ಬ್ರೇಕಿಂಗ್ ನ್ಯೂಸ್
17-04-21 06:36 pm source: BOLDSKY ಡಾಕ್ಟರ್ಸ್ ನೋಟ್
ಧೂಳಿನ ಅಲರ್ಜಿ, ರಾಸಾಯನಿಕಗಳಿಂದ ಸೈನಸ್ ಸೋಂಕು ಉಂಟಾಗುತ್ತದೆ. ನಿಮ್ಮ ಮೂಗಿನ ಹೊಳ್ಳೆಯು ಊತ ಮತ್ತು ಸೋಂಕಿಗೆ ಒಳಗಾದಾಗ ಅದು ಸಂಭವಿಸುತ್ತದೆ. ತಲೆನೋವು, ಕಿವಿನೋವು, ಹಲ್ಲುನೋವು, ಜ್ವರ, ಗಂಟಲು ನೋವು, ಉಸಿರುಕಟ್ಟುವಿಕೆ ಮತ್ತು ಕೆಮ್ಮು ಇವುಗಳು ಸೈನಸ್ ನ ಸಾಮಾನ್ಯ ಲಕ್ಷಣಗಳಾಗಿವೆ. ದೈಹಿಕ ಪರೀಕ್ಷೆಯ ಮೂಲಕ ಮಾತ್ರ ಇದನ್ನು ಕಂಡುಹಿಡಿಯಬಹುದು. ಆದ್ದರಿಂದ, ನೀವು ಮೇಲಿನ ಯಾವುದೇ ರೋಗಲಕ್ಷಣಗಳನ್ನು ಎದುರಿಸುತ್ತಿದ್ದರೆ, ನೀವು ನಿಮ್ಮ ವೈದ್ಯರನ್ನು ಭೇಟಿ ಮಾಡಬೇಕು.
ಸೈನಸ್ ಸಮಸ್ಯೆಗೆ ತ್ವರಿತ ಪರಿಹಾರವನ್ನು ನೀಡುವ ಕೆಲವು ಮನೆಮದ್ದುಗಳಿವೆ. ಆದರೆ ಮೊದಲು, ನಿಮ್ಮ ಸೈನಸ್ ಅನ್ನು ಪ್ರಚೋದಿಸುವ ವಸ್ತುಗಳನ್ನು ದೂರವಿಡಬೇಕು. ಉದಾಹರಣೆಗೆ, ಹುರಿದ ಆಹಾರ, ಅಕ್ಕಿ ಮತ್ತು ಮಸಾಲೆಗಳು ನಿಮ್ಮ ಸೈನಸ್ ರೋಗಲಕ್ಷಣಗಳನ್ನು ಪ್ರಚೋದಿಸಬಹುದು. ಕೋಲ್ಡ್ ಪಾನೀಯಗಳು ಸೈನಸ್‌ಗೆ ಸಮಸ್ಯೆಯಾಗಬಹುದು. ಉತ್ತಮ ಪ್ರಮಾಣದ ವಿಟಮಿನ್ ಎ ಸೇವಿಸುವುದರಿಂದ ಸೈನಸ್ ಸೋಂಕಿನ ವಿರುದ್ಧ ಬಲವಾದ ರಕ್ಷಣೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
ನೀವು ನಿಮ್ಮ ವೈದ್ಯರ ಬಳಿಗೆ ಹೋಗುವ ಮೊದಲು, ಪ್ರಯತ್ನಿಸಬಹುದಾದ ಐದು ಸುಲಭ ಮನೆಮದ್ದುಗಳು ಇಲ್ಲಿವೆ.

ಸಾಕಷ್ಟು ನೀರು ಕುಡಿಯಿರಿ:
ನಿಮ್ಮನ್ನು ಹೈಡ್ರೀಕರಿಸುವುದರಿಂದ ನಿರ್ಜಲೀಕರಣ ದೂರವಾಗುತ್ತದೆ. ಸೈನಸ್ ನೋವಿನಿಂದ ಪರಿಹಾರ ಪಡೆಯಲು ಹೆಚ್ಚೆಚ್ಚು ನೀರು ಅಥವಾ ನೀರಿನಾಂಶ ಇರುವ ದ್ರವಗಳನ್ನ ಸೇವಿಸಬೇಕು. ಇದು ಲೋಳೆಯನ್ನು ತೆಳುವಾಗಿಸುವುದರ ಮೂಲಕ ನಿಮ್ಮ ಮೂಗಿನ ಹೊಳ್ಳೆಯನ್ನು ಸರಿಮಾಡುತ್ತದೆ. ಆದ್ದರಿಂದ ಆದಷ್ಟು ನೀರನ್ನು ಕುಡಿಯಿರಿ.

ಶಾಖ ತೆಗೆದುಕೊಳ್ಳಿ:
ಕಟ್ಟಿದ ಮೂಗಿನ ಮಾರ್ಗವನ್ನು ಸ್ವಚ್ಛಗೊಳಿಸಲು ಶಾಖವು ಸಹಾಯ ಮಾಡುತ್ತದೆ. ನಿಮ್ಮಲ್ಲಿ ಸ್ಟೀಮರ್ ಇಲ್ಲದಿದ್ದರೆ, ಸ್ವಲ್ಪ ನೀರು ಕುದಿಸಿ, ಟವೆಲ್ ತೆಗೆದುಕೊಂಡು, ನೀರಿನಲ್ಲಿ ಸ್ವಲ್ಪ ಪುದೀನನ್ನು ಸೇರಿಸಿ. ಈ ಪುದೀನ ನೀರಿನಿಂದ ಶಾಖ ತೆಗೆದುಕೊಳ್ಳುವುದರಿಂದ ಸೈನಸ್‌ನಿಂದ ಉಂಟಾಗುವ ನೋವು ಮತ್ತು ಕಿರಿಕಿರಿಯಿಂದ ನಿಮಗೆ ಪರಿಹಾರ ಸಿಗುತ್ತದೆ.

ಸೂಪ್ ಮಾಡಿ ಕುಡಿಯಿರಿ:
ಬಿಸಿ ಸೂಪ್ ಕಟ್ಟಿದ ಮೂಗನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ರುಚಿಗೆ ಅನುಗುಣವಾಗಿ ನೀವು ಇಷ್ಟಪಡುವ ಯಾವುದೇ ಸೂಪ್ ಅನ್ನು ನೀವು ಆಯ್ಕೆ ಮಾಡಬಹುದು. ಸೂಪ್ ಮತ್ತು ಅದರಲ್ಲಿರುವ ಆರೋಗ್ಯಕರ ಪದಾರ್ಥಗಳಿಂದ ಬರುವ ಶಾಖ ನಿಮ್ಮ ಸೈನಸ್ ಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ.

ನಿಮ್ಮ ಮೂಗಿನ ಹೊಳ್ಳೆಯನ್ನು ಫ್ಲಶ್ ಮಾಡಿ:
ಈ ಪ್ರಕ್ರಿಯೆಯನ್ನು ಮೂಗಿನ ನೀರಾವರಿ ಎಂದೂ ಕರೆಯುತ್ತಾರೆ. ಈ ಪ್ರಕ್ರಿಯೆಯಲ್ಲಿ, ದ್ರಾವಣವನ್ನು ಒಂದು ಮೂಗಿನ ಹೊಳ್ಳೆಯಿಂದ ಹಾಕಿ, ಮತ್ತೊಂದು ಹೊಳ್ಳೆಯಿಂದ ಹೊರಬರುವಂತೆ ಮಾಡಬೇಕು. ಇದು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಕಟ್ಟಿದ ಮೂಗಿನಿಂದ ಪರಿಹಾರ ನೀಡಲು ಈ ಪ್ರಕ್ರಿಯೆಯು ಸಹಾಯ ಮಾಡುತ್ತದೆ.

ಆಪಲ್ ಸೈಡರ್ ವಿನೆಗರ್:
ಆಪಲ್ ಸೈಡರ್ ವಿನೆಗರ್ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಸೈನಸ್ ನೋವನ್ನು ತೊಡೆದುಹಾಕುವುದು ಅವುಗಳಲ್ಲಿ ಒಂದು. ಸೈನಸ್ ನೋವಿನಿಂದ ಪರಿಹಾರ ಪಡೆಯಲು ಸ್ವಲ್ಪ ಆಪಲ್ ಸೈಡರ್ ವಿನೆಗರ್ ಅನ್ನು ಬೆಚ್ಚಗಿನ ನೀರು ಅಥವಾ ಚಹಾದೊಂದಿಗೆ ಸೇವಿಸಿ.
This News Article Is A Copy Of BOLDSKY
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm