂಕೆಯಿದ್ದರೆ ಪೊಲೀಸರಿಗೆ ತಿಳ...
15-07-26 09:03 pm
ಮಂಗಳೂರಿನಲ್ಲಿ ಯಾವ ಮಾಲ್ನಲ್ಲಿ ಎಷ್ಟೆಷ್ಟು ಬಾಂಗ್ಲಾದ...
15-07-26 05:32 pm
ಮುಸ್ಲಿಮೇತರ ಮಹಿಳೆಯನ್ನು ಮದುವೆಯಾಗುವುದು ಶರಿಯಾಕ್ಕೆ...
15-07-26 10:59 am
16-07-26 09:26 pm
HK News Staffer
BC Road Murder, Crime Mangalore: ಬಿಸಿ ರೋಡ್ ಬಸ...
16-07-26 07:25 pm
ದೆಹಲಿಯಿಂದ ಕಾರಿನಲ್ಲಿ 5 ಕೋಟಿ ಮೌಲ್ಯದ ಎಂಡಿಎಂಎ ಡ್ರ...
16-07-26 05:10 pm
ಗುರುವಾಯನಕೆರೆ ವಿದ್ಯುತ್ ಸಬ್ ಸ್ಟೇಶನ್ ಬಳಿ ಶವ ಪತ್ತ...
16-07-26 02:29 pm
ಬೃಹತ್ ಖೋಟಾ ನೋಟು ಜಾಲ ಬಯಲಿಗೆ ; ಉಪ್ಪಿನಂಗಡಿ ಬಳಿ ಫ...
16-07-26 02:02 pm